Chikkamagaluru: ಮುಂದುವರಿದ ಮಳೆಯ ಅಬ್ಬರ; ಬಯಲು ಸೀಮೆ ಭಾಗದಲ್ಲೂ ವರುಣನ ರೌದ್ರ ನರ್ತನ

24 ಗಂಟೆಯಲ್ಲಿ ಮಳೆಯಿಂದ 7 ಮನೆಗಳಿಗೆ ಹಾನಿಯಾಗಿದ್ದು, 3 ಮನೆಗಳಿಗೆ ಶೇ.25 ರಿಂದ 75ರಷ್ಟು ಹಾಗೂ 4 ಮನೆಗಳಿಗೆ ಶೇ.15 ರಿಂದ 25ರಷ್ಟು ಹಾನಿ ಸಂಭವಿಸಿದೆ. ಜೂನ್ ತಿಂಗಳಿಂದ ಇಲ್ಲಿಯವರೆಗೂ ಮಳೆಯಿಂದ 950 ಮನೆಗಳಿಗೆ ಹಾನಿಯಾಗಿದೆ. 8 ಜಾನುವಾರುಗಳು ಮೃತಪಟ್ಟಿವೆ.

ಮಳೆ ಎಫೆಕ್ಟ್

ಮಳೆ ಎಫೆಕ್ಟ್

  • Share this:
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ (Chikkamagaluru Rains) ಆರ್ಭಟ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ ಸುರಿದ ಮಳೆಗೆ 7 ಮನೆಗಳಿಗೆ (House) ಹಾನಿಯಾಗಿದೆ. ಜಮೀನುಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ಮಳೆನೀರು ನುಗ್ಗಿ ಹಾನಿ ಸಂಭವಿಸಿದೆ. ಜಿಲ್ಲಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ಜನರು ರೋಸಿ ಹೋಗಿದ್ದಾರೆ. ಭಾರೀ ಪ್ರಮಾಣದ ಮಳೆಯಿಂದ (Heavy Rain Fall) ಜನಜೀವನ ಅಸ್ತವ್ಯಗೊಂಡಿದೆ. ಬುಧವಾರ ಜಿಲ್ಲೆಯ ಕಳಸ, ಮೂಡಿಗೆರೆ ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ಜಮೀನುಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ. ಅಜ್ಜಂಪುರ ಭಾಗದಲ್ಲಿ ಮಂಗಳವಾರ ರಾತ್ರಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, 25ಕ್ಕೂ ಹೆಚ್ಚು ಮನೆ ಗಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದೆ.

ತಾಲ್ಲೂಕಿನ ಅರಬಲದಲ್ಲಿ 12 ಮನೆ ತಿಮ್ಮಾಪುರದಲ್ಲಿ 9 ಹಾಗೂ ಜಾವೂರು ಹೊಸಹಳ್ಳಿಯಲ್ಲಿ 3 ಮನೆಗಳಿಗೆ ಹಾನಿಯಾಗಿದೆ. ಅತ್ತಿಮೊಗ್ಗೆ ಭಾಗದಲ್ಲಿ ತೋಟ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆನಷ್ಟ ಉಂಟಾಗಿದೆ. ಅಜ್ಜಂಪುರ ಪಟ್ಟಣದ ಶಿವಾಜಿ ರಸ್ತೆ, ಬನಶಂಕರಿ ರಸ್ತೆ, ಶ್ರೀರಾಮ ಹಾಗೂ ಪಟ್ಟಣದ ಸಮೀಪದಲ್ಲಿರುವ ಗೌರಪುರದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ತಾಲ್ಲೂಕಿನ ನಾರಾಣಾಪುರ, ಶಿವನಿ, ಅನುವನಹಳ್ಳಿ ಭಾಗದಲ್ಲಿ ಹೊಲಗಳಿಗೆ ನೀರು ನುಗ್ಗಿ ಈರುಳ್ಳಿ, ಶೇಂಗಾ ಸೇರಿದಂತೆ ತರಕಾರಿ ಬೆಳೆ ನಾಶವಾಗಿದೆ.

ಹುಲಿ ಹಳ್ಳ ಸಂಪರ್ಕ ಕಡಿತ, ನೆಲಕ್ಕುರಳಿದ ಮರ

ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದ್ದು ಆಲ್ದೂರು ಬಳಿ ಹವ್ವಳ್ಳಿ ಬಳಿ ಹುಲಿ ಹಳ್ಳ ಸಂಪರ್ಕ ಕಡಿತಗೊಂಡಿದೆ. ಬಾಳೆಹೊನ್ನೂರು ಸಮೀಪದ ಹೆದ್ದಾರಿ ಬದಿಯಲ್ಲಿ ಮರವೊಂದು ನೆಲಕ್ಕುರುಳಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರವನ್ನು ತೆರವುಗೊಳಿಸಿದರು.

heavy rain to continue in chikkamagaluru district vctv mrq
ಕುಸಿದ ಮನೆ


ಇದನ್ನೂ ಓದಿ:  Karnataka Weather Report: 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲಿ ಮತ್ತೆ ಮಳೆ ಆರಂಭ

ಕಳಸ ಭಾಗದ ಕೆಲವು ಜಮೀನುಗಳು ಜಲಾವೃತ

ಅಜ್ಜಂಪುರ, ಹೊಸಕೆರೆ, ಮೇಗರಮಕ್ಕಿ, ನರಸಿಂಹರಾಜಪುರ, ಬುಕ್ಕಾಂಬುದಿ, ಕೊಟ್ಟಿಗೆಹಾರ ಕಳಸ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಕಳಸ ಸಮೀಪದ ಗ್ರಾಮವೊಂದರ ಗದ್ದೆಯ ಮೇಲೆ ಮಳೆ ನೀರು ಉಕ್ಕಿ ಹರಿದಿದ್ದು, ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಶಿವನಿ ಅನುವನಹಳ್ಳಿ ನಾರಾಯಣಪುರ ಸೇತವೆ ಮೇಲೆ ಮಳೆನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

heavy rain to continue in chikkamagaluru district vctv mrq
ಮರ ತೆರವು


ಶೃಂಗೇರಿ, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ತರೀಕೆರೆ, ಕಡೂರು ಭಾಗದಲ್ಲಿಯೂ ಮಳೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕು ಸುತ್ತಮುತ್ತ ಮೋಡ ಕವಿದ ವಾತವರಣ ನಿರ್ಮಾಣವಾಗಿದೆ. ಅಬ್ಬರಿಸುತ್ತಿರುವ ಮಳೆಗೆ ಜನರು ಬೆಚ್ಚಿ ಬಿದ್ದಿದ್ದು, ಮಳೆ ನಿಲ್ಲಿಸುವಂತೆ ದೇವರ ಮೊರೆ ಇಡುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳೆಗಾರರು ಕಂಗಲಾಗಿದ್ದಾರೆ.

950 ಮನೆಗಳಿಗೆ ಹಾನಿ

24 ಗಂಟೆಯಲ್ಲಿ ಮಳೆಯಿಂದ 7 ಮನೆಗಳಿಗೆ ಹಾನಿಯಾಗಿದ್ದು, 3 ಮನೆಗಳಿಗೆ ಶೇ.25 ರಿಂದ 75ರಷ್ಟು ಹಾಗೂ 4 ಮನೆಗಳಿಗೆ ಶೇ.15 ರಿಂದ 25ರಷ್ಟು ಹಾನಿ ಸಂಭವಿಸಿದೆ. ಜೂನ್ ತಿಂಗಳಿಂದ ಇಲ್ಲಿಯವರೆಗೂ ಮಳೆಯಿಂದ 950 ಮನೆಗಳಿಗೆ ಹಾನಿಯಾಗಿದೆ. 8 ಜಾನುವಾರುಗಳು ಮೃತಪಟ್ಟಿವೆ.

heavy rain to continue in chikkamagaluru district vctv mrq
ಕೃಷಿ ಭೂಮಿ ಜಲಾವೃತ


ಜಿಲ್ಲೆಯ ಮಳೆ ವಿವರ

ಚಿಕ್ಕಮಗಳೂರು 3.3, ವಸ್ತಾರೆ 22, ಜೋಳದಾಳು 19.8, ಆಲ್ದೂರು 40, ಅತ್ತಿಗುಂಡಿ 22, ಸಂಗಮೇಶ್ವರ ಪೇಟೆ 20.3, ಕೆ.ಆರ್.ಪೇಟೆ 40, ಬ್ಯಾರವಳ್ಳಿ 20.3, ಮಳಲೂರು 5, ಕಳಸಾಪುರ 9, ದಾಸದಹಳ್ಳಿ 6 ಮಿ.ಮೀ. ಮಳೆಯಾಗಿದೆ. ಮೂಡಿಗೆರೆ 17, ಕೊಟ್ಟಿಗೆಹಾರ 65.8, ಗೋಣಿಬೀಡು 5, ಜಾವಳಿ 42, ಕಳಸ 44.2, ಹಿರೇಬೈಲು 50, ಹೊಸಕೆರೆ 84, ಬೆಳ್ಳೂರು 30.2, ನರಸಿಂಹರಾಜಪುರ 73.4, ಬಾಳೆಹೊನ್ನೂರು 24.6, ಮೇಗರಮಕ್ಕಿ 78, ಶೃಂಗೇರಿ 5.6, ಕಿಗ್ಗಾ 46 ಮಿ.ಮೀ. ಮಳೆಯಾಗಿದೆ.

ಇದನ್ನೂ ಓದಿ:  Chikkamagaluru: ಗಣೇಶ ವಿಸರ್ಜಿಸಿ ಹಿಂದಿರುಗುವಾಗ ದುರಂತ; ವಿದ್ಯುತ್ ಪ್ರವಹಿಸಿ ಮೂವರು ಸಾವು, 6 ಜನ ಗಂಭೀರ

heavy rain to continue in chikkamagaluru district vctv mrq
ಕೃಷಿ ಭೂಮಿ ಜಲಾವೃತ


ಕೊಪ್ಪ 26, ಹರಿಹರಪುರ 7, ಜಯಪುರ 18.6, ಬಸರೀಕಟ್ಟೆ 39.4, ಕಮ್ಮರಡಿ 5.6, ತರೀಕೆರೆ 15.8, ಲಕ್ಕವಳ್ಳಿ 12.4, ರಂಗೇನಹಳ್ಳಿ 11.8, ಲಿಂಗದಹಳ್ಳಿ 8.2, ಉಡೇವಾ 7.4, ತಣಗಿಬೈಲು 6.4, ತ್ಯಾಗದಬಾಗಿ 17.4, ಹುಣಸೆಘಟ್ಟ 22, ಕಡೂರು 28, ಬೀರೂರು 12.8, ಸಖರಾಯಪಟ್ಟಣ 70, ಸಿಂಗಟಗೆರೆ 9.6, ಪಂಚನಹಳ್ಳಿ 35.8, ಎಮ್ಮೆದೊಡ್ಡಿ 21.2, ಯಗಟಿ 6.8, ಗಿರಿಯಾಪುರ 18, ಬಾಸೂರು 28, ಚೌಳಹಿರಿಯೂರು 22.8, ಅಜ್ಜಂಪುರ 16, ಶಿವನಿ 42.2, ಬುಕ್ಕಾಂಬುದಿ 67 ಮಿ.ಮೀ. ಮಳೆಯಾಗಿದೆ.
Published by:Mahmadrafik K
First published: