ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಅಬ್ಬರಿಸಿದ ವರುಣ; ಏರ್​ಪೋರ್ಟ್ ರಸ್ತೆ ಸೇರಿ ಹಲವೆಡೆ ಸಂಚಾರ ಅಸ್ತವ್ಯಸ್ತ

ಸತತ ಅರ್ಧಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ಶಿವಾನಂದ ಸರ್ಕಲ್ ಬಳಿಯ ಅಂಡರ್​ಪಾಸ್​ನಲ್ಲಿ ಮಂಡಿಯುದ್ಧ ನೀರು ನಿಂತಿದೆ. ಅಂಡರ್ ಪಾಸ್ ದಾಟಲು ಬೈಕ್ ಮತ್ತು ವಾಹನ ಸವಾರರ ಪರದಾಡುವಂತಾಗಿದೆ.

HR Ramesh | news18-kannada
Updated:November 9, 2019, 10:16 PM IST
ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಅಬ್ಬರಿಸಿದ ವರುಣ; ಏರ್​ಪೋರ್ಟ್ ರಸ್ತೆ ಸೇರಿ ಹಲವೆಡೆ ಸಂಚಾರ ಅಸ್ತವ್ಯಸ್ತ
ಮಳೆಯ ದೃಶ್ಯ
  • Share this:
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶನಿವಾರ ರಾತ್ರಿ ಏಕಾಏಕಿ ಧಾರಾಕಾರ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತಾಯಿತು. 

ಬೆಂಗಳೂರಿನ ಕೇಂದ್ರ ಮತ್ತು ಉತ್ತರ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮೆಜೆಸ್ಟಿಕ್, ಶಿವಾನಂದ, ಮಲ್ಲೇಶ್ವರಂ, ಶೇಷಾದ್ರಿಪುರಂ, ಸದಾಶಿವನಗರ, ಹೆಬ್ಬಾಳ, ಏರ್ಪೋರ್ಟ್ ರಸ್ತೆ ಸುತ್ತಮುತ್ತ ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಏರ್ಪೋರ್ಟ್ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಜೋರು ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸತತ ಅರ್ಧಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ಶಿವಾನಂದ ಸರ್ಕಲ್ ಬಳಿಯ ಅಂಡರ್​ಪಾಸ್​ನಲ್ಲಿ ಮಂಡಿಯುದ್ಧ ನೀರು ನಿಂತಿದೆ. ಅಂಡರ್ ಪಾಸ್ ದಾಟಲು ಬೈಕ್ ಮತ್ತು ವಾಹನ ಸವಾರರ ಪರದಾಡುವಂತಾಗಿದೆ.

ಇದನ್ನು ಓದಿ: ನೆರೆ ಸಂತ್ರಸ್ತರಿಗೆ ಬಂದ 21 ಕೋಟಿ ರೂ. ಪರಿಹಾರ ಹಣ ತನ್ನ ಖಾಸಗಿ ಬ್ಯಾಂಕ್​ ಖಾತೆಗೆ ಹಾಕಿಕೊಂಡ ಅಧಿಕಾರಿ

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading