Heavy Rain: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಭೀತಿ; ವರುಣನ ಆರ್ಭಟಕ್ಕೆ ತತ್ತರಿಸಿದ ಜನ

ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುವ ಗಂಗಾವಳಿ ನದಿ ಮತ್ತೆ ತುಂಬಿ ಹರಿಯುತ್ತಿದೆ. ಕಾಳಿ ನದಿಯೂ ಕೂಡಾ ತುಂಬಿ ಹರಿಯುತ್ತಿದೆ. ನದಿ‌ತಟದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ‌.

ಭಾರೀ ಮಳೆ, ಪ್ರವಾಹ ಭೀತಿ

ಭಾರೀ ಮಳೆ, ಪ್ರವಾಹ ಭೀತಿ

  • Share this:
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರಿ ಮಳೆಯಾಗಿದೆ (Heavy Rain). ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಸಾಕಷ್ಟು ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುವ ಗಂಗಾವಳಿ ನದಿ ಮತ್ತೆ ತುಂಬಿ ಹರಿಯುತ್ತಿದೆ. ಕಾಳಿ ನದಿಯೂ (Kaali River) ಕೂಡಾ ತುಂಬಿ ಹರಿಯುತ್ತಿದೆ. ನದಿ‌ತಟದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ‌. ಕಳೆದ ಎರಡು ಬಾರಿ ಪ್ರವಾಹ ಪರಿಸ್ಥಿತಿ ಕಂಡ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಇವತ್ತು ಸುರಿದ ಮಳೆ ಮತ್ತೆ ಹಳೆಯ ಪ್ರವಾಹದ (Flood) ನೆನಪು ಮರುಕಳಿಸುವಂತೆ ಮಾಡಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲೆಯ ಮಳೆ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಭಟ್ಕಳ, ಕಾರವಾರ, ಕುಮಟಾ, ಹೊನ್ನಾವರ ಅಂಕೋಲಾ ದಲ್ಲಿ ಭಾರೀ ಪ್ರಮಾಣದಲ್ಲಿ ಮುಂಜಾನೆಯಿಂದಲೇ ವರುಣನ ಅಬ್ಬರ ಶುರುವಾಗಿದೆ. ಇದರ ಜತೆಗೆ ಜಿಲ್ಲೆಯ ಮಲೆನಾಡಿನ ತಾಲೂಕು ಶಿರಸಿ ಸಿದ್ದಾಪುರ, ಯಲ್ಲಾಪುರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ, ಇಲ್ಲಿಯೂ ಕೂಡಾ ಭರ್ಜರಿ ಮಳೆ ಆಗಿದೆ. ಇನ್ನು ಮುಂಡಗೋಡ, ಹಳಿಯಾಳ, ದಾಂಡೇಲಿ, ಜೋಯಿಡಾ ಭಾಗದಲ್ಲಿಯೂ ಭರ್ಜರಿ ಮಳೆ ಸುರಿಯುತ್ತಿದೆ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ, ಒಂದು ನಿಮಿಷವೂ ಕೂಡಾ ಬಿಡುವು ನೀಡದ ಮಳೆ ನಿರಂತರವಾಗಿ ಸುರಿಯುತ್ತಿರೋದ್ರಿಂದ ಜನ ಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿದೆ.

ಕುಮಟಾ ಶಿರಸಿ ಹೆದ್ದಾರಿ ಮದ್ಯೆ ಮರ ಬಿದ್ದು ಸಂಚಾರ ಸ್ಥಗಿತ

ಜಿಲ್ಲೆಯ ಕುಮಟಾ ಮತ್ತು ಶಿರಸಿ ರಾಜ್ಯ ಹೆದ್ದಾರಿ ಮದ್ಯೆ ಬೃಹತ್ ಮರ ಬಿದ್ದು ಸುಮಾರು ಐದಾರು ತಾಸುಗಳ ಕಾಲ ಸಂಚಾರ ಸ್ಥಗಿತವಾಯಿತು. ಒಂದು ಕಿಮಿ ವರೆಗೂ ವಾಹನ ಸಾಲು ಗಟ್ಟಿ ನಿಂತು ಸಂಚಾರಕ್ಕೆ ಅಡೆತಡೆ ಆಯಿತು ಸ್ಥಳಿಯರು ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿ ಅರಣ್ಯ ಇಲಾಖೆಯ ಸಿಬ್ಬಂದಿಯವರು ಯುದ್ದೋಪಾದಿಯಲ್ಲಿ  ಮರ ತೆರವು ಕಾರ್ಯ ಕೈಗೊಂಡು ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ಇದನ್ನೂ ಓದಿ: Karnataka Rains: ಕರಾವಳಿಯಲ್ಲಿ ಭಾರೀ ಮಳೆ, ಇಲ್ಲಿವೆ ಕೆಲವು ಫೊಟೋಸ್

ಅರ್ಗಾ ಗ್ರಾಮದಲ್ಲಿ ಮನೆಗೆ ನುಗ್ಗಿದ ನೀರು

ಕಾರವಾರ ತಾಲೂಕಿನ ಅರ್ಗಾ ಮತ್ತು‌ ಚೆಂಡೀಯಾ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಆವಂತರ ಸೃಷ್ಟಿ ಆಯಿತು. ಮನೆ ಮಂದಿಯಲ್ಲ ಮಳೆಗೆ ಬೇಸತ್ತು ಹೋದರು ಪಾತ್ರೆ ಪಗಡೆ ನೀರಿಗೆ ತೇಲಿ ಹೋಯಿತು, ಕೆಲ ಕುಟುಂಬ ಸ್ಥಳೀಯ ಕಾಳಜಿ ಕೇಂದ್ರ ಸೇರಿಕೊಂಡರು. ಅರ್ಗಾ ನೌಕಾ ನೆಲೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ಸಾಕಷ್ಟು ಸಮಸ್ಯೆ ಆಗಿದೆ. ವಾಹನ ಸವಾರರು ಪರದಾಡುವಂತ ಸ್ಥಿತಿ‌ ನಿರ್ಮಾಣ ವಾಯಿತು. ಇನ್ನು ಸದಾಶಿವಘಡ ಲೋಂಡಾ ರಾಜ್ಯ ಹೆದ್ದಾರಿ ಅಣಶಿ ಘಟ್ಟದಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಇದ್ರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪ್ರಾಣಭಯದಲ್ಲೆ ಸಂಚರಿಸುವಂತಾಗಿದೆ.

ಇದನ್ನೂ ಓದಿ: Suspend: ಕಳಂಕಿತ ಅಧಿಕಾರಿಗಳಿಗೆ ಅಮಾನತು ಶಿಕ್ಷೆ; ಡಿಸಿ ಮಂಜುನಾಥ್, ಎಡಿಜಿಪಿ ಅಮೃತ್ ಪೌಲ್ ಸಸ್ಪೆಂಡ್

ಇನ್ನು ಗಂಗಾವಳಿ ನದಿ ಉಕ್ಕಿ ಹರಿಯುತ್ತಿರೋದ್ರಿಂದ ಗಂಗಾವಳಿ ನದಿ ಆಚೆ ಪ್ರದೇಶದ ಬೇಡ್ಕಣಿ, ಬೆದ್ರಳ್ಳಿ, ವಜ್ರಳ್ಳಿ, ಡೋಂಗ್ರಿ ಗ್ರಾಮದ ಜನರು ಪರದಾಡುವಂತಾಗಿದೆ ಕಳೆದ ವರ್ಷದ ಗಂಗಾವಳಿ ನದಿ ಪ್ರವಾಹಕ್ಕೆ ಭಾರಿ ನಷ್ಟ ಅನುಭವಿಸಿದ ಜನರು ಈ ಭಾರಿ ಮತ್ತೆ ಪ್ರವಾಹದ ಆತಂಕದಲ್ಲೆ ಇದ್ದಾರೆ. ಇವತ್ತು ಒಂದೇ ದಿನ ಸುರಿದ ಮಳೆ ಭಾರಿ ಆವಂತರ ಸೃಷ್ಟಿ ಮಾಡಿದೆ.

ಭಾರೀ ಮಳೆ ಶಾಲೆ ಕಾಲೇಜುಗಳಿಗೆ ರಜೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಇನ್ನು ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಎಲ್ಲಡೆ ಎಚ್ಚರಿಕೆಯಿಂದ ಇರಲು ಹವಮಾನ‌ಇಲಾಖೆ ಸೂಚಿಸಿದೆ.
Published by:Pavana HS
First published: