Heavy Rain: ದೇವರನ್ನೂ ಬಿಡದ ಮಳೆಯಬ್ಬರ; ಅತಿವೃಷ್ಠಿಗೆ ಕಂಗಾಲಾದ ಚಿಕ್ಕೋಡಿ ರೈತರು

ಬೆಳೆಗಳು ಕಟಾವಿಗೆ ಬರುವ ಸಂದರ್ಭದಲ್ಲಿ ಮಳೆಯ ರೌದ್ರನರ್ತನ ಆರಂಭವಾದ ಪರಿಣಾಮ ಜಮೀನಿನಲ್ಲಿ ನೀರು ನಿಂತು ಬೆಳೆ ಕೊಳೆಯುವ ಸ್ಥಿತಿ ತಲುಪಿವೆ.

ದೇವಾಲಯದ ಸುತ್ತ ಜಲದಿಗ್ಬಂಧನ

ದೇವಾಲಯದ ಸುತ್ತ ಜಲದಿಗ್ಬಂಧನ

  • Share this:
ಚಿಕ್ಕೋಡಿ (ಅ.15):  ಕಳೆದ 4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಇಲ್ಲಿನ ಜನರ ಬದುಕನ್ನು ಮೂರಬಟ್ಟೆಯಾಗಿ ಮಾಡಿದೆ. ಮಳೆಯಿಂದಾಗಿ ಬೆಳೆ ನಾಶಗೊಂಡಿದ್ದು, ನಿರಂತರ ಮಳೆಗೆ ಮಣ್ಣಿನ ಮನೆಯ ಗೋಡೆಗಳು ಕುಸಿಯಲಾರಂಭಿಸಿದೆ. ರಸ್ತೆಗಳು ಸಂಪರ್ಕ ಕಡಿದುಕೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ದಿಕ್ಕು ಬದಲಾಯಿಸಿದ್ದು, ಮನೆ, ಮಂದಿರಗಳು ಜಲಾವೃತವಾಗಿವೆ.  ಕಳೆದ ತಿಂಗಳ ಹಿಂದಷ್ಟೇ ಮಳೆಗೆ ನಲುಕ್ಕಿದ್ದ ಜನರು ಕುಂಭದ್ರೋಣ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ಅಬ್ಬರ ಕಡಿಮೆಯಾದರೂ ಪ್ರವಾಹ ತಗ್ಗದ ಪರಿಸ್ಥಿತಿ ಕೆಲವು ಕಡೆ ನಿರ್ಮಾಣವಾಗಿದೆ. ಕಳೆದೆರಡು ವರ್ಷದಿಂದ ಪ್ರತಿ ಮಳೆಗಾಲದಲ್ಲಿಯೂ ಇಲ್ಲಿನ ಜನರು ನಾನಾಕಷ್ಟಗಳಿಗೆ ಗುರಿಯಾಗುತ್ತಿದ್ದಾರೆ. 

ಕಳೆದ ತಿಂಗಳು ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ನಿಪ್ಪಾಣಿ, ಚಿಕ್ಕೋಡಿ, ಅಥಣಿ, ಹುಕ್ಕೇರಿ, ಕಾಗವಾಡ ಹಾಗೂ ರಾಯಭಾಗದ ಜನರು ಸಂಕಷ್ಟಕ್ಕೆ ತುತ್ತಾಗಿದ್ದವು.   ಕೃಷ್ಣಾ ದೂದಗಂಗಾ ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳು ಉಕ್ಕಿ ಹರಿದ ಪರಿಣಾಮ ನೂರಾರು ಮನೆಗಳು ಸಾವಿರಾರು ಎಕರೆ ಪ್ರದೇಶದ ಬೆಳೆಗಳು ಸಂಪೂರ್ಣ ನಾಶವಾಗಿದ್ದವು. ಇದರಿಂದ ಇನ್ನೇನು ನಿಟ್ಟುಸಿರುವ ಬಿಡಬೇಕು ಎನ್ನುವಷ್ಟರಲ್ಲಿ ಮತ್ತೆ ಇಲ್ಲಿ ಮಳೆ ಅಬ್ಬರ ಶುರುವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಇಲ್ಲಿನ ಜನರ ಪರಿಸ್ಥಿತಿಯಾಗಿದೆ.

ಮಳೆಯಲ್ಲಿ ಸಿಲುಕಿದ ಮಹಿಳೆಯರ ರಕ್ಷಣಾ ಕಾರ್ಯ


ಬೆಳೆಗಳು ಕಟಾವಿಗೆ ಬರುವ ಸಂದರ್ಭದಲ್ಲಿ ಮಳೆಯ ರೌದ್ರನರ್ತನ ಆರಂಭವಾದ ಪರಿಣಾಮ ಜಮೀನಿನಲ್ಲಿ ನೀರು ನಿಂತು ಬೆಳೆ ಕೊಳೆಯುವ ಸ್ಥಿತಿ ತಲುಪಿವೆ. ಅದರಲ್ಲಿಯೂ ಇಲ್ಲಿನ ಪ್ರಮುಖ  ಬೆಳೆಗಳಾದ ಸೋಯಾಬೀನ್,  ಉದ್ದು, ಹೆಸರು,ಮೆಕ್ಕೆಜೋಳಗಳು ನೀರಿನಲ್ಲಿ ಮುಳುಗಿ ಹೋಗುತ್ತಿದ್ದು, ರೈತರು ದಿಕ್ಕು ತೋಚದಂತೆ ಆಗಿದ್ದಾರೆ. 

ಮಳೆಯಬ್ಬರದ ಜೊತೆ ಜೋರು ಗಾಳಿ ಬೀಸುತ್ತಿರುವ ಪರಿಣಾಮ  ಕಬ್ಬು ಬಳೆ ಸಹ ಸಂಪೂರ್ಣ ನೆಲ ಕಚ್ಚಿವೆ. ಅತಿಹೆಚ್ಚು ಕಬ್ಬು ಬೆಳೆಯುವ ಈ ಕ್ಷೇತ್ರದಲ್ಲಿ ಜನರು ಇನ್ನೇನು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಲು ಸಜ್ಜಾಗಿದ್ದರು. ಈ ವೇಳೆ ಮಳೆ, ಗಾಳಿ ಅವರ ಬೆಳೆ ನಾಶ ಮಾಡಿದ್ದು, ಇಳುವರಿ ಕಡಿಮೆ ಆಗುವ ಭಯ ಕಬ್ಬು ಬೆಳೆಗಾರರಲ್ಲಿ ಮೂಡಿದೆ.

ಇದನ್ನು ಓದಿ: ಕಲಬುರ್ಗಿಯಲ್ಲಿ ಮಳೆ ಇಳಿಮುಖವಾದರೂ ನಿಲ್ಲದ ಪ್ರವಾಹ ; ಗೋವುಗಳೊಂದಿಗೆ ಎತ್ತರದ ಕಟ್ಟಡವೇರಿ ಕುಳಿತ ಅರ್ಚಕ

ದೇವರಿಗೆ ಜಲ ದಿಗ್ಬಂಧನ

ಮಳೆಯಾರ ಬರಿ ರೈತಾಪಿ ಹಾಗೂ ಸಾಮಾನ್ಯ ಜನರಿಗಷ್ಟೆ ತೊಂದರೆ ನೀಡಿಲ್ಲ. ದೇವರು ಕೂಡ ಈ ಈ ಮಳೆಗೆ ನಲುಗಿದೆ.   ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಯಲ್ಲಮ್ಮ ದೇವಾಲಯದ ಸುತ್ತ ಜಲ ದಿಗ್ಬಂಧನವಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ  ದೇವಸ್ಥಾನ ಎದುರಿನಲ್ಲಿರುವ ಹಳ್ಳ ತುಂಬಿ ಹರಿಯುತ್ತಿದೆ ಪರಿಣಾಮ ಹಳ್ಳದ ನೀರು ದೇವಸ್ಥಾನಕ್ಕೆ ನುಗ್ಗಿ ಗರ್ಭಗುಡಿಯಲ್ಲಿ 4 ಅಡಿಯಲ್ಲಿ ನೀರು ತುಂಬಿಕೊಂಡಿದೆ.

ಇನ್ನು ಕಾಗವಾಡ ತಾಲೂಕಿ ಮಂಗಸೂಳಿ ಗ್ರಾಮದಲ್ಲಿನ ಹಳ್ಳ ಕೂಡ ತುಂಬಿ ಹರಿಯುತ್ತಿದೆ. ಹಳ್ಳ ತುಂಬಿ ಗ್ರಾಮದಲ್ಲಿನ ಸೇತುವೆ ಮುಳುಗಡೆಯಾಗಿದೆ ಅಲ್ಲದೆ ಹಳ್ಳದ ಅಕ್ಕಪಕ್ಕದ ಗ್ಯಾರೇಜ್ ಗಳಿಗೂ ನೀರು ತುಂಬಿದೆ. ಜನರ ಸಂಚಾರಕ್ಕೆ ಅಡ್ಡಿಯಾಗಿದೆ.

ಕೆಲಸಕ್ಕೆ ತೆರಳಿದ್ದ ಮಹಿಳೆಯರ ರಕ್ಷಣೆ

ಅಥಣಿ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆತೆಲಸಂಗ ಗ್ರಾಮದ ಹಳ್ಳ ಉಕ್ಕಿ ಹರಿಯುತ್ತಿದೆ. ಗದ್ದೆ ಕೆಲಸಕ್ಕೆ ಹೋಗಿ ಕೆಲ ಮಹಿಳೆಯರು ಹಳ್ಳ ದಾಟಾಲಾಗದೇ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದರು. ಕಡೆಗೆ ಮಹಿಳೆಯರನ್ನ ಸ್ಥಳೀಯರು ಹಗ್ಗದ ಮೂಲಕ ಹಳ್ಳ ದಾಟಿಸಿ ರಕ್ಷಣೆ ಮಾಡಲಾಗಿದೆ.
Published by:Seema R
First published: