• Home
  • »
  • News
  • »
  • state
  • »
  • Rain Update: ರಾಜ್ಯದಲ್ಲಿ ನಿಲ್ಲದ ಮಳೆಯಬ್ಬರ, ಹಲವೆಡೆ ಅವಾಂತರ - ಎಲ್ಲೆಲ್ಲಿ ಏನಾಯ್ತು?

Rain Update: ರಾಜ್ಯದಲ್ಲಿ ನಿಲ್ಲದ ಮಳೆಯಬ್ಬರ, ಹಲವೆಡೆ ಅವಾಂತರ - ಎಲ್ಲೆಲ್ಲಿ ಏನಾಯ್ತು?

ರಾಜ್ಯದಲ್ಲಿ ಮಳೆ ಅಬ್ಬರ

ರಾಜ್ಯದಲ್ಲಿ ಮಳೆ ಅಬ್ಬರ

ರಾಜ್ಯದಲ್ಲಿ ಮಳೆಯಬ್ಬರ ನಿಲ್ಲುತ್ತಿಲ್ಲ. ದಿನೇದಿನೇ ವರುಣಾರ್ಭಟ ಹೆಚ್ಚಾಗ್ತಿದೆ. ಕರಾವಳಿಯಲ್ಲಿ ಮಳೆ ಹೆಚ್ಚಾಗಿದ್ದು ಈಗ ಉತ್ತರ ಕರ್ನಾಟಕದಲ್ಲೂ ವರುಣ ಅಬ್ಬರಿಸ್ತಿದ್ದಾನೆ. ನಿರಂತರ ಮಳೆಯಿಂದ ಜನ ವರುಣದೇವನಿಗೆ ಹಿಡಿಶಾಪ ಹಾಕುವಂತಾಗಿದೆ. ಎಲ್ಲೆಲ್ಲಿ ಏನೇನಾಗಿದೆ..

  • Share this:

ರಾಜ್ಯದಲ್ಲಿ (Karnataka) ಮಳೆಯಬ್ಬರ (Rain) ನಿಲ್ಲುತ್ತಿಲ್ಲ. ದಿನೇದಿನೇ ವರುಣಾರ್ಭಟ ಹೆಚ್ಚಾಗ್ತಿದೆ. ಕರಾವಳಿಯಲ್ಲಿ (Costal ) ಮಳೆ ಹೆಚ್ಚಾಗಿದ್ದು ಈಗ ಉತ್ತರ ಕರ್ನಾಟಕದಲ್ಲೂ (Uttara Karnataka) ವರುಣ ಅಬ್ಬರಿಸ್ತಿದ್ದಾನೆ. ಬೆಂಗಳೂರಿನಲ್ಲೂ (Bangalore) ಸಂಜೆ ಬಳಿಕ ಮಳೆಯಾಗುತ್ತಿದೆ. ಯಾದಗಿರಿಯಲ್ಲಿ ಮಳೆಗೆ ದೇಗುಲಕ್ಕೆ (Temple) ನೀರು ನುಗ್ಗಿದೆ. ಅರ್ಚಕರ ಮನೆಗೂ ಪ್ರವಾಹ (Flood) ಎಫೆಕ್ಟ್​ ತಟ್ಟಿದೆ. ಕೋಲಾರದಲ್ಲೂ ಮಳೆಯಬ್ಬರ ಜೋರಾಗಿದೆ. ತುಮಕೂರಿನಲ್ಲಿ ಮನೆಗಳಿಗೆ ಪ್ರವಾಹ ನುಗ್ಗಿದೆ. ಕೋಲಾರ, ತುಮಕೂರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕೆರೆಗಳ ಕೋಡಿ ಒಡೆದಿದೆ. ಗ್ರಾಮಗಳತ್ತ ನೀರು ನುಗ್ಗಿ ಬರ್ತಿದೆ. ಮಂಡ್ಯದಲ್ಲಿ ಶಾಲೆಗೆ ರಜೆ (School Holiday) ನೀಡಲಾಗಿದೆ. ನಿರಂತರ ಮಳೆಯಿಂದ ಜನ ವರುಣದೇವನಿಗೆ ಹಿಡಿಶಾಪ ಹಾಕುವಂತಾಗಿದೆ. ಎಲ್ಲೆಲ್ಲಿ ಏನೇನು ಮಳೆ ಅವಾಂತರವಾಗಿದೆ ಅನ್ನೋದರ ವಿವರ ಇಲ್ಲಿದೆ.


ಕೋಲಾರ, ತುಮಕೂರಲ್ಲಿ ಧಾರಾಕಾರ ಮಳೆ


ಕೋಲಾರದಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 4 ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಕೋಲಾರ ಹಾಗೂ ಮಣಿಘಟ್ಟ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೋಲಾರಮ್ಮ ಕೆರೆ ಕೋಡಿ ಒಡೆದ ಹಿನ್ನಲೆ ಕೋಲಾರ ನಗರ ಹಾಗೂ ಗದ್ದೆಕಣ್ಣೂರು ಗ್ರಾಮದ ರಸ್ತೆ ಸಂಪರ್ಕ ಬಂದ್ ಆಗಿದೆ.


ತುಮಕೂರಿನ ಮಧುಗಿರಿ ತಾಲೂಕಿನ ಚನ್ನಸಾಗರ ಗ್ರಾಮ ಜಲಾವೃತಗೊಂಡಿದೆ. ಜಯಮಂಗಲಿ ನದಿಯ ನೀರು ಗ್ರಾಮದ ಹಲವು ಮನೆಗಳಿಗೆ, ಶಾಲೆ, ಹಾಲಿನ ಡೈರಿ ಒಳಗೂ ನುಗ್ಗಿದೆ. 35ನೇ ವಾಡ್೯ನಲ್ಲಿ ಬೃಹತ್ ಆಲದ ಮರ ಧರೆಗುರುಳಿದೆ.


ಗದಗ, ಯಾದಗಿರಿಯಲ್ಲಿ ವರುಣಾರ್ಭಟ


ಗದಗದಲ್ಲೂ ಮಳೆಯಾಗುತ್ತಿದ್ದು ತುಂಬಿ ಹರಿಯುವ ಹಳ್ಳದಲ್ಲೇ ಬಸ್, ಟ್ರಾಕ್ಟರ್​ ಚಲಾಯಿಸುತ್ತಿದ್ದಾರೆ.  ಗದಗದಲ್ಲಿ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಕೂಡ ನಡೆಯಿತು. ಯಾದಗಿರಿಯಲ್ಲಿ ಮಳೆ ಅಬ್ಬರಕ್ಕೆ ಶಹಾಪುರ ತಾಲೂಕಿನ ಸಗರ ಗ್ರಾಮದ ನಾಗಲಿಂಗೇಶ್ವರ ದೇವಸ್ಥಾನದೊಳಗೆ ನೀರು ನುಗ್ಗಿದೆ.ಮಾತ್ರವಲ್ಲದೇ ದೇವಸ್ಥಾನದ ಅರ್ಚಕರ ಮನೆಗು ನೀರು ನುಗ್ಗಿದೆ.


Karnataka heavy rain district level school holiday temple flood effect
ರಾಜ್ಯದ ಹಲವೆಡೆ ಮಳೆಯಬ್ಬರ


ಕೆಸರಿನಲ್ಲಿ ಸಿಲುಕಿದ ಬಸ್


ಕೊಪ್ಪಳದಲ್ಲೂ ಮಳೆಯಾಗುತ್ತಿದ್ದು ಬಸ್​ ಒಂದು ಕೆಸರಿನಲ್ಲಿ ಸಿಲುಕಿ ವಿದ್ಯಾರ್ಥಿಗಳು ಪರದಾಡುವಂತಾಯ್ತು. ನಂತರ ಕ್ರೇನ್ ಮೂಲಕ ಬಸ್​​ನ್ನು ಕೆಸರಿನಿಂದ ಹೊರತೆಗೆಯಲಾಯ್ತು.


ಮಂಡ್ಯದಲ್ಲಿ ಮಳೆ ಹಿನ್ನೆಲೆ ಕೆ.ಆರ್.ಪೇಟೆ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಂಡ್ಯದಲ್ಲಿ ಮಳೆ ನಡುವೆ ಈಗ ಹಾವುಗಳ ಕಾಟ ಶುರುವಾಗಿದೆ. ಪೊಲೀಸ್ ವಸತಿ ಗೃಹದ ಸುತ್ತ ಹಾವುಗಳು ಪ್ರತ್ಯಕ್ಷವಾಗಿದೆ. ಮಂಡ್ಯದಲ್ಲಿ ಮಳೆ ಹಿನ್ನೆಲೆ ಬೆಂಗಳೂರು- ಮೈಸೂರು ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ.


ಇದನ್ನೂ ಓದಿ: ಮುಸ್ಲಿಂ ಯುವಕನ ಜೀವ ಉಳಿಸಿದ ಹಿಂದೂ ಯುವಕ! ಮಾನವೀಯತೆಗಿಂತ ಮಿಗಿಲಾದ ಧರ್ಮ ಇಹುದೇನು?


ಕೊಡಗಿನಲ್ಲಿ ಮತ್ತೆ ಭೂಕುಸಿತ ಆತಂಕ


ಕೊಡಗಿನಲ್ಲಿ ಮತ್ತೆ ರಾಷ್ಟ್ರೀಯ ಹೆದ್ದಾರಿ 275 ಕುಸಿದು ಹೋಗುವ ಆತಂಕ ಎದುರಾಗಿದೆ. ಮಡಿಕೇರಿ ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿ 275 ಕೊಯಿನಾಡು ದೇವರಕೊಲ್ಲಿ ನಡುವೆ 2 ಅಡಿ ಆಳಕ್ಕೆ ಕುಸಿದಿದೆ. ಸದ್ಯ ಬ್ಯಾರಿಕೇಡ್ ಹಾಕಿ ಪೊಲೀಸರು ಸಂಚಾರ ನಿಯಂತ್ರಣ ಮಾಡಿದ್ದಾರೆ.


Karnataka heavy rain district level school holiday temple flood effect
ಕೊಡಗಿನಲ್ಲಿ ಮಳೆ ಅವಾಂತರ


ಎಲ್ಲೆಲ್ಲಿ ಮಳೆಯಾರ್ಭಟ..?


ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಜೋರಾಗಿದ್ದು ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಚಿಂಚೋಳಿ-ದೇಗಲಮಡಿ ಮಧ್ಯೆಯ ಸೇತುವೆ ಮುಳುಗಡೆಯಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಜಲಾವೃತಗೊಂಡಿದೆ. ದಕ್ಷಿಣ ಕನ್ನಡದಲ್ಲಿ ಸಚಿವ ಸುನಿಲ್ ಕುಮಾರ್ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.


ಇದನ್ನೂ ಓದಿ: ಕಾಡುಗಳ್ಳರಿಗೆ ಸಿಂಹಸ್ವಪ್ನ ಬಂಡಿಪುರದ ರಾಣಾ ಸಾಹಸಗಳಿವು!


ರಾಜ್ಯದಲ್ಲಿ ಇನ್ನೊಂದು ವಾರ ಮಳೆ ಅಲರ್ಟ್​


ರಾಜ್ಯದಲ್ಲಿ ಇನ್ನೊಂದು ವಾರ ಮಳೆ‌ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಬೆಂಗಳೂರು, ಬೆಂ.ಗ್ರಾಮಾಂತರದಲ್ಲೂ ಭಾರಿ ಮಳೆ ಸಾಧ್ಯತೆ ಇದೆ. ಕರಾವಳಿಯಲ್ಲಿ ರೆಡ್  ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಿಗೂ ಭಾರಿ ಮಳೆ ಸಾಧ್ಯತೆ ಇದೆ.

Published by:Thara Kemmara
First published: