ರಾಜ್ಯಾದ್ಯಂತ ವರಣನ ಅಬ್ಬರ ; ಜನ ಜೀವನ ತತ್ತರ

news18
Updated:July 12, 2018, 9:35 PM IST
ರಾಜ್ಯಾದ್ಯಂತ ವರಣನ ಅಬ್ಬರ ; ಜನ ಜೀವನ ತತ್ತರ
news18
Updated: July 12, 2018, 9:35 PM IST
ನ್ಯೂಸ್ 18 ಕನ್ನಡ

ಬೆಂಗಳೂರು ( ಜುಲೈ 12) :  ರಾಜ್ಯಾದ್ಯಂತ ವರುಣ ಅಬ್ಬರಿಸುತ್ತಿದ್ದು, ಮಳೆಯ ಅವಾಂತರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಹಲವೆಡೆ ಮನೆ ಹಾಗೂ ಗುಡ್ಡ ಕುಸಿತವಾಗಿದೆ. ಸೇತುವೆಗಳು ಜಲಾವೃತವಾಗಿದ್ದು ಜನರಷ್ಟೇ ಅಲ್ಲದೆ ಶವಗಳಿಗೂ ಸಂಕಷ್ಟ ಎದುರಾಗಿದೆ.

ತೀರ್ಥಹಳ್ಳಿಯಲ್ಲಿ ಮಳೆಗೆ ಗುಡ್ಡ ಕುಸಿದು ಅವಾಂತರ ಸೃಷ್ಟಿಸಿದೆ. ಚಿಕ್ಕಮಗಳೂರಿನಲ್ಲೂ ಮಳೆ ಅಬ್ಬರಿಸುತ್ತಿದ್ದು, ಕಳಸ-ಕುದುರೆಮುಖ ಭಾಗದಲ್ಲಿ ಮಳೆಯಿಂದಾಗಿ ಹೆಬ್ಬಾಳೆ ಸೇತುವೆ 5ನೇ ಬಾರಿಗೆ ಮುಳುಗಡೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕನ್ನಹಡ್ಲು ಗ್ರಾಮದಲ್ಲಿ ಗುಡ್ಡ ಕುಸಿತವಾಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ನಿನ್ನೆ ಕೊಪ್ಪ ತಾಲೂಕಿನ ಬಸ್ತಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದ ಅಶೋಕ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ಹೀಗಾಗಿ 30 ಜನರ ಎನ್​ಡಿಆರ್​ಎಫ್​ ತಂಡ ಶವಕ್ಕಾಗಿ ಹುಡುಕಾಟ ನಡೆಸುತ್ತಿದೆ.

ಕೊಡಗಿನಲ್ಲಿ ಮಳೆ ಅಬ್ಬರ ಮತ್ತಷ್ಟು ಹೆಚ್ಚಾಗಿದ್ದು, ಕೆಆರ್​ಎಸ್​ ಜಲಾಶಯದ ಒಳ ಹರಿವು 37 ಸಾವಿರ ಕ್ಯೂಸೆಕ್​ಗೆ ಏರಿಕೆಯಾಗಿದೆ. ಜಲಾಶಯದ ನೀರಿನ ಮಟ್ಟ 117 ಅಡಿಗೆ ತಲುಪಿದ್ದು, ಕೆಆರ್​ಎಸ್​ ತುಂಬಲು ಇನ್ನೂ 8 ಅಡಿಯಷ್ಟೇ ಬಾಕಿ ಉಳಿದಿದೆ. ಹಾಸನದಲ್ಲಿ ನಿರಂತರ ಮಳೆಯಿಂದಾಗಿ ಸಕಲೇಶಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಮನೆ ಕುಸಿದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿರಂತರ ಮಳೆಯಿಂದಾಗಿ ಸಕಲೇಶಪುರದ ನಿಡಿಗೆರೆಯಲ್ಲಿ ರಸ್ತೆ ತುಂಬ ಕೆಸರು ತುಂಬಿದ್ದು, ಶವ ಸಾಗಿಸಲು ಒಂದೂವರೆ ಕಿಲೋಮೀಟರ್ ಹರಸಾಹಸ ಪಡಬೇಕಾಯ್ತು.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಖೇಣಿ ಗ್ರಾಮದಲ್ಲಿ ಮಳೆಯಿಂದ ರುದ್ರಭೂಮಿ ಸೇತುವೆ ಕುಸಿದ್ದಿದ್ದು, ಜನ ಮಳೆ ನೀರಿನಲ್ಲಿ ಶವ ಸಾಗಿಸಲು ಹರಸಾಹಸಪಟ್ರು. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ದೂದ್​​ಗಂಗಾ, ಕೃಷ್ಣಾ ನದಿಯ ಒಳಹರಿವು ಮತ್ತಷ್ಟು ಹೆಚ್ಚಳವಾಗಿದೆ.
Loading...

ಬೆಳಗಾವಿ  ಜಿಲ್ಲೆಯ  ಚಿಕ್ಕೋಡಿ ತಾಲೂಕಿನ 5 ಸೇತುವೆಗಳು ಮುಳುಗಡೆಯಾಗಿದ್ದು, ಹಲವು ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಬೀದರ್​​ನ ಕಪಲಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು 8 ವರ್ಷದ ಬಾಲಕಿ ಸಾವನ್ನಪ್ಪಿದ್ರೆ, ಗೋಡೆ ಕುಸಿತದಿಂದ ತಾಯಿ ಸ್ಥಿತಿ ಗಂಭೀರವಾಗಿದೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...