• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Heavy Rain: ಭಾರೀ ಮಳೆಗೆ 31 ಕೋಟಿ ರೂ. ಮೌಲ್ಯದ ಬೆಳೆನಾಶ! ಟೊಮೆಟೊ, ಮಾವು ಬೆಳೆದ ರೈತರಿಗೆ ಭಾರೀ ನಷ್ಟ

Heavy Rain: ಭಾರೀ ಮಳೆಗೆ 31 ಕೋಟಿ ರೂ. ಮೌಲ್ಯದ ಬೆಳೆನಾಶ! ಟೊಮೆಟೊ, ಮಾವು ಬೆಳೆದ ರೈತರಿಗೆ ಭಾರೀ ನಷ್ಟ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋಲಾರ ಜಿಲ್ಲೆಯಾದ್ಯಂತ ಮೇ ತಿಂಗಳ 1 ರಿಂದ ನೆನ್ನೆವರೆಗು ಸುರಿದ ಮಳೆಯಿಂದಾಗಿ 6,340 ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಾಶ ವಾಗಿದ್ದು, 31 ಕೋಟಿ ರೂಪಾಯಿ ಅಂದಾಜು ಬೆಳೆ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿದ್ದಾರೆ.

  • Share this:

ಕೋಲಾರ(ಮೇ.20): ಬಯಲುಸೀಮೆ ಕೋಲಾರ (Kolar) ಜಿಲ್ಲೆಯಾದ್ಯಂತ ಮೇ ತಿಂಗಳ 1 ರಿಂದ ನೆನ್ನೆವರೆಗು ಸುರಿದ ಮಳೆಯಿಂದಾಗಿ 6,340 ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಾಶ ವಾಗಿದ್ದು, 31 ಕೋಟಿ ರೂಪಾಯಿ ಅಂದಾಜು ಬೆಳೆ ನಷ್ಟವಾಗಿದೆ (Loss) ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ. ಮಳೆಹಾನಿ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು,  ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಯಾದ ಮಾವು (Mango) ಹಾಗು ಟೊಮೆಟೊ (Tomato) ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದ್ದು ಪ್ರತಿದಿನ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು (Revenue Department Officers) ಸರ್ವೇ ನಡೆಸಿ, ಸರ್ಕಾರಕ್ಕೆ (Govt) ಕಾಲ ಕಾಲಕ್ಕೆ ಮಾಹಿತಿ ನೀಡುತ್ತಿದ್ದಾರೆ. ಬೆಳಹಾನಿಯಾದ ರೈತರಿಗೆ NDRF ನಡಿ ಪರಿಹಾರ ನೀಡಲಾಗುವುದು ಎಂದು ಡಿ.ಸಿ ವೆಂಕಟ್‍ರಾಜಾ ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ.


ಶ್ರೀನಿವಾಸಪುರ ಹಾಗು ಮುಳಬಾಗಿಲು ತಾಲೂಕಿನಲ್ಲಿ ಹೆಚ್ವಾಗಿ ಮಾವು ಬೆಳೆಯಲಾಗುತ್ತಿದೆ, ಮಾವಿನ ಕಾಯಂತೆ, ಟೊಮೆಟೊ ಬೆಳೆಯನ್ನ ರೈತರು ಬೆಳೆಯುತ್ತಿದ್ದು  ಮಾರುಕಟ್ಟೆಯಲ್ಲಿ, ಇದೀಗ ಉತ್ತಮ‌ ಬೆಲೆಯಿದ್ದರು ಬೆಳೆಹಾನಿ ಟೊಮೆಟೊ ಬೆಳೆಗಾರರ ನಿದ್ದೆಗೆಡಿಸಿದೆ, ಪ್ರತಿನಿತ್ಯ ಮಳೆಯಾಗ್ತಿರುವ ಕಾರಣ ಇನ್ನೇನು ಕಟಾವಿಗೆ ಬಂದಿರೊ ಟೊಮೇಟೊ ವನ್ನ, ಉಳಿಸಿಕೊಳ್ಳಲು ರೈತರು ರಾಸಾಯನಿಕ ಸಿಂಪಡನೆಗೆ ಮುಂದಾಗಿದ್ದಾರೆ.


ಟೊಮೆಟೊಗೆ ಮಚ್ಚೆ ರೋಗ


ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ,  ಹವಾಮಾನ ವೈಪರೀತ್ಯದಿಂದ ಟೊಮೆಟೊಗೆ ಮಚ್ಚೆ ರೋಗ ತಗಲುವ ಭೀತಿ ಎದುರಾಗಿದೆ. ಅದಕ್ಕಾಗಿಯೇ ರೈತರು ಔಷಧಿ ಸಿಂಪಡನೆ ಮಾಡಿ ರೋಗದಿಂದ ಬಚಾವಾಗಲು ಪರದಾಟ ಪಡುತ್ತಿದ್ದಾರೆ. ಇನ್ನು ಮಾವು ಬೆಳೆಹಾನಿ ಗೆ  ಒಂದು ಹೆಕ್ಟೇರ್ ಪ್ರದೇಶಕ್ಕೆ 25 ಸಾವಿರ ಪರಿಹಾರ ನೀಡುವಂತೆ ಶ್ರೀನಿವಾಸಪುರ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: Basavaraj Bommai: ಸಿಟಿ ರೌಂಡ್ಸ್ ಬಳಿಕ ಅಧಿಕಾರಿಗಳ ಮೇಲೆ ಸಿಎಂ ಫುಲ್ ಗರಂ; ರಾಜಕಾಲುವೆ ಅಭಿವೃದ್ಧಿಗೆ 1,600 ಕೋಟಿ ಡಿಪಿಆರ್


ಕೋಲಾರದಲ್ಲಿ 1 ಸಾವಿರ ಗಡಿದಾಟಿದ ಟೊಮೆಟೊ, ಕೊಳ್ಳಲು ಗ್ರಾಹಕರ ಹಿಂದೇಟು.


ಏಷ್ಯಾದಲ್ಲೆ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರೊ, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್  ಟೊಮೆಟೊ ಬೆಲೆ 1 ಸಾವಿರ ಗಡಿದಾಟಿದೆ, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 15 ಕೆಜಿ ತೂಕದ ಒಂದು  ಬಾಕ್ಸ್, 1 ಸಾವಿರ ರೂಪಾಯಿ ಗಡಿದಾಟಿದ್ದು, ಟೊಮೆಟೊ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ.


ಕೋಲಾರದ ರೈತರಿಗೆ ಮಾತ್ರ ಭಾರೀ ನಷ್ಟ


ಆದರೆ ಈ ಸಂತಸ ಕೋಲಾರ ರೈತರ ಪಾಲಿಗೆ ಪೂರ್ಣ ಪ್ರಮಾಣದಲ್ಲಿ ಸಿಗದಂತಾಗಿದೆ. ಕೋಲಾರ ಜಿಲ್ಲೆಯಲ್ಲೀಗ ಟೊಮೆಟೊ ಬೆಳೆ ಕಡಿಮೆ ಪ್ರಮಾಣದಲ್ಲಿದೆ. ನೆರೆಯ ಆಂದ್ರದಿಂದ ಹಾಗು ಹೊರ ರಾಜ್ಯಗಳಿಂದ ಟೊಮೆಟೊ ಮಾರುಕಟ್ಟೆಗೆ ಆವಕವಾಗುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಸಾಲು ಸಾಲು ನಷ್ಟ ಅನುಭವಿಸಿರೊ ರೈತರು, ಈ ಸಲ ಟೊಮೆಟೊ ಬೆಳೆಯೋ ಸಾಹಸಕ್ಕೆ ಕೈ ಹಾಕಿಲ್ಲ.


ಇದನ್ನೂ ಓದಿ: Land Slides: ಉತ್ತರ ಕನ್ನಡದಲ್ಲಿ ಮತ್ತೆ ಭೂ ಕುಸಿತದ ಭೀತಿ; ಈ ವರ್ಷ ಈ 5 ಪ್ರದೇಶಗಳಿಗೆ ಅಪಾಯವಂತೆ!


ದೇಶಾದ್ಯಂತ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು, ಹಲವು ರಾಜ್ಯಗಳಲ್ಲಿ ಟೊಮೆಟೊ ಬೆಳೆ ನೆಲಕಚ್ಚಿದೆ, ಸಹಜವಾಗಿ ಬೇಡಿಕೆ ಹೆಚ್ಚುತ್ತಲೇ ಬೆಲೆಯೂ ಏರಿಕೆಯಾಗಿದೆ, ಮುಂದಿನ ದಿನಗಳಲ್ಲಿ ಮಳೆಹಾನಿ ಹೆಚ್ವಾದಲ್ಲಿ ಈಗಿರುವ ಟೊಮೆಟೊ ನೀರು ಪಾಲಾದರೆ, ಕೆಂಪುಹಣ್ಣನ ನೆಲೆ ಗಗನಕ್ಕೇರುವ ಸಾಧ್ಯತೆಗಳಿದೆ.


ಟೊಮೆಟೋ ಬೆಲೆ ಕೆಜಿಗೆ 70


ಇನ್ನು ಟೊಮೆಟೊ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಕಳೆದ ವಾರ ಒಂದು ಕೆಜಿ ಟೊಮೆಟೊ 40 ರೂ ಇದ್ದ ಬೆಲೆ, ಇದೀಗ 70 ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ತರಕಾರಿ ಬೆಲೆ ಏರಿಕೆಯು ಗ್ರಾಹಕರ ನಿದ್ದೆಗೆಡಿಸಿದೆ.

First published: