ರಾಜಧಾನಿ ಬೆಂಗಳೂರಿಗೆ ಇನ್ನೂ ನಾಲ್ಕು ದಿನ ಸುರಿಯಲಿದೆ ಧಾರಾಕಾರ ಮಳೆ

ಬೆಂಗಳೂರಿನಲ್ಲಿ ಮಾತ್ರ ವಿಪರೀತವಾಗಿ ಮಳೆ ಸುರಿಯುತ್ತಿದೆ. ಕಳೆದ ಗುರುವಾರ ರಾಜಧಾನಿಯಲ್ಲಿ ದಾಖಲೆ ಮಳೆ ಸುರಿದು ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದೆ. ಅದೇ ರೀತಿ ಇನ್ನೂ ಒಂದು ವಾರ ಬೆಂಗಳೂರಿಗೆ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಬೆಂಗಳೂರು ಈ ವಾರ ಮಧ್ಯಾಹ್ನದ ನಂತರ ಬಹುತೇಕ ಜೋರು ಮಳೆ ಕಂಡಿದೆ. ಈ ಮಳೆ ಇನ್ನೂ ಒಂದು ವಾರದವರೆಗೆ ಮುಂದುವರೆಯಲಿದೆ ಎನ್ನುತ್ತಿದೆ ಹವಾಮಾನ ಇಲಾಖೆ.

ಇದು ಮುಂಗಾರು ಮಳೆಯ ಕಾಲ. ಮಳೆ ಉತ್ತಮವಾಗಿಯೇ ಬರಬೇಕು.‌ ವಾಡಿಕೆಯ ಮಳೆಗಾಗಿ ಇಡೀ ರಾಜ್ಯವೇ ಕಾಯುತ್ತಿದೆ. ಇನ್ನೇನು ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಎಡೆಬಿಡದ ಮಳೆ ಆರಂಭವಾಯ್ತು ಎಂದುಕೊಳ್ಳುವಷ್ಟರಲ್ಲೇ ಮಳೆ ಬಿಡುವು ನೀಡಿದೆ. ಇಡೀ ದಿನ ಮೋಡ ಕವಿದ ಆಗಸ ನೋಡಿ ಅಲ್ಲಿನ ಜನ ಕಂಗಾಲಾಗಿದ್ದಾರೆ. ಈಗ ಬೇಳೆ, ಕಾಳು, ಧಾನ್ಯಗಳನ್ನು ನಾಟಿ ಮಾಡುವ ಸಂದರ್ಭ. ಉತ್ತಮ ಮಳೆಯಾದರೆ ಮಾತ್ರ ಈ ಬೆಳೆಗಳು ಉತ್ತಮವಾಗಿ ಬರುತ್ತವೆ. ಇಲ್ಲದಿದ್ದರೆ ಕಳೆದ ವರ್ಷದಂತೆ ಈ ಬಾರಿಯೂ ಬರ ಅಥವಾ ನೆರೆಯನ್ನು ಅನುಭವಿಸಬೇಕಾಗಬಹುದು ಎನ್ನುವುದು ಜನರ ಆತಂಕ. ಆದರೆ ಇದಿನ್ನೂ ಮುಂಗಾರಿನ ಆರಂಭಿಕ ಹಂತ. ಹಾಗಾಗಿ ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ.

ಇದನ್ನು ಓದಿ: Petrol Price: ಪೆಟ್ರೋಲ್, ಡಿಸೇಲ್ ನಿರಂತರ ದರ ಏರಿಕೆ; ಕಾಂಗ್ರೆಸ್‌ ಕಾರ್ಯಕರ್ತರಿಂದ ಬೈಕ್‌ ಶವಯಾತ್ರೆ ನಡೆಸಿ ಪ್ರತಿಭಟನೆ

ಆದರೆ, ಬೆಂಗಳೂರಿನಲ್ಲಿ ಮಾತ್ರ ವಿಪರೀತವಾಗಿ ಮಳೆ ಸುರಿಯುತ್ತಿದೆ. ಕಳೆದ ಗುರುವಾರ ರಾಜಧಾನಿಯಲ್ಲಿ ದಾಖಲೆ ಮಳೆ ಸುರಿದು ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದೆ. ಅದೇ ರೀತಿ ಇನ್ನೂ ಒಂದು ವಾರ ಬೆಂಗಳೂರಿಗೆ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ಜೊತೆಗೆ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಭಾಗಕ್ಕೂ ಉತ್ತಮ ಮಳೆಯಾಗಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಹವಾಮಾನ ಇಲಾಖೆ ತಜ್ಞರು.
First published: