ಪ್ರವಾಹದಲ್ಲಿ ಸಿಲುಕಿದ್ದ ಜನಾರ್ದನ ಪೂಜಾರಿ ರಕ್ಷಣೆ ಮಾಡಿದ ಎನ್​​ಡಿಆರ್​​ಎಫ್​​ ತಂಡ

ನೆರೆಯಲ್ಲಿ ಸಿಲುಕಿಕೊಂಡಿರುವ ಮನೆಗಳ ಸದಸ್ಯರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್​ಡಿಆರ್​ಎಫ್​) ನಿರಂತರವಾಗಿ ಶ್ರಮಿಸುತ್ತಿದೆ. ಇದೇ ಸಂದರ್ಭದಲ್ಲಿ ಬಿ.ಸಿ.ರೋಡ್ ಬಳಿಯ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮನೆ ನೀರಿನಿಂದ ಆವೃತವಾಗಿತ್ತಿ. ಅವರ ಕುಟುಂಬವನ್ನು ರಕ್ಷಣೆ ಮಾಡಿ ಬೋಟ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ

G Hareeshkumar | news18
Updated:August 10, 2019, 9:53 PM IST
ಪ್ರವಾಹದಲ್ಲಿ ಸಿಲುಕಿದ್ದ ಜನಾರ್ದನ ಪೂಜಾರಿ ರಕ್ಷಣೆ ಮಾಡಿದ ಎನ್​​ಡಿಆರ್​​ಎಫ್​​ ತಂಡ
ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ರಕ್ಷಣೆ ಮಾಡಿದ ಎನ್​ಡಿಆರ್​ಎಫ್​​​ ತಂಡ
  • News18
  • Last Updated: August 10, 2019, 9:53 PM IST
  • Share this:
ಮಂಗಳೂರು(ಆ.10) ; ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇದರ ಪರಿಣಾಮ ಬಂಟ್ವಾಳದಲ್ಲಿರುವ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಮನೆ ಜಲಾವೃತಗೊಂಡಿದೆ.

ನೆರೆಯಲ್ಲಿ ಸಿಲುಕಿಕೊಂಡಿರುವ ಮನೆಗಳ ಸದಸ್ಯರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್​ಡಿಆರ್​ಎಫ್​) ನಿರಂತರವಾಗಿ ಶ್ರಮಿಸುತ್ತಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಕುಟುಂಬದವರು ನೆರೆಯಲ್ಲಿ ಸಿಲುಕಿಕೊಂಡಿರುವ ವಿಷಯ ತಿಳಿದು ತಕ್ಷಣ ಅವರ ನೆರವಿಗೆ ಧಾವಿಸಿದರು. ಅವರ ಮನೆ ಬಳಿಗೆ ದೋಣಿಯೊಂದಿಗೆ ತೆರಳಿದ ಎನ್​ಡಿಆರ್​ಎಫ್​ ತಂಡ ಜನಾರ್ದನ  ಪೂಜಾರಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ನೇತ್ರಾವತಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಬೆಳ್ತಂಗಡಿ, ಬಂಟ್ವಾಳದಲ್ಲಿ ಪ್ರವಾಹಸ್ಥಿತಿ ನಿರ್ಮಾಣವಾಗಿದೆ. ನೇತ್ರಾವತಿ ನದಿ ತುಂಬಿ ಸೇತುವೆಯ ಮೇಲೆ ಹರಿಯುತ್ತಿದ್ದು, ಮನೆಗಳೆಲ್ಲ ಜಲಾವೃತವಾಗಿದೆ. ನೇತ್ರಾವತಿಯಲ್ಲಿ 11.6 ಮೀಟರ್ ಮಟ್ಟದಲ್ಲಿ ನೀರಿನ ಒಳಹರಿವು ಉಂಟಾಗಿದ್ದು, ಉಪ್ಪಿನಂಗಡಿ, ಬಂಟ್ವಾಳ ಪಟ್ಟಣ ಸಂಪೂರ್ಣ ಜಲಾವೃತವಾಗಿದೆ. ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಇದ್ದು, ಇದೀಗ 11.6 ಮೀಟರ್​ಗೆ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಕರಾವಳಿಯ ಜನರು ಆತಂಕದಲ್ಲಿದ್ದಾರೆ.

ಇದನ್ನೂ ಓದಿ : ತುಂಗಭದ್ರಾ ಜಲಾಶಯಕ್ಕೆ ಹರಿದುಬರುತ್ತಿದೆ ಹೆಚ್ಚಿನ ನೀರು: 3 ತಾಲೂಕುಗಳಲ್ಲಿ ನೆರೆಹಾವಳಿ ಭೀತಿ?

ಕಟೀಲಿನಲ್ಲೂ ನೆರೆಯ ಕಾಟ ಶುರುವಾಗಿದ್ದು, ನಂದಿನಿ ನದಿ ಉಕ್ಕೇರಿದೆ. ಇಲ್ಲಿನ ದೈವಗಳ ಸಾಮಗ್ರಿಗಳ ಸ್ಥಳಾಂತರ ಮಾಡಲಾಗಿದೆ. ಸುತ್ತಲಿನ ವ್ಯಾಪ್ತಿಯ ಹಲವು ಎಕರೆ ತೋಟಗಳು ಜಲಾವೃತವಾಗಿವೆ. ಬಂಟ್ವಾಳದಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಸಿಲುಕಿರುವವರನ್ನು ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣೆ ಮಾಡುತ್ತಿದ್ದಾರೆ. ಬಂಟ್ವಾಳ, ಜಕ್ರಿಬೆಟ್ಟು ಸಂಪೂರ್ಣ ಜಲಾವೃತವಾಗಿದ್ದು, ಅಂಗಡಿ, ಮನೆಗಳೊಳಗೆ ನೆರೆ ನೀರು ನುಗ್ಗಿದೆ. ಹಲವು ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ. ಬಂಟ್ವಾಳದ ಹಲವು ಕುಟುಂಬಗಳನ್ನು ಪಾಣೆಮಂಗಳೂರಿನ ಗಂಜಿಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ನಾವೂರು ಅಗ್ರಹಾರದ 50 ಮನೆಗಳು ಭಾಗಶಃ ಮುಳುಗಡೆಯಾಗಿವೆ.

ನಿನ್ನೆ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇಗುಲದ ಬಳಿ ನೇತ್ರಾವತಿ ಮತ್ತು ಕುಮಾರಧಾರಾ ಸಂಗಮವಾಗಿದೆ. ಮೇ- ಜೂನ್​ ತಿಂಗಳಲ್ಲಿ ಮಳೆಯಿಲ್ಲದೆ ಕುಡಿಯುವ ನೀರಿಗೂ ತತ್ವಾರವೆದ್ದಿದ್ದ ದಕ್ಷಿಣ ಕನ್ನಡದ ಪರಿಸ್ಥಿತಿ ಇಪ್ಪತ್ತು ದಿನಗಳಲ್ಲೇ ಬದಲಾಗಿದೆ. ಬಂಟ್ವಾಳ ತಾಲೂಕು ಪೂರ್ತಿ ಮುಳುಗಡೆಯಾಗಿದ್ದು, ಊರಿಗೆ ಊರೇ ಜಾಗ ಖಾಲಿ ಮಾಡುವಂತಾಗಿದೆ. ಇದೆಲ್ಲವನ್ನೂ ನೋಡುತ್ತಿರುವ ಮಂಗಳೂರಿಗರು 1974ರ ಮಹಾಪ್ರವಾಹವನ್ನು ನೆನಪಿಸಿಕೊಳ್ಳುತ್ತಿದ್ದಾರೆ. 45 ವರ್ಷಗಳ ಹಿಂದಿನ ಪ್ರವಾಹ ಮತ್ತೆ ಮರುಕಳಿಸುವ ಲಕ್ಷಣಗಳು ಕಂಡುಬರುತ್ತಿದೆ.

First published: August 10, 2019, 5:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading