HOME » NEWS » State » HEAVY RAIN IN BANGALORE MAK

Bangalore Rains: ಬೆಂಗಳೂರಿನಲ್ಲಿ ಭಾರೀ ಮಳೆ; ಧರೆಗುರುಳಿದ ಮರ, ಜಲಾವೃತವಾದ ರಸ್ತೆ, ಜನಜೀವನ ಅಸ್ತವ್ಯಸ್ತ!

ಚಾಮರಾಜಪೇಟೆ, ಹನುಮಂತನಗರ, ಜಯನಗರ, ಶ್ರೀನಗರ, ಯಶವಂತಪುರ, ಈಜಿಪುರ, ಬಸವನಗುಡಿ, ಮೈಸೂರು ರಸ್ತೆ, ನಾಯ್ಡು ಹಳ್ಳಿ, ಜೆಸಿ ರಸ್ತೆ ವ್ಯಾಪ್ತಿಯಲ್ಲಿ ಭಾರೀ ಮಳೆಗೆ ರಸ್ತೆ, ಅಂಡರ್‌ಪಾಸ್‌ಗಳ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಸಾಕಷ್ಟು ಸಂಕಷ್ಟ ಅನುಭವಬಿಸುವಂತಾಗಿತ್ತು. 

news18-kannada
Updated:May 26, 2020, 7:24 PM IST
Bangalore Rains: ಬೆಂಗಳೂರಿನಲ್ಲಿ ಭಾರೀ ಮಳೆ; ಧರೆಗುರುಳಿದ ಮರ, ಜಲಾವೃತವಾದ ರಸ್ತೆ, ಜನಜೀವನ ಅಸ್ತವ್ಯಸ್ತ!
ಭಾರೀ ಮಳೆಯಿಂದಾಗಿರುವ ಅನಾಹುತ.
  • Share this:
ಬೆಂಗಳೂರು (ಮೇ 26); ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಇಂದು ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಿಸಿಲ ಬೇಗೆಯಿಂದ ಕಾದಿದ್ದ ಭೂಮಿಗೆ ಈ ಮಳೆ ತಂಪೆರೆದರೆ, ನಗರದ ನಾನಾ ಕಡೆಗಳಲ್ಲಿ ಭಾರೀ ಪ್ರಮಾಣದ ಅನಾಹುತವನ್ನೇ ಸೃಷ್ಟಿಸಿದೆ. 

ಚಾಮರಾಜಪೇಟೆ, ಹನುಮಂತನಗರ, ಜಯನಗರ, ಶ್ರೀನಗರ, ಯಶವಂತಪುರ, ಈಜಿಪುರ, ಬಸವನಗುಡಿ, ಮೈಸೂರು ರಸ್ತೆ, ನಾಯ್ಡು ಹಳ್ಳಿ, ಜೆಸಿ ರಸ್ತೆ ವ್ಯಾಪ್ತಿಯಲ್ಲಿ ಭಾರೀ ಮಳೆಗೆ ರಸ್ತೆ, ಅಂಡರ್‌ಪಾಸ್‌ಗಳ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಸಾಕಷ್ಟು ಸಂಕಷ್ಟ ಅನುಭವಬಿಸುವಂತಾಗಿತ್ತು.

ಇನ್ನೂ ಮಳೆ ಮತ್ತು ಗಾಳಿಯ ರಭಸಕ್ಕೆ ಯಲಹಂಕ ವೆಂಕಟಾಲ ಬಳಿಯ ಮೂರನೇ ಕ್ರಾಸ್‌ನಲ್ಲಿ ಮರಗಳು ಧರೆಗೆ ಬಿದ್ದ ಪರಿಣಾಮ ಹಲವಾರು ವಾಹನಗಳು ಜಖಂ ಆಗಿವೆ. ಇನ್ನೂ ಇದೇ ವಾರ್ಡ್‌‌ನ ಸುರಭೀ ಲೇಔಟ್ ರೈತರ ಸಂತೆ ಬಳಿ ಭಾರಿ ಮಳೆಗೆ ಟ್ರಾನ್ಸ್ ಫಾರ್ಮರ್ ಮುರಿದು ಬಿದ್ದಿದ್ದು ಜನ ಭಯಭೀತರಾಗುವಂತಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಹಲವೆಡೆ ವಿದ್ಯುತ್‌ ಕಡಿತ ಮಾಡಲಾಗಿದೆ.

ಇದನ್ನೂ ಓದಿ : Bangalore Rains: ಬೆಂಗಳೂರಿನಲ್ಲಿ ಸಂಜೆಯಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆ
First published: May 26, 2020, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories