Anekal Rains: ಮಳೆ ಅವಾಂತರ ಖಾಸಗಿ ಬಡಾವಣೆ, ರೈಲ್ವೆ ಅಂಡರ್ ಪಾಸ್ ಜಲಾವೃತ

ಕೆರೆ ನೀರು ಬಡಾವಣೆಗೆ ನುಗ್ಗಿರುವುದರಿಂದ ಮನೆಗಳು, ರಸ್ತೆಗಳು ಜಲಾವೃತವಾಗಿದ್ದು, ಹಾವುಗಳ ಕಾಟ ಶುರುವಾಗಿದೆ ಎಂದು ಸ್ಥಳೀಯರಾದ ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಜಲಾವೃತ

ಜಲಾವೃತ

  • Share this:
ಆನೇಕಲ್: ಕಳೆದ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ (Rainfall) ಬೆಂಗಳೂರು ಹೊರವಲಯ ಆನೇಕಲ್ (Anekal Rain) ತಾಲ್ಲೂಕಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹೌದು ಮಳೆ ಅವಾಂತರದಿಂದಾಗಿ ಜಿಗಣಿ ಬಳಿಯ ಮಧುಮಿತ್ರ ಬಡಾವಣೆಗೆ (Madhumitra Layout) ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿತ್ತು. ಅಲ್ಲಿನ ನಿವಾಸಿಗಳು, ವಾಹನ ಸವಾರರು ಪರದಾಡುವಂತಾಗಿದೆ  ಜೊತೆಗೆ ಚಂದಾಪುರ ಬಳಿಯ ರೈಲ್ವೆ ಅಂಡರ್ ಪಾಸ್(Railway Underpass) ಸಹ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಹಲವು ದಿನಗಳಿಂದ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಜಿಗಣಿ ಕೆರೆ (Jigani Lake) ತುಂಬಿ ಕೋಡಿ ಹರಿದಿದ್ದು, ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಮಧುಮಿತ್ರ ಬಡಾವಣೆಗೆ ನೀರು ನುಗ್ಗಿದೆ. ಪರಿಣಾಮ ಬಡಾವಣೆಯ ರಸ್ತೆಗಳು ಕೆರೆಯಂತಾಗಿದೆ.

ಬಹುತೇಕ ಮನೆಗಳ ನೆಲ ಮಹಡಿಗಳ ಬಳಿ ಮಳೆ ನೀರು ನಿಂತಿದ್ದು, ಸ್ಥಳೀಯ ನಿವಾಸಿಗಳು ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಸ್ಥಳೀಯ ಪುರಸಭೆ ಸಿಬ್ಬಂದಿ ಜೆಸಿಬಿ ಮೂಲಕ ಕಿರಿದಾದ ರಾಜಕಾಲುವೆಯಲ್ಲಿ ತುಂಬಿದ್ದ ಕಸಕಡ್ಡಿಯನ್ನು  ತೆರವುಗೊಳಿಸಿದ್ದು, ಬಳಿಕ ಕೆರೆ ಕೋಡಿ ನೀರು ಸಾರಾಗವಾಗಿ ಹರಿದು ಹೋಗುತ್ತಿದ್ದು, ಬಡಾವಣೆಗೆ ನುಗ್ಗಿದ್ದ ನೀರು ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ .

Heavy rain in Anekal taluk water enters residential areas cank mrq
ವಾಹನ ಸವಾರರ ಪರದಾಟ


ಇನ್ನೂ ಮಧುಮಿತ್ರ ಬಡಾವಣೆ ಜಿಗಣಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಇರುವುದರಿಂದ ಕೆರೆ ಕೋಡಿ ಹೋದ ಪ್ರತಿ ಬಾರಿ ಮಳೆ ನೀರು ತಗ್ಗು ಪ್ರದೇಶದಲ್ಲಿರುವ ಬಡಾವಣೆಗೆ ನುಗ್ಗುತ್ತದೆ. ಇದರಿಂದ ಬಡಾವಣೆ ವಾಸಿಗಳಿಗೆ ಜಿಗಣಿ ಕೆರೆ ಕೋಡಿ ಹರಿದರೆ ಆತಂಕದಲ್ಲಿ ದಿನ ದೂಡುವಂತಾಗಿದೆ.

ಇದನ್ನೂ ಓದಿ:  Tumakuru: ಅಜ್ಜನ ಅಂತ್ಯಸಂಸ್ಕಾರಕ್ಕೆ ಕಂದಮ್ಮನ ಜೊತೆ 1 ಕಿಮೀ ನಡೆದುಕೊಂಡು ಬಂದ 12 ದಿನದ ಬಾಣಂತಿ

ರಾಜಕಾಲುವೆಯ ಒತ್ತುವರಿ

ಜಿಗಣಿ ಕೆರೆ ಕೋಡಿ ನೀರು ಹೆನ್ನಾಗರ ಕೆರೆಗೆ ಹರಿದು ಹೋಗುತ್ತದೆ. ಆದ್ರೆ ರಾಜಕಾಲುವೆ ಕಿರುದಾಗಿದ್ದು, ಒತ್ತುವರಿಯಾಗಿದೆ. ಜೊತೆಗೆ ಕಸಕಡ್ಡಿಯಿಂದ ಬ್ಲಾಕ್ ಆಗಿದ್ದು, ಪುರಸಭೆ ಸಿಬ್ಬಂದಿ ಜೆಸಿಬಿ ಮೂಲಕ ಕಸಕಡ್ಡಿಗಳಿಂದ ಬಂದ್ ಆಗಿದ್ದ ಕೋಡಿ ಕಾಲುವೆಯನ್ನು ಯತ್ನಿಸಿದ್ದು, ಪೂರ್ಣವಾಗಿ ಸ್ವಚ್ಚತೆಗೊಳಿಸಲಾಗಿಲ್ಲ. ಹಾಗಾಗಿ ನೀರಿನ ಪ್ರಮಾಣ ಹಂತ ಹಂತವಾಗಿ ಕಡಿಮೆಯಾಗುತ್ತಿದೆ.

Heavy rain in Anekal taluk water enters residential areas cank mrq
ಕೆರೆಯಂತಾದ ರಸ್ತೆಗಳು


ಕೆರೆ ನೀರು ಬಡಾವಣೆಗೆ ನುಗ್ಗಿರುವುದರಿಂದ ಮನೆಗಳು, ರಸ್ತೆಗಳು ಜಲಾವೃತವಾಗಿದ್ದು, ಹಾವುಗಳ ಕಾಟ ಶುರುವಾಗಿದೆ ಎಂದು ಸ್ಥಳೀಯರಾದ ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ಜಲಾವೃತವಾಗುವ ರೈಲ್ವೇ ಅಂಡರ್​ಪಾಸ್

ಒಟ್ಟಿನಲ್ಲಿ ರಾಜ್ಯದ ಜನರನ್ನು ಬಿಟ್ಟು ಬಿಡದೇ ಕಾಡುತ್ತಿರುವ ಮಳೆಯಿಂದಾಗಿ ಆನೇಕಲ್ ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಸಂಕಷ್ಟ ತಂದೊಡ್ಡಿದ್ದು, ಚಂದಾಪುರ ಸಮೀಪದ ಹಿಲಲಿಗೆ ರೈಲ್ವೆ ಅಂಡರ್ ಪಾಸ್​​ನಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಗಿದ್ದು, ವಾಹನ ಸವಾರರು ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರತಿ ಬಾರಿ ಮಳೆ ಸುರಿದರೂ ರೈಲ್ವೆ ಅಂಡರ್ ಪಾಸ್ ಮಳೆ ನೀರಿನಿಂದ ತುಂಬುತ್ತಿದ್ದು, ಇನ್ನಾದರೂ ಅಧಿಕಾರಿಗಳು ಮಳೆ ಅವಾಂತರಗಳು ಘಟಿಸುವ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ

ಮತ್ತೆ ಎರಡು ದಿನ ಮಳೆ, ಯೆಲ್ಲೋ ಅಲರ್ಟ್

ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಮಳೆಯಾಗಲಿದೆ (Karnataka Rains) ಎಂದು ಹವಾಮಾನ ಇಲಾಖೆ (IMD) ಹೇಳಿದೆ. ಈಗಾಗಲೇ 16 ಜಿಲ್ಲೆಗಳಲ್ಲಿ ಪ್ರವಾಹ (Flood) ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಮತ್ತೆ ಮಳೆ ಮುಂದುವರಿಯುವ ಆತಂಕ ಎದುರಾಗಿದೆ.

Heavy rain in Anekal taluk water enters residential areas cank mrq
ಜಲಾವೃತ ಬಡವಾಣೆ


ಇದನ್ನೂ ಓದಿ:  Agumbe Ghat: ಗಮನಿಸಿ, ಆಗುಂಬೆ ಘಾಟ್​ನಲ್ಲಿ ಸಂಚಾರ ನಿರ್ಬಂಧ ಮುಂದುವರಿಕೆ

ಬೆಳಗಾವಿ, ಗದಗ, ಬೆಂಗಳೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ಹಳದಿ ಅಲರ್ಟ್ (Yellow Alert) ಪ್ರಕಟಿಸಲಾಗಿದೆ.
Published by:Mahmadrafik K
First published: