ಸಿಲಿಕಾನ್​ ಸಿಟಿಯಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ಹಲವೆಡೆ ಟ್ರಾಫಿಕ್ ಜಾಮ್​, ವಾಹನ ಸವಾರರು ಹೈರಾಣು

ಬೆಂಗಳೂರಿನ ಬಹುತೇಕ ಕಡೆ ಆಲಿಕಲ್ಲು ಮಳೆಯಾಗಿದೆ. ಸತತ ಒಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ತಂಪೆರೆದಿದೆ. 

Seema.R | news18
Updated:May 17, 2019, 7:32 PM IST
ಸಿಲಿಕಾನ್​ ಸಿಟಿಯಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ಹಲವೆಡೆ ಟ್ರಾಫಿಕ್ ಜಾಮ್​, ವಾಹನ ಸವಾರರು ಹೈರಾಣು
ಮಳೆ ಚಿತ್ರ
Seema.R | news18
Updated: May 17, 2019, 7:32 PM IST
ಬೆಂಗಳೂರು (ಮೇ.17): ಕಳೆದೆರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿದ್ದ ಮಳೆ ಇಂದು ಕೂಡ ಆಗಮಿಸಿದ್ದು, ಮಧ್ಯಾಹ್ನ ಗುಡುಗುಸಹಿತ ಧಾರಕಾರ ಮಳೆಯಾಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

ಬೆಂಗಳೂರಿನ ಬಹುತೇಕ ಕಡೆ ಆಲಿಕಲ್ಲು ಮಳೆಯಾಗಿದೆ. ಸತತ ಒಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ತಂಪೆರೆದಿದೆ.ಮಧ್ಯಾಹ್ನ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ವಾಹನ ಸವಾರರು ಸಂಕಷ್ಟ ಪಡುವಂತೆ ಆಗಿದ್ದು, ಎಲ್ಲೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ. ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಟೌನ್ ಹಾಲ್, ಮೈಸೂರು ರಸ್ತೆ, ವಿಜಯನಗರ, ನಾಯಂಡಳ್ಳಿ, ಬಸವನಗುಡಿ ಸೇರಿದಂತೆ ಅನೇಕ ಕಡೆ ಮಳೆಯಾಗುತ್ತಿದ್ದು, ಬನ್ನೇರಘಟ್ಟ,ಕೋರಮಂಗಲ, ಮಡಿವಾಳ, ರೇಸ್ ಕೋರ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.

ಇನ್ನು ಮೂರು ದಿನ ಮಳೆ ಸಾಧ್ಯತೆಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆ ಬೀಳುವ ಸಾಧ್ಯತೆ ಎಂದು ಕೆಎಸ್ಎನ್ಎಂಡಿಸಿ   ನಿರ್ದೇಶ ಡಾ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. ಈಗಾಗಲೇ  ಉತ್ತರ ಬೆಂಗಳೂರಿನಲ್ಲಿ ಬಹಳಷ್ಟು ಭಾಗಗಳಲ್ಲಿ ಮಳೆ ಬಿದ್ದಿದೆ. ಸರಿಸುಮಾರು 20 ಮಿಲಿ ಮೀಟರ್ ಮಳೆ ಬಿದ್ದಿದೆ.

ಪೂರ್ವ ಮುಂಗಾರಿನಲ್ಲಿ ಆಲಿ ಕಲ್ಲು ಮಳೆ ಸಾಮಾನ್ಯವಾಗಿದೆ. ತಾಪಮಾನ ತಕ್ಷಣ ಕಡಿಮೆಯಾದಾಗ ಆಲಿ ಕಲ್ಲು ಮಳೆ ಬರುತ್ತದೆ. ಇಂದು ಸಂಜೆ 6 ಗಂಟೆವರೆಗೆಕ ಮೋಡ ಕವಿದ ವಾತಾವರಣವಿರಲಿದ್ದು, ನಾಳೆ ಯಥಾ ಪ್ರಕಾರ  ಬಿಸಿಲು ಬರಲಿದೆ ಎಂದರು

 

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​ಚಾಟ್​  ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ