ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ; ಮನೆಗಳಿಗೆ ನುಗ್ಗಿದ ನೀರು; ಬೆಳೆ ಹಾನಿಗೆ ರೈತ ಕಂಗಾಲು

ಇನ್ನೇನು ಮಳೆ ಕಡಿಮೆಯಾಗಿ ಮತ್ತೊಮ್ಮೆ ಹೊಸದಾಗಿ ಬಿತ್ತನೆ ಮಾಡಿ ಫಸಲು ಕೈಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣ ಮತ್ತೊಮ್ಮೆ ಆಘಾತ ನೀಡಿದ್ದಾನೆ. ಬೆಳೆದ ಬೆಳೆ ಕೈಗೆ ಸಿಗುವ ಹೊತ್ತಿಗೆ ಮಳೆಯ ಅಬ್ಬರಕ್ಕೆ ಗದ್ದೆಗಳಲ್ಲಿ ನೀರು ನಿಂತು, ಇದ್ದ ಬೆಳೆ ಕೂಡ ನೀರಿನಲ್ಲಿ ಕೊಳೆತು ಹೋಗಿದೆ.

ಮನೆಗಳಿಗೆ ನೀರು ನುಗ್ಗಿರುವ ದೃಶ್ತ

ಮನೆಗಳಿಗೆ ನೀರು ನುಗ್ಗಿರುವ ದೃಶ್ತ

  • Share this:
ಚಿಕ್ಕೋಡಿ(ಅ.16): ಪ್ರವಾಹದಿಂದ ತತ್ತರಿಸಿದ್ದ ಜನ ನಿಟ್ಟುಸಿರು ಬಿಡುವ ಮುನ್ನವೇ ಮತ್ತೆ ಪ್ರವಾಹದ ಛಾಯೆ ಆವರಿಸಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣಾ ಹಾಗೂ ಉಪ ನದಿಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಒಂದು ವರ್ಷದ ಹಿಂದಷ್ಟೇ ರೌದ್ರ ನರ್ತನ ತೋರಿದ್ದ ಕೃಷ್ಣೆ, ಕೃಷ್ಣೆಯ ಪ್ರವಾಹಕ್ಕೆ ಸಿಲುಕಿ ಮನೆ ಜಾನುವಾರಗಳನ್ನ ಕಳೆದುಕೊಂಡಿದ್ದ ಸಾವಿರಾರು ಕುಟುಂಗಳು, ಪ್ರವಾಹ ತಗ್ಗಿ ಇನ್ನೇನು ನಿಟ್ಟುಸಿರು ಬಿಡುವ ಹೊತ್ತಿಗೆ  ಈಗ ಮತ್ತೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿತಾ ಇದೆ. ರಾಜ್ಯದ ದೂದಗಂಗಾ ವರೆದಗಂಗಾ ಹಾಗೂ ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ  3 ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಜನ ಸುತ್ತುವರೆದು ಸಂಚಾರ ನಡೆಸುವಂತಾಗಿದೆ.

ಕಳೆದ 24 ಗಂಟೆಗಳಲ್ಲಿ ಕೃಷ್ಣಾ ನದಿಗೆ 1 ಲಕ್ಷ 40 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದ್ದು. ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಕೃಷ್ಣಾ ನದಿ ಪ್ರಮಾಣದಲ್ಲಿ ಗಣನೀಯ ಎರಿಕೆ ಕಂಡಿದ್ದರಿಂದ ಕಲ್ಲೋಳ ಗ್ರಾಮದ ದತ್ತ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಇಂದು ಅಮಾವಾಸ್ಯೆ ನಿಮಿತ್ಯ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದ್ರೆ ಆ ಎಲ್ಲಾ ಭಕ್ತರಿಗೆ ಮಳೆರಾಯ ನಿರಾಶೆಯನ್ನುಂಟು ಮಾಡಿದ್ದಾನೆ. ಇನ್ನು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಕುಡಚಿ ಸೇತುವೆ ರಾತ್ರೋ ರಾತ್ರಿ ಮುಳುಗಡೆಯಾಗಿದೆ. ಜಮಖಂಡಿ ಮೂಲಕ ಮಹಾರಾಷ್ಟ್ರದ ಮೀರಜ್ ಸಾಂಗಲಿಗೆ ತೆರಳುವ ಜನ 60 ಕಿಲೋಮೀಟರ್ ಸುತ್ತುವರೆದು ಸಂಚಾರ ನಡೆಸುವಂತಾಗಿದೆ.

ಬೆಳೆ ಹಾನಿಗೆ ರೈತರ ಕಂಗಾಲು

ಮಳೆಗಾಲ ಶುರುವಾದಾಗಿನಿಂದಲೂ ಕೃಷ್ಣಾ ನದಿಗೆ ಮೂರು ಬಾರಿ ಪ್ರಾವಾಹ ಬಂದ ಪರಿಣಾಮ ಕೃಷ್ಣಾ ತೀರದ ಜನ ಹೈರಾಣಾಗಿದ್ದಾರೆ. ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿದ್ದ ರೈತರ ಬೆಳೆ ಚಿಗುರೊಡೆಯುವಷ್ಟರಲ್ಲಿ ಜುಲೈ ನಲ್ಲಿ ಸುರಿದ ಭಾರಿ ಮಳೆಗೆ ಬೆಳೆಗಳು ನೆಲ ಕಚ್ಚಿದ್ದವು. ಅಲ್ಲದೇ ಆಗಸ್ಟ್​​​ನಲ್ಲಿ ಬಂದ ಕೃಷ್ಣಾ ಪ್ರವಾಹದಿಂದ ಕೃಷ್ಣಾ ತೀರದ ಸಾವಿರಾರು ಹೆಕ್ಟೇರ್ ಪ್ರದೇಶ ಕಬ್ಬು, ಸೋಯಾಬೀನ್, ತೊಗರಿ, ಉದ್ದು, ಹಾಗೂ ಮೆಕ್ಕೆಜೋಳ ಸಂಪೂರ್ಣ ನೀರಿನಲ್ಲಿ ಮುಳುಗಿ ಹೊಲದಲ್ಲೆ ಕೊಳೆತು ಹೋಗಿದ್ದವು.

Breast Cancer: ಸ್ತನ ಕ್ಯಾನ್ಸರ್ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತಲೆಯಿಂದ ತೆಗೆದುಹಾಕಿ..!

ಇನ್ನೇನು ಮಳೆ ಕಡಿಮೆಯಾಗಿ ಮತ್ತೊಮ್ಮೆ ಹೊಸದಾಗಿ ಬಿತ್ತನೆ ಮಾಡಿ ಫಸಲು ಕೈಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣ ಮತ್ತೊಮ್ಮೆ ಆಘಾತ ನೀಡಿದ್ದಾನೆ. ಬೆಳೆದ ಬೆಳೆ ಕೈಗೆ ಸಿಗುವ ಹೊತ್ತಿಗೆ ಮಳೆಯ ಅಬ್ಬರಕ್ಕೆ ಗದ್ದೆಗಳಲ್ಲಿ ನೀರು ನಿಂತು, ಇದ್ದ ಬೆಳೆ ಕೂಡ ನೀರಿನಲ್ಲಿ ಕೊಳೆತು ಹೋಗಿದೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಕಂಗಾಲಾಗಿ ಹೋಗಿದ್ದಾನೆ.

ಅಥಣಿ ಪಟ್ಟಣದ ಮನೆಗಳಿಗೆ ನೀರು

ಕಳೆದ ರಾತ್ರಿ ಅಥಣಿ ತಾಲೂಕಿನಾದ್ಯಂತ ಭಾರಿ ಮಳೆ ಸುರಿದ ಪರಿಣಾಮ ಅಥಣಿ ಪಟ್ಟಣದ ಶಾಂತಿನಗರ ಬಡಾವಣೆಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಡೀ ರಾತ್ರಿ ಮನೆಯಿಂದ ನೀರು ಹೊರ ಹಾಕಲು  ಹರಸಾಹಸ ಪಟ್ಟಿದ್ದಾರೆ. ಮೂರ್ನಾಲ್ಕು ಅಡಿಯಷ್ಟು ಮನೆ ಒಳಗೂ ಮಳೆ ನೀರು ನಿಂತು, ದವಸ-ಧಾನ್ಯಗಳು ಸೇರಿದಂತೆ ಮನೆಯಲ್ಲಿದ್ದ ಸಾಮಾಗ್ರಿಗಳೆಲ್ಲವೂ ನೀರು ಪಾಲಾಗಿವೆ. ಮಕ್ಕಳು, ವಯಸ್ಸಾದವರನ್ನ ಕರೆದುಕೊಂಡು ನೀರು ಬಂದ ಮನೆಯಲ್ಲೇ ಕುಟುಂಬಸ್ಥರು ರಾತ್ರಿ ಕಳೆದಿದ್ದಾರೆ.

ಹರಿಯುವ ನದಿಯಲ್ಲಿ ಯುವಕರ ಹುಚ್ಚಾಟ

ಇನ್ನು ಬೆಕ್ಕಿಗೆ ಚೆಲ್ಲಾಟ ಅಂದ್ರೆ ಇಲಿಗೆ ಪ್ರಾಣ ಸಂಕಟ ಅನ್ನುವ ಹಾಗೆ ಕೃಷ್ಣಾ ನದಿ ನೀರಿನಿಂದ ಜನ ಹೈರಾಣಾಗಿದ್ದರೆ, ಇತ್ತ ಯುವಕರ ಗುಂಪೊಂದು ಕಲ್ಲೋಳ ಗ್ರಾಮದ ಬಳಿ ಹರಿಯು ನದಿಯಲ್ಲಿ ಹುಚ್ಚಾಟ ಮೆರೆದಿದ್ದಾರೆ. ಅಪಾಯ ಮಟ್ಟ ಮೀರಿ‌ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಈಜಿ ವಿದ್ಯುತ್ ಕಂಬದ ಮೇಲೇರಿ ಹರಿಯುತ್ತಿರುವ ನದಿಯಲ್ಲಿ ಜಿಗಿದು ಹುಚ್ಚಾಟ ಮೆರೆದಿದ್ದಾರೆ. ಯಾವಾಗ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತೋ ಆಗ, ಅಂಕಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಚ್ಚಾಟ ನಡೆಸಿದ್ದ ಯುವಕರಿಗೆ ಲಾಠಿ ರುಚಿ ತೋರಿಸಿ ಮನೆಗೆ ಕಳಿಸಿದ್ದಾರೆ
Published by:Latha CG
First published: