ಮಲೆನಾಡಲ್ಲೂ ವರುಣನ ರುದ್ರನರ್ತನ ; ಉ.ಕದಲ್ಲಿ ಮುಂದುವರೆದ ಭಾರೀ ನೆರೆ

ಉತ್ತರ ಕನ್ನಡ ಜಿಲ್ಲೆಯ ಕಾಳಿ, ಅಘನಾಶಿನಿ, ಗಂಗಾವಳಿ ನದಿಗಳು ಹಾಗೂ ಹಳ್ಳಗಳು ಉಕ್ಕಿ ಹರಿಯುತ್ತಿದೆ. ಕರಾವಳಿಯ 20ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತ. 800ಕ್ಕೂ ಅಧಿಕ ಮನೆಗಳಿಗೆ ನೀರು, 50ಕ್ಕೂ ಹೆಚ್ಚು ಮನೆಗಳು ಕುಸಿತವಾಗಿವೆ.

G Hareeshkumar | news18
Updated:August 7, 2019, 7:43 PM IST
ಮಲೆನಾಡಲ್ಲೂ ವರುಣನ ರುದ್ರನರ್ತನ ; ಉ.ಕದಲ್ಲಿ ಮುಂದುವರೆದ ಭಾರೀ ನೆರೆ
ಮಳೆಗೆ ರಸ್ತೆಯೊಂದು ನೀರು ತುಂಬಿಕೊಂಡಿರುವುದು
  • News18
  • Last Updated: August 7, 2019, 7:43 PM IST
  • Share this:
ಬೆಂಗಳೂರು (ಆ.07) : ಉತ್ತರ ಕರ್ನಾಟಕದ ಕೃಷ್ಣಾ ನದಿ ತೀರದ ಜಿಲ್ಲೆಗಳಲ್ಲಿ ಪ್ರವಾಹದ ಸಂಕಷ್ಟ ಮುಂದುವರೆದಿರುವಂತೆ ಈಗ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲೂ ಮಳೆ ಆರ್ಭಟ ಜೋರಾಗಿದೆ. ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ, ಕೆರೆಗಳು ಉಕ್ಕಿ ಹರಿದು ಜನಜೀವನ ಸಂಪುರ್ಣ ಅಸ್ತವ್ಯಸ್ಥ ಗೊಂಡಿದೆ.

ಮಹಾಮಳೆಗೆ ಬೆಳಗಾವಿ ಜಿಲ್ಲೆ ತತ್ತರ

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣನದಿಯಲ್ಲಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಪ್ರವಾಹ ಸ್ಥಿತಿ ಉಂಟಾಗಿದೆ. ಈ ನಡುವೆ ಮಹಾಮಳೆಗೆ ಬೆಳಗಾವಿ ಜಿಲ್ಲೆ ನಲುಗಿ ಹೋಗಿದ್ದು ಜಿಲ್ಲೆಯ ಹಲವು ಗ್ರಾಮಗಳು ಜಲಾವೃತವಾಗವೆ .ಇದರಿಂದ ಜನರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಸೇತುವೆಗಳು ಜಲಾವೃತವಾಗಿವೆ. ಹಾಗೆಯೇ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಖೊದನಾಪುರದಲ್ಲಿ 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು ಕುಟುಂಬಗಳು ಬೀದಿಪಾಲಾಗಿದ್ದಾರೆ. ಗೋಕಾಕ್ ತಾಲ್ಲೂಕಿನ ತಿಳಕನಾಳ ಗ್ರಾಮದಲ್ಲೂ 200ಕ್ಕೂ ಹೆಚ್ಚುಮನೆಗಳಿಗೆ ನೀರು ನುಗ್ಗಿದ್ದು ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ

ಮಲೆನಾಡಿನಲ್ಲಿ ಅರ್ಭಟಿಸಿದ ಮಳೆರಾಯ

ಕಳೆದೊಂದು ವಾರದಿಂದ ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಚಾರ್ಮೂಡಿ ಘಾಟ್​ನಲ್ಲಿ ಕೆಲವೆಡೆ ಮರಗಳು ಉರುಳಿ ಬಿದ್ದಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರದಿಂದ ಚಾರ್ಮಾಡಿ ಮೂಲಕ ಸಾಗುವ ಆಲೇಖಾನ್ ಹೊರಟ್ಟಿ ರಸ್ತೆ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ.ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ, ಬಾಳೆಹೊನ್ನೂರಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಹೇಮಾವತಿ, ತುಂಗಾ-ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ.

ಇದನ್ನೂ ಓದಿ : ಮಳೆ ಪ್ರವಾಹದಿಂದ ಸಂಪರ್ಕ ಕಳೆದುಕೊಂಡ ಊರುಗಳು; ರಾಜ್ಯದಲ್ಲಿ ಸಂಚಾರ ಸ್ಥಗಿತಗೊಂಡ ರಸ್ತೆಗಳ ವಿವರ ಇಲ್ಲಿದೆಉತ್ತರ ಕನ್ನಡ ಜಿಲ್ಲೆಯ ಕಾಳಿ, ಅಘನಾಶಿನಿ, ಗಂಗಾವಳಿ ನದಿಗಳು ಹಾಗೂ ಹಳ್ಳಗಳು ಉಕ್ಕಿ ಹರಿಯುತ್ತಿದೆ. ಕರಾವಳಿಯ 20ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತ. 800ಕ್ಕೂ ಅಧಿಕ ಮನೆಗಳಿಗೆ ನೀರು, 50ಕ್ಕೂ ಹೆಚ್ಚು ಮನೆಗಳು ಕುಸಿತವಾಗಿವೆ. ಅಘನಾಶಿನಿ ನದಿಯಲ್ಲಿ ಪ್ರವಾಹ ಕಾರಣ ಶಿರಸಿ ಬಳಿಯ ಸರಕುಳಿ ಸೇತುವೆ ಮುಳುಗಿ ಮಹಿಷಾಸುರ ಮರ್ದಿನಿ ದೇವಾಲಯ ಜಲಾವೃತ ಗೊಂಡಿವೆ. ಶಿವಮೊಗ್ಗ ನಗರದ ಕೋಟೆ ರಸ್ತೆ ಬಳಿ ಇರುವ ತುಂಗಾ ಮಂಟಪ ಬಳಿ ಕಾಲು ಜಾರಿ ಮಹಿಳೆಯೊಬ್ಬರು  ನೀರು ಪಾಲಾಗಿದ್ದಾರೆ.

ಸಂಚಾರ ವ್ಯತ್ಯಯ

ರೈಲ್ವೆ ಹಳಿಗಳು ಜಲಾವೃತಗೊಂಡಿದ್ದರಿಂದ ಮಂಗಳವಾರ ಬೆಳಗಿನ ಜಾವದಿಂದ ಲೋಂಡಾ-ತಿನೈಘಾಟ್ ಮಧ್ಯದ ರೈಲ್ವೆ ಮಾರ್ಗ ಸ್ಥಗಿತಗೊಳಿಸಲಾಗಿದೆ. ಈ ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಸಕಲೇಶಪುರ ತಾಲೂಕಿನ ಶಿರವಾಗಿಲು 86ನೇ ಕಿ.ಮೀ.ನಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದ ಪರಿಣಾಮ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆ ಹಿನ್ನೆಲೆ ಚಾರ್ಮಾಡಿ ಘಾಟ್​​​​​ ನಲ್ಲಿ ಗುಡ್ಡ ಕುಸಿದು ರಸ್ತೆಯನ್ನು ಇಂದಿನಿಂದ ಎರಡು ದಿನ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

First published:August 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ