ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

ಬಾಳೆಹೊನ್ನೂರಿನ ಕಡುಬಗೆರೆಯಲ್ಲಿ ಸುಮಾರು ಅರ್ಧ ಗಂಟೆ ಸುರಿದ ಆಲಿಕಲ್ಲು ಮಳೆಗೆ ಜನ ಆಲಿಕಲ್ಲನ್ನ ಲೋಟದಲ್ಲಿ ತುಂಬಿಟ್ಟು, ತಿಂದು ಸಂತಸಪಟ್ಟಿದ್ದಾರೆ. ಆದರೆ ಈ ಮಳೆ ಕಾಫಿ ಬೆಳೆಗಾರರಿಗೆ ನುಂಗಲಾರದ ಬಿಸಿತಪ್ಪುವಾಗಿದೆ.

G Hareeshkumar | news18
Updated:April 23, 2019, 7:01 PM IST
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ
ಆಲಿಕಲ್ಲು
G Hareeshkumar | news18
Updated: April 23, 2019, 7:01 PM IST
ಚಿಕ್ಕಮಗಳೂರು (ಏ.23) :  ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುಮಾರು ಒಂದು ಗಂಟೆಯ ಕಾಲ ಸುರಿದ ಧಾರಾಕಾರ ಮಳೆಗೆ ಮಲೆನಾಡಿಗರು ಅಕ್ಷರಶಃ ನಲುಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಹಾಗೂ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತಲಿನ ದೈತ್ಯ ಮಳೆಗೆ ಮಲೆನಾಡಿಗರು ಹೈರಾಣಾಗಿದ್ದಾರೆ.

ಬಾಳೆಹೊನ್ನೂರಿನ ಕಡುಬಗೆರೆಯಲ್ಲಿ ಸುಮಾರು ಅರ್ಧ ಗಂಟೆ ಸುರಿದ ಆಲಿಕಲ್ಲು ಮಳೆಗೆ ಜನ ಆಲಿಕಲ್ಲನ್ನ ಲೋಟದಲ್ಲಿ ತುಂಬಿಟ್ಟು, ತಿಂದು ಸಂತಸಪಟ್ಟಿದ್ದಾರೆ. ಆದರೆ ಈ ಮಳೆ ಕಾಫಿ ಬೆಳೆಗಾರರಿಗೆ ನುಂಗಲಾರದ ಬಿಸಿತಪ್ಪುವಾಗಿದೆ. ಈಗ ಕಾಫಿ ಹೂವಾಗಿ ಹಣ್ಣಾಗುವ ಸಮಯ. ಈ ರೀತಿ ಧಾರಾಕಾರವಾಗಿ ಅಲಿಕಲ್ಲು ಮಲೆ ಸುರಿದ್ರೆ ಕಾಯಾಗಬೇಕಿದ್ದ ಹೂವು ಮಣ್ಣು ಪಾಲಾಗುತ್ತೆಂದು ಕಾಫಿ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

ಇದನ್ನೂ ಓದಿ: ಮಲೆನಾಡಿನಲ್ಲಿ ವರುಣನ ಆರ್ಭಟ; ಮತದಾರರಿಗೆ ತಂಪೆರೆದ ಮಳೆರಾಯ

ಮೂಡಿಗೆರೆ ತಾಲೂಕಿನ ಕಳಸಾದಲ್ಲಿ ಸಂಜೆ ನಾಲ್ಕು ಗಂಟಗೆ ಸಂಪೂರ್ಣ ಕತ್ತಲಾಗಿ ಭಾರೀ ಗುಡುಗು-ಸಿಡಿಲಿನೊಂದಿಗೆ ಸುರಿದ ಮಹಾಮಳೆಗೆ ಈ ಭಾಗದ ಜನ ಆತಂಕಗೊಂಡಿದ್ದು ಉಂಟು. ಆದ್ರೆ, ಮಲೆನಾಡಲ್ಲಿ ಹಿಂದೆಂದೂ ನೋಡದಂತೆ ರಣಬೀಸಿಲಿಗೆ ಬಸವಳಿದಿದ್ದ ಮಲೆನಾಡಿಗರು ವರುಣನ ಆಗಮನದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಶಿವಮೊಗ್ಗ ಹಾಗೂ ಉತ್ತರ ಕನ್ನಡಲ್ಲಿ ವರುಣನ ಸಿಂಚನ

ಇತ್ತ ಶಿವಮೊಗ್ಗ, ಭದ್ರಾವತಿ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಶಿರಸಿಯಲ್ಲಿ ಮಳೆಯ ಆರ್ಭಟ ತೋರಿದ್ದಾನೆ. ಗುಡುಗು ಸಹಿತ ಸುರಿದ ಭಾರೀ ಮಳೆಯಿಂದ ಮತದಾನಕ್ಕೆ ಅಡ್ಡಿಯಾಗಿದೆ.
First published:April 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ