Bengaluru Rain: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ವರುಣನ ಆರ್ಭಟ; ಗುಡುಗು ಸಹಿತ ಭಾರೀ ಮಳೆಗೆ ಹೊಳೆಯಂತಾದ ರಸ್ತೆಗಳು

Bangalore Rain Forecast: ಕಳೆದ ಶುಕ್ರವಾರ ಬೆಂಗಳೂರಲ್ಲಿ ಇದೇ ಮಾದರಿಯಲ್ಲಿ ಮಳೆ ಸುರಿದಿತ್ತು. ಮುಂಜಾನೆ 6 ಗಂಟೆಯಿಂದಲೇ ಭಾರೀ ಮಳೆ ಆಗಿತ್ತು. ನಂತರ 8 ಗಂಟೆ ಹೊತ್ತಿಗೆ ಮಳೆ ಕಡಿಮೆ ಆಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಏ.29): ನಗರದಲ್ಲಿ ವಾರದ ಹಿಂದೆ ಮುಂಜಾನೆ ಕಾಣಿಸಿಕೊಂಡಿದ್ದ ವರುಣ ಮತ್ತೆ ಅಬ್ಬರಿಸಿದ್ದಾನೆ. ಮುಂಜಾನೆ ಐದು ಗಂಟೆಗೆ ಆರಂಭವಾದ ಮಳೆ ಬೆಳಗ್ಗೆ ಏಳುವರೆಯಾದರೂ ನಿಂತಿಲ್ಲ. ಭಾರೀ ಮಳೆಗೆ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ.

    ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಗುಡು-ಮಿಂಚು ಕಾಣಿಸಿಕೊಂಡಿತ್ತು. ರಾತ್ರಿ ವೇಳೆ  ಅಲ್ಲಲ್ಲಿ ಚಿಕ್ಕದಾಗಿ ಮಳೆ ಸುರಿದಿತ್ತು. ಬೆಳಗ್ಗೆ ಐದು ಗಂಟೆಗೆ ದೊಡ್ಡದಾಗಿ ಮಳೆ ಸುರಿಯಲು ಆರಂಭವಾಗಿತ್ತು. ಮೆಜೆಸ್ಟಿಕ್, ಶಾಂತಿನಗರ, ವಿಲ್ಸನ್ ಗಾರ್ಡನ್,ಲ ಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿ ನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಿದೆ.

    ಕಳೆದ ಶುಕ್ರವಾರ ಬೆಂಗಳೂರಲ್ಲಿ ಇದೇ ಮಾದರಿಯಲ್ಲಿ ಮಳೆ ಸುರಿದಿತ್ತು. ಮುಂಜಾನೆ 6 ಗಂಟೆಯಿಂದಲೇ ಭಾರೀ ಮಳೆ ಆಗಿತ್ತು. ನಂತರ 8 ಗಂಟೆ ಹೊತ್ತಿಗೆ ಮಳೆ ಕಡಿಮೆ ಆಗಿತ್ತು.

    ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ತೊಯ್ದು ತೊಪ್ಪೆಯಾದ ಬೆಂಗಳೂರು; ಉಕ್ಕಿ ಹರಿದ ಚರಂಡಿಗಳು

    ಪರದಾಡಿದ ಜನತೆ

    ಮುಂಜಾನೆ ಹಾಲು-ಮೊಸರು ಇತ್ಯಾದಿ ಅಗತ್ಯ ವಸ್ತುಗಳನ್ನು ತರಲು ಜನರು ಹೊರ ನಡೆದಿದ್ದರು. ಈ ವೇಳೆ ಮಳೆಯಿಂದ ಅನೇಕರು ಪರದಾಡಿದರು. ಇನ್ನು, ಬಹುತೇಕ ಸಂಸ್ಥೆಗಳಿಗೆ ವರ್ಕ್​ ಫ್ರಮ್​ ಹೋಮ್​ ನೀಡಿವೆ. ಹೀಗಾಗಿ, ಈ ಮಳೆಯಿಂದ ಅಷ್ಟಾಗಿ ತೊಂದರೆ ಉಂಟಾಗಿಲ್ಲ.

    ರಸ್ತೆ ಮೇಲೆ ನಿಂತ ನೀರು:

    ಭಾರೀ ಮಳೆಯಿಂದಾಗಿ ಮೋರಿಗಳು ಉಕ್ಕಿ ರಸ್ತೆಯ ಮೇಲೆಲ್ಲ ನೀರು ತುಂಬಿದ ದೃಶ್ಯಗಳು ಬಹತೇಕ ಕಡೆಗಳಲ್ಲಿ ಕಂಡು ಬಂತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಬಹುತೇಕ ರಸ್ತೆಗಳು ಹೊಳೆಯಂತಾಗಿದ್ದವು.
    First published: