HOME » NEWS » State » HEAVY RAIN IN COASTAL AREA IN DAKSHINA KANNADA SESR AKP

ಕರಾವಳಿಯಲ್ಲಿ ಭಾರೀ ಮಳೆ; ಮತ್ತೆ ಸಂಪರ್ಕ ಕಡಿದುಕೊಂಡ ತೀರೆಬೀದಿ ಗ್ರಾಮ

ಸುಳ್ಯ, ಪುತ್ತೂರು, ಬ್ರಹ್ಮಾವರ, ಕಾಪು, ಬೆಳ್ತಂಗಡಿ, ಬೈಂದೂರಲ್ಲಿ ಮಳೆ ಮುಂದುವರೆದಿದ್ದು, ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ರೆಡ್​ ಆಲರ್ಟ್​ ಘೋಷಿಸಿದೆ

news18-kannada
Updated:October 14, 2020, 6:23 PM IST
ಕರಾವಳಿಯಲ್ಲಿ ಭಾರೀ ಮಳೆ; ಮತ್ತೆ ಸಂಪರ್ಕ ಕಡಿದುಕೊಂಡ ತೀರೆಬೀದಿ ಗ್ರಾಮ
ಮಳೆಗೆ ಕೊಚ್ಚಿ ಹೋದ ಕಾಲು ಸುಂಕ
  • Share this:
ದಕ್ಷಿಣ ಕನ್ನಡದಲ್ಲಿಯೂ ಕಳೆದೆರಡು ದಿನಗಳಿಂದ ಮಳೆ ಅಬ್ಬರ ಹೆಚ್ಚಿದ್ದು, ಕರಾವಳಿಯ ಜನರು ಸಾಕಷ್ಟು ತೊಂದರೆ ಅನುಭವಿಸುವಂತೆ ಆಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮಂಗಳವಾರದಿಂದ ಹಗಲು-ರಾತ್ರಿಎನ್ನದೇ ಮಳೆ ಸುರಿಯುತ್ತಿದ್ದು, ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿದೆ. ಮೂರು ವಾರಗಳ ಹಿಂದೆ ಅಬ್ಬರಿಸಿದ ಮಳೆ ಕೊಂಚ ವಿರಾಮ ನೀಡಿದ್ದು, ಪುನಃ ವರುಣ ಆರ್ಭಟ ತೋರಿದೆ.  ಕುಂದಾಪುರದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳೂರು ಸೇರಿದಂತೆ ಹಲವು ಕಡೆ ಸಾಧಾರಣ ಮಳೆಯಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತದ ಪರಿಣಾಮ ಇಲ್ಲಿ ದಟ್ಟ ಕಪ್ಪು ಮೋಡಗಳಿವೆ. ಅಬ್ಬರದ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು. ಈ ಮಳೆಯ ಮೋಡಗಳು ಪಶ್ಚಿಮ ಘಟ್ಟ ಮಹಾರಾಷ್ಟ್ರದತ್ತ ಸಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಲ್ಲಿನ ಭಾರೀ ಮಳೆಯಿಂದಾಗಿ  ಕಡಬ ತಾಲೂಕಿನ ಸಿರಿಬಾಗಿಲು ,ಕೊಂಬಾರು ಗ್ರಾಮದ ತೀರೆಬೀದಿ ಗ್ರಾಮ ಸಂಪರ್ಕ ಕಡಿದುಕೊಂಡಿದೆ. ಇಲ್ಲಿನ ಜನರು ಸಂಪರ್ಕಕ್ಕೆ ಬಳಸುತ್ತಿದ್ದ ಕಾಲು ಸುಂಕ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಪರದಾಡುವಂತೆ ಆಗೊದೆ. ಪ್ರತಿ ಮಳೆಗಾಲದಲ್ಲಿಯೂ ಇದು ಇಲ್ಲಿನ ಸರ್ವೆ ಸಾಮಾನ್ಯ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳ, ಜನ ಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

ಇಲ್ಲಿನ ತೀರೆಬೀದಿ ಹೊಳೆ ತುಂಬಿ ಹರಿಯುತ್ತಿದ್ದು, ಹೊಳೆಯ ನೀರು ಪಕ್ಕದ ಎಲ್ಲಾ ಕೃಷಿತೋಟಗಳಿಗೆ ನುಗ್ಗಿದೆ. ನಿರಂತರ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಭತ್ತ ಹಾನಿಯಾಗಿದ್ದು, ಅಡಗೆ ತೋಟದಲ್ಲಿಯೂ ನೀರು ನಿಂತಿದೆ.

ಸುಳ್ಯ, ಪುತ್ತೂರು, ಬ್ರಹ್ಮಾವರ, ಕಾಪು, ಬೆಳ್ತಂಗಡಿ, ಬೈಂದೂರಲ್ಲಿ ಮಳೆ ಮುಂದುವರೆದಿದ್ದು, ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ರೆಡ್​ ಆಲರ್ಟ್​ ಘೋಷಿಸಿದೆ.

ಮಳೆ ಹೆಚ್ಚಿರುವ ಹಿನ್ನಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದು, ಸಾಗರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
Published by: Seema R
First published: October 14, 2020, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories