Rain Effects: ರಾಜ್ಯದ ಹಲವೆಡೆ ವರುಣನ ಆರ್ಭಟ- ಮಳೆರಾಯನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

Destruction From Rain: ಅಲ್ಲದೇ ಕಳೆದ ರಾತ್ರಿ ಧಾರಾಕಾರ ಮಳೆ ಕಾರಣದಿಂದ ಮಂಡ್ಯದ ಕೆಆರ್‌ ಪೇಟೆಯ ಮಲ್ಲೇನಹಳ್ಳಿಯಲ್ಲಿ‌ ಮನೆಯೊಂದು ಧರೆಗುಳಿದಿದ್ದು, ಮನೆ ಬಿದ್ದ ಪರಿಣಾಮ ಒಂದು ಎಮ್ಮೆ ಸಾವನ್ನಪ್ಪಿದ್ದು, ನಾಲ್ಕೈದು ಮೇಕೆಗಳು ಗಾಯಗೊಂಡಿವೆ

ಮಳೆಯಿಂದ ಧರೆಗುರುಳಿದ ಮನೆ

ಮಳೆಯಿಂದ ಧರೆಗುರುಳಿದ ಮನೆ

  • Share this:
ರಾಜ್ಯದ(State) ಹಲವು ಭಾಗಗಳಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆ(Heavy Rainfall) ಸುರಿಯುತ್ತಿದ್ದು, ಜಿಲ್ಲೆಗಳ ವಿವಿಧೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ರಸ್ತೆಗಳು ಜಲಾವೃತಗೊಂಡಿದ್ದರೆ ಇನ್ನೂ ಹಲವೆಡೆ  ಮನೆ ಕುಸಿದಿದೆ. ಯಾವ್ಯವ ಜಿಲ್ಲೆಗಳಲ್ಲಿ ಮಳಿಯಿಂದ ಏನೆಲ್ಲಾ ಅನಾಹುತ ಆಗಿದೆ ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ.

ಮಂಡ್ಯದಲ್ಲಿ ರಾತ್ರಿ ಸುರಿದ ಮಳೆಗೆ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿ

ಭಾರೀ ಮಳೆ ಹಿನ್ನಲೆ ಸೇತುವೆ  ದಾಟುತ್ತಿದ್ದಾಗ ಬೈಕ್ ಸಮೇತ ಬೈಕ್ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಸಾರಂಗಿ ಗ್ರಾಮದ ಬಳಿ ಘಟನೆ ನಡೆದಿದ್ದು, ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಸಾರಂಗಿ ಸೇತುವೆ ತುಂಬಿ ಹರಿಯುತ್ತಿದ್ದು, ಈ ವೇಳೆ ಬೈಕ್ ನಲ್ಲಿ ಬರ್ತಿದ್ದ  ಕೈಗೋನಹಳ್ಳಿ ಗ್ರಾಮದ ಉದಯಕುಮಾರ್ ಕೊಚ್ಚಿ ಹೋಗಿದ್ದಾರೆ.

ರಾತ್ರಿ ಮನೆಯವರಿಗೆ ಕರೆ ಮಾಡಿ ಬರ್ತಿದ್ದೀನಿ ಎಂದು ಹೇಳಿದ್ದ ಉದಯ್, ಬೆಳಗಾದರೂ ಬಾರದಿದ್ದರಿಂದ ಮನೆಯವರು ಹುಡುಕಾಡಿದ್ದಾರೆ, ಆಗ ಸಾರಂಗಿ ಸೇತುವೆ ಬಳಿ ಉದಯ್ ಬೈಕ್ ಪತ್ತೆಯಾಗಿದೆ.  ಆದರೆ ಉದಯ್ ಇನ್ನೂ ಪತ್ತೆಯಾಗಿಲ್ಲ ಹಾಗಾಗಿ ಉದಯ್‌ಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ.

ಅಲ್ಲದೇ ಕಳೆದ ರಾತ್ರಿ ಧಾರಾಕಾರ ಮಳೆ ಕಾರಣದಿಂದ ಮಂಡ್ಯದ ಕೆಆರ್‌ ಪೇಟೆಯ ಮಲ್ಲೇನಹಳ್ಳಿಯಲ್ಲಿ‌ ಮನೆಯೊಂದು ಧರೆಗುಳಿದಿದ್ದು, ಮನೆ ಬಿದ್ದ ಪರಿಣಾಮ ಒಂದು ಎಮ್ಮೆ ಸಾವನ್ನಪ್ಪಿದ್ದು, ನಾಲ್ಕೈದು ಮೇಕೆಗಳು ಗಾಯಗೊಂಡಿವೆ.

ಇದನ್ನೂ ಓದಿ: ಇಂದಿನಿಂದ 2 ದಿನ ಬೆಂಗ್ಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಮಳೆ ಗುರೂ.. ಸ್ವಲ್ಪ ಹುಷಾರು..!

ಹಾಸನದಲ್ಲಿ ಜನರ ನಿದ್ರೆ ಕೆಡಿಸಿದ ಮಳೆರಾಯ

ಇನ್ನು  ಹಾಸನ ಜಿಲ್ಲೆಯ ಹಲವೆಡೆ ರಾತ್ರಿ ಭಾರಿ ಮಳೆಯಾಗುತ್ತಿದ್ದು. ಹಲವಾರು ಮನೆಗೆ ನೀರು ನುಗ್ಗಿದೆ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಅಗ್ಗುಂದ ತಾಂಡ್ಯದಲ್ಲಿ ಹಲವು ಮನೆಗೆ ನೀರು ಸೇರಿದ್ದು, ದಿನಸಿ ಸೇರಿ ಅಗತ್ಯ ವಸ್ತುಗಳು ನೀರಿಗಾಹುತಿಯಾಗಿದೆ. ಅಗತ್ಯ ವಸ್ತು ಸಂರಕ್ಷಣೆ ಮಾಡಲು ಮನೆಯವರ ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ರಾತ್ರಿ ಭಾರೀ ಮಳೆ ಮಳೆ ಸುರಿದ ಕಾರಣ ಮನೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಅಲ್ಲದೇ, ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಕೆರೆ ಒಡೆಯುವ ಭೀತಿ ಎದುರಾಗಿದ್ದು, ನಿರಂತರ ಮಳೆಯಿಂದ 20 ವರ್ಷಗಳ ಬಳಿಕ ದೊಡ್ಡಕರೆ ತುಂಬಿದ್ದು ತಕ್ಷಣ ದುರಸ್ಥಿ ಮಾಡದಿದ್ದರೆ ತುಂಬಿರುವ 125 ಎಕರೆ ವಿಸ್ತಾರವಾದ ಕೆರೆ ಒಡೆಯುವ ಆತಂಕ ಎದುರಾಗಿದೆ.  ಕೆರೆ ಏರಿ ಒಡೆದರೆ ಸಮೀಪದ ಹೆಗ್ಗಟ್ಟ ಗ್ರಾಮದ ನೂರಾರು ಮನೆಗಳು ಜಲಾವೃತ ಆಗುವ ಆತಂಕ ಕಾಡುತ್ತಿದ್ದು, ತಾತ್ಕಾಲಿಕವಾಗಿ ಕೆರೆ ಏರಿ ದುರಸ್ಥಿ ಮಾಡುವಂತೆ ಸ್ಥಳೀಯರ ಒತ್ತಾಯ ಮಾಡಿದ್ದಾರೆ.  ಕೆರೆಯ ಹಿಂಭಾಗದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ  ರೈತರು ಜೋಳ ಬೆಳೆದಿದ್ದು, ಕೆರೆಯ ಬಳಿ ಸುಮಾರು 100 ಮೀಟರ್ ನಷ್ಟು ಭೂಕುಸಿತವಾಗಿದೆ.

ಜಿಲ್ಲೆಯ    ಚನ್ನರಾಯಪಟ್ಟಣ ತಾಲ್ಲೂಕಿನ ಕೆಂಬಾಳು ಗ್ರಾಮದ ಬಳಿ  ರಸ್ತೆ ಸಂಪರ್ಕ ಕಡಿತವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿದ್ದು, ತೋಟ, ಹೊಲ, ಗದ್ದೆಗಳು ಜಲಾವೃತವಾಗಿದೆ.

ಮಳೆಯ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದ್ದು, ಸಾರಿಗೆ ಬಸ್ ಗಳ ಸಂಚಾರ ಸ್ಥಗಿತವಾಗಿದೆ. ಚನ್ನರಾಯಪಟ್ಟಣ ಹಾಗೂ ತಿಪಟೂರು ಮಾರ್ಗ ಬಂದ್ ಆಗಿದ್ದು, ಜನರು ಪರದಾಡುತ್ತಿದ್ದಾರೆ.

ಗದಗದಲ್ಲೂ ಹೆಚ್ಚಾದ ವರುಣನ ಆರ್ಭಟ

ಇದನ್ನೂ ಓದಿ: ಬೆಂಗಳೂರಿಗರಿಗೆ ವೀಕೆಂಡ್ ಶಾಕ್, ಡಿ.4ರಿಂದ ಡಿ. 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಗದಗ ಜಿಲ್ಲೆಯಲ್ಲಿ ಸಹ ಮುಂಡರಗಿ ಭಾಗದಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದು, ಅಕಾಲಿಕ ಮಳೆಗೆ ಮನೆ ಗೋಡೆ ಕುಸಿತ, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಂಡರಗಿ ತಾಲೂಕಿನ ಹಾರೊಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಡರಾತ್ರಿ ವೇಳೆ ಮನೆಗೋಡೆ ಕುಸಿದಿದೆ. ಕೆಲವು ಗೃಹೋಪಯೋಗಿ ವಸ್ತುಗಳು ಮಣ್ಣು ಪಾಲಾಗಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Published by:Sandhya M
First published: