Heavy Rain: ಮಳೆಯಿಂದ ಬಿದ್ದೋಯ್ತು ಮನೆ; ಕೇಳೋರಿಲ್ಲ ಮುಷ್ಟೂರು ಜನರ ನರಕಯಾತನೆ

ಯಾದಗಿರಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ 8ಕ್ಕೂ ಹೆಚ್ಚು ಮನೆಗಳು  ಹಾನಿಯಾಗಿವೆ. ಮನೆಗಳು ಹಾನಿಯಾದ ಹಿನ್ನೆಲೆ ವಾಸಕ್ಕೆ ಮನೆಯಿಲ್ಲದೇ ಮಹಿಳೆಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಗೆ ಮನೆ ಕುಸಿತ

ಮಳೆಗೆ ಮನೆ ಕುಸಿತ

  • Share this:
ಯಾದಗಿರಿ (ಆ.07): ಮಳೆ ಅಬ್ಬರ ಯಾದಗಿರಿಯಲ್ಲಿ (Yadagiri) ಮುಂದುವರೆದಿದೆ. ಮಳೆ ಅವಾಂತರಕ್ಕೆ ಜಿಲ್ಲೆಯ ಜನರು ನಲುಗಿ ಹೋಗಿದ್ದಾರೆ. ಬೆಳೆ ಹಾನಿ (Crop Loss) ಜೊತೆ ಮನೆಗಳು ಕೂಡ  ಹಾನಿಯಾಗಿದ್ದು, ಗಾಯದ ಮೇಲೆ ಬರೆ ಎDaಳೆದಂತಾಗಿದೆ. ವರುಣನ (Rain) ಅಬ್ಬರಕ್ಕೆ ಕಣ್ಣೀರು ಹಾಕುವಂತಾಗಿದೆ. ಯಾದಗಿರಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ 8 ಕ್ಕೂ ಹೆಚ್ಚು ಮನೆಗಳು  ಹಾನಿಯಾಗಿವೆ (Home Damage). ಮನೆಗಳು ಹಾನಿಯಾದ ಹಿನ್ನೆಲೆ ವಾಸಕ್ಕೆ ಮನೆಯಿಲ್ಲದೇ ಮಹಿಳೆಯರು (Women) ಸಂಕಷ್ಟ ಎದುರಿಸುವಂತಾಗಿದೆ.

ಒಂದು ಕಡೆ ಬೆಳೆ ಹಾನಿ!

ಮತ್ತೊಂದೆಡೆ ವಾಸ ಮಾಡುವ ಮನೆ ಕೂಡ ಕುಸಿದ ಪರಿಣಾಮ, ಮನೆ ಕಳೆದುಕೊಂಡು ನರಕಯಾತನೆ ಜೀವನ ನಡೆಸುವಂತಾಗಿದೆ. ಮನೆ ಹಾನಿಗೊಳಗಾಗಿ ಬಿದಿ ಪಾಲುಗುವಂತಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ. ಯಾದಗಿರಿ ಜಿಲ್ಲೆಯ ಜನರು ಮಳೆ ಅವಾಂತರಿಂದ ಸಂಕಷ್ಟದ ಜೀವನ ನಡೆಸುವಂತಾಗಿದೆ. ಜಿಲ್ಲೆಯಲ್ಲಿ ಬೆಳೆ ಹಾನಿ,ಮನೆ ಹಾನಿ ಹಾಗೂ ಇನ್ನಿತರ ಹಾನಿ ಸೇರಿ 78 ಕೋಟಿ ರೂಪಾಯಿ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಮಹಿಳೆಯರ ಪರದಾಟ


5400 ಹೆಕ್ಟೇರ್ ಬೆಳೆ ಹಾನಿ

ಜೂನ್ ನಿಂದ ಇಲ್ಲಿವರೆಗೆ 29.9 ಎಂ ಎಂ ಮಳೆಯಾಗಬೇಕಿತ್ತು ಆದರೆ,  120 ಎಂ ಎಂ ಮಳೆಯಾಗಿದೆ. ಸಿಡಿದು ಬಡಿದು  ಇಬ್ಬರು ಮೃತಪಟ್ಟಿದ್ದು 9 ಪ್ರಾಣಿಗಳು ಬಲಿಯಾಗಿದ್ದಾವೆ. ಈ ಬಗ್ಗೆ ನ್ಯೂಸ್​ 18 ಕನ್ನಡ ಜೊತೆ ಮಾತಾಡಿದ ಜಿಲ್ಲಾಧಿಕಾರಿ  ಸ್ನೇಹಲ್ ಆರ್​ ಕಳೆದ 1 ವಾರದಿಂದ ಸುರಿದ ಮಳೆಗೆ 289. ಮನೆಗಳು ಹಾನಿಯಾಗಿದ್ದು,78 ಕೋಟಿ ನಷ್ಟು ಹಾನಿಯಾಗಿದೆ ಎಂದರು. ಮನೆಯಿಂದ ಹಾನಿಯಾದವರಿಗೆ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದರು. ಜನರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ: Heavy Rain: ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ; ಸಾಕಪ್ಪ ಸಾಕು ನಿಲ್ಲೋ ಮಳೆರಾಯ

ಮುಷ್ಟೂರು ಗ್ರಾಮದ ಮಹಿಳೆಯರ ಸಂಕಷ್ಟ!

ಯಾದಗಿರಿ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ 8ಕ್ಕೂ ಹೆಚ್ಚು ಮನೆಗಳು  ಹಾನಿಯಾಗಿವೆ. ಮನೆಗಳು ಹಾನಿಯಾದ ಹಿನ್ನೆಲೆ ವಾಸಕ್ಕೆ ಮನೆಯಿಲ್ಲದೇ ಮಹಿಳೆಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.



ವರುಣನ ಆರ್ಭಟಕ್ಕೆ ರೈತರ ಕಣ್ಣೀರು

5400 ಹೆಕ್ಟೇರ್ ಪ್ರದೇಶದ  ಬೆಳೆ ಹಾನಿಯಾಗಿದೆ. ಹತ್ತಿ, ಹೆಸರು, ತೊಗರಿ ಬೆಳೆ ನೀರು ಪಾಲಾಗಿದೆ. ರೈತರು ಸಾಲ ಶೂಲ ಮಾಡಿ ಬೆಳೆ ಬೆಳೆದಿದ್ದರು ಆದರೆ, ವರುಣ ದೇವನ ಕಾಟಕ್ಕೆ ಜಿಲ್ಲೆಯ ರೈತರು ಕಣ್ಣೀರು ಹಾಕುವಂತಾಗಿದೆ. ಬೆಳೆ ನೀರು ಪಾಲಾಗಿ ಹಾನಿಯಾಗಿದೆ.

8ಕ್ಕೂ ಹೆಚ್ಚು ಮನೆಗಳು ನೆಲಸಮ

ಯಾದಗಿರಿ ತಾಲೂಕಿನ  ಮುಷ್ಟೂರು ಗ್ರಾಮದಲ್ಲಿ 8 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಕಳೆದ ಒಂದು ವಾರದಿಂದ ನಿರಂತರ ಮಳೆ ಬರುತ್ತಿರುವ ಪರಿಣಾಮ ಮನೆ ಕಳೆದುಕೊಂಡು ಮಹಿಳೆಯರು ವಾಸಕ್ಕೆ ಮನೆಯಿಲ್ಲದೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ನಮಗೆ ಪರಿಹಾರ ನೀಡಿ ಅನೂಕೂಲ ಮಾಡಬೇಕೆಂದು ಮಹಿಳೆಯರು ನೋವು ತೊಡಿಕೊಂಡಿದ್ದಾರೆ.

ಇದನ್ನೂ ಓದಿ: Heavy Rain: ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ; ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು!

ಸಿಇಓ ಅಮರೇಶ ನಾಯಕ ಜಾಗೃತಿ

ಈ ಬಗ್ಗೆ ಜಿಲ್ಲಾ ಪಂಚಾಯತ ಸಿಇಓ ಅಮರೇಶ ನಾಯಕ ಅವರು ಮಾತನಾಡಿ, ಜಿಲ್ಲೆಯಲ್ಲಿ 33 ಅಂಗನವಾಡಿ ಕೇಂದ್ರಗಳು ಹಾನಿಯಾಗಿವೆ. 260 ಶಾಲೆಗಳು ಮಳೆ ಬಂದಾಗ ಸೋರುತ್ತವೆ. ಮಳೆ ಬಂದು ಹೊಸ ನೀರು ಬರುವ ಹಿನ್ನೆಲೆ ಜನರು ಕಾಯಿಸಿ ಆರಿಸಿದ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ್ರು.

 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ 

ಇನ್ನು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ‌. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಧಿಕಾರಿಗಳು ಬೆಳೆ ಹಾನಿ, ಹಾಗೂ ಮನೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕಿದೆ.
Published by:Pavana HS
First published: