Vani Vilasa Sagar: 6 ದಶಕಗಳ ಬಳಿಕ ದಾಖಲೆ ಮಟ್ಟಕ್ಕೆ ಭರ್ತಿಯಾದ ವಾಣಿ ವಿಲಾಸ ಸಾಗರ

ಈವರೆಗೆ ವಿವಿ ಸಾಗರ ಡ್ಯಾಂ ತುಂಬಿ ಕೋಡಿ ಬಿದ್ದ ಸುದ್ದಿಯನ್ನ ಹಿರಿಯರ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದ ಜನರು ಇದೀಗ ಡ್ಯಾಂ ಸಂಪೂರ್ಣ ಭರ್ತಿ ಆಗುವುದನ್ನು ನೋಡಲು ಜಿಲ್ಲೆಯ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ವಾಣಿ ವಿಲಾಸ ಸಾಗರ

ವಾಣಿ ವಿಲಾಸ ಸಾಗರ

  • Share this:
ಚಿತ್ರದುರ್ಗ:  ಬರದ ನಾಡು ಎಂದು ಕರೆಸಿಕೊಳ್ಳೊತ್ತಿದ್ದ ಚಿತ್ರದುರ್ಗ (Chitradurga) ಜಿಲ್ಲೆ ಜನರಿಗೆ ಜೀವ ನಾಡಿಯಾಗಿರುವ ವಾಣಿ ವಿಲಾಸ ಸಾಗರ (Vani Vilasa Sagara) ಮತ್ತೊಮ್ಮೆ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ಡೆಡ್ ಸ್ಟೋರೇಜ್ (Dead Storage) ತಲುಪಿದ್ದ ಈ ಜಲಾಶಯ (Dam) ಈಗ ತುಂಬಿ ಕೋಡಿ ಬೀಳೋಕೆ ತುದಿಗಾಲಲ್ಲಿ ನಿಂತಿದ್ದು 6 ದಶಕಗಳ ಬಳಿಕ ಕೋಡಿ ಬೀಳೋ ದೃಶ್ಯವನ್ನ ಕಣ್ತುಂಬಿಕೊಳ್ಳೋಕೆ ಜಿಲ್ಲೆಯ ಜನರು ಕಾತರಾಗಿದ್ದಾರೆ. ವಾಣಿ ವಿಲಾಸ ಸಾಗರ ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದ್ದ ಜಿಲ್ಲೆಯ ಜೀವನಾಡಿ. ಅದು ನಿರ್ಮಾಣವಾದ ಬಳಿಕ 1932 ರಲ್ಲಿ 125.50, 1933 ರಲ್ಲಿ 135.25, 1934 ರಲ್ಲಿ 130.24 ಅಡಿ ನೀರು ಸಂಗ್ರಹವಾಗಿದ್ದು ಇತಿಹಾಸ. ಬಳಿಕ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958 ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. ಇದಾದ ಬಳಿಕ ಜಿಲ್ಲೆಯಲ್ಲಿ ಮಳೆಯ ಪ್ರಮಾಣ (Rainfall) ಕಡಿಮೆಯಾಗಿ, ವೇದಾವತಿ ನದಿ (Vedavati River) ನೀರು ಕೂಡ ಹರಿದು ಬಂದು ಜಲಾಶಯ ಸೇರಲಿಲ್ಲ.

ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ಸುರಿಯೋ ಮಳೆಗೊ ಸ್ವಲ್ಪ ಪ್ರಮಾಣದ ನೀರು ಬಂದ್ರೆ. ಆ ನೀರು ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಸೇರಿದಂತೆ ಹಲವೆಡೆಗೆ ಕುಡಿಯೋಕೆ ಸರಬರಾಜು ಮಾಡೋಕು ಕಷ್ಟದ ಪರಿಸ್ಥಿತಿಯನ್ನ ಜಿಲ್ಲೆಯ ಜನರು ಅನುಭವಿಸಿದ್ದಾರೆ. ಅಷ್ಟೆ ಅಲ್ಲದೇ ವಿವಿ ಸಾಗರ ಡ್ಯಾಂನಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ಇದರ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲೂ ಅಂತರ್ಜಲ ಮಟ್ಟ ಕಡಿಮೆ ಆಗಿ ಬೋರ್​ವೆಲ್​ಗಳಲ್ಲಿ ನೀರು ಬಾರದದೇ ರೈತರು ಕಂಗಾಲಾಗಿದ್ದರು.

ಅಂತರ್ಜಲ ಮಟ್ಟ ಕುಸಿತ

ಅದರಲ್ಲೂ ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ವ್ಯಾಪ್ತಿಯಲ್ಲಿ 800 - 1000 ಅಡಿ ಬೋರ್​ವೆಲ್ ಕೊರೆಸಿದರು ನೀರು ಮಾತ್ರ ಸಿಗುತ್ತಿರಲಿಲ್ಲ. ಇದರ ಪರಿಣಾಮ ಬಹುತೇಕ ಅಡಿಕೆ,ತೆಂಗಿನ ತೋಟಗಳು ಒಣಗಿ ಹೋಗಿದ್ದವು. ಬಳಿಕ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ವಿವಿ ಸಾಗರಕ್ಕೆ ತಾತ್ಕಾಲಿಕವಾಗಿ ನೀರು ಬಿಡಿಸಲಾಯ್ತು.

Heavy Rainfall After 60 Years Vani vilas dam creates Record tvtc mrq
ವಾಣಿ ವಿಲಾಸ ಸಾಗರ ಜಲಾಶಯ


ಇದನ್ನೂ ಓದಿ:  Cauvery: ಕಾವೇರಿ ನದಿಯಲ್ಲಿ ಯಾತ್ರಾರ್ಥಿಗಳು ಬಿಸಾಡಿದ ಬಟ್ಟೆಗಳೇ ಇವರ ಆದಾಯದ ಮೂಲ

ವೇದಾವತಿ ನದಿ ಮೂಲಕ ಜಲಾಶಯಕ್ಕೆ ನೀರು

ಮಳೆರಾಯ ಮುನಿಸು ಮುರಿದು ಮತ್ತೆ ಸುರಿಯೋಕೆ ಪ್ರಾರಂಭ ಮಾಡಿದ್ದಾನೆ. ಅದರ ಪರಿಣಾಮ 2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಇದೀಗ ಚಿಕ್ಕಮಗಳೂರು, ಸೇರಿದಂತೆ ಚಿತ್ರದುರ್ಗ ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು, ವೇದಾವತಿ ನದಿ ಮೂಲಕ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚುತ್ತಲೇ ಇದೆ.

1958ರ ದಾಖಲೆ ಮುರಿಯಲಿದೆ

ಈಗ 1958ರ ದಾಖಲೆಯನ್ನು ಹಿಂದಿಕ್ಕಿ ಡ್ಯಾಂ ನೀರಿನ ಮಟ್ಟ 125.50 ಅಡಿ ದಾಟಿ ಹೊಸ ದಾಖಲೆ ಮಟ್ಟಕ್ಕೆ ತುಂಬುತ್ತಿದೆ. ಈವರೆಗೆ ವಿವಿ ಸಾಗರ ಡ್ಯಾಂ ತುಂಬಿ ಕೋಡಿ ಬಿದ್ದ ಸುದ್ದಿಯನ್ನ ಹಿರಿಯರ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದ ಜನರು ಇದೀಗ ಡ್ಯಾಂ ಸಂಪೂರ್ಣ ಭರ್ತಿ ಆಗುವುದನ್ನು ನೋಡಲು ಜಿಲ್ಲೆಯ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ಸಂತಸದಲ್ಲಿ ರೈತರು

ಅಲ್ಲದೇ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ. ಹೊಸದುರ್ಗ, ಹಿರಿಯೂರು ತಾಲೂಕುಗಳಲ್ಲಿ ಕೇವಲ 100- 200 ಅಡಿಗೆ ನೀರು ಸಿಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ, ಚಟುವಟಿಕೆಗಳು ಸಂಭ್ರಮದಿಂದ ಗರಿಗೆದರಿದ್ದು ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಸುತ್ತಲಿನ ಪರಿಸರ ರಮ್ಯ ರಮಣೀಯವಾಗಿ ನೋಡುಗರನ್ನು ಆಕರ್ಷಿಸುತ್ತಿದೆ.

Heavy Rainfall After 60 Years Vani vilas dam creates Record tvtc mrq
ವಾಣಿ ವಿಲಾಸ ಸಾಗರ ಜಲಾಶಯ


ಇದನ್ನೂ ಓದಿ:  BBMP: ಸಾಯಿ ಲೇಔಟ್ ಜಲಾವೃತ, 10 ಸಾವಿರ ಪರಿಹಾರ; ಜನರು ಕೆಂಡಾಮಂಡಲ

ಜಲಾಶಯ ತುಂಬಿ ಕೋಡಿ ಬೀಳುವ ಹಂತಕ್ಕೆ ತಲುಪುತ್ತಿರುವುದು ಜಿಲ್ಲೆಯ, ರೈತರಲ್ಲಿ ಹೊಸ ಚೈತನ್ಯ ತುಂಬಿದೆ. ಇದರಿಂದಲೇ ಅಂತರ್ಜಲ ಹೆಚ್ಚುತ್ತಿದ್ದು, ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕು ಸೇರಿದಂತೆ ಹಲವು ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ದಾಹ ನೀಗಿದ್ರೆ, ಇತ್ತ ಅಡಿಕೆ ತೋಟಗಳನ್ನ ಮಾಡುವಲ್ಲಿ ರೈತರು ಫುಲ್ ಬ್ಯುಸಿಯಾಗಿದ್ದಾರೆ.
Published by:Mahmadrafik K
First published: