ಆನೇಕಲ್​​ನಲ್ಲಿ ಜಿಟಿ ಜಿಟಿ ಮಳೆ - ಜನಜೀವನ ಅಸ್ತವ್ಯಸ್ತ, ವಾಹನ ಸವಾರನ ಪರದಾಟ

ಇನ್ನೂ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರೈತ ಖುಷಿಯಾಗಿದ್ದಾನೆ. ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರಾಗಿ ಬೆಳೆ ಸೊಂಪಾಗಿ ಬೆಳೆದು ನಿಂತಿದ್ದು, ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನ ರೈತ ಸಂತಸಗೊಂಡಿದ್ದಾನೆ.

news18-kannada
Updated:September 20, 2020, 4:37 PM IST
ಆನೇಕಲ್​​ನಲ್ಲಿ ಜಿಟಿ ಜಿಟಿ ಮಳೆ - ಜನಜೀವನ ಅಸ್ತವ್ಯಸ್ತ, ವಾಹನ ಸವಾರನ ಪರದಾಟ
ಬೆಂಗಳೂರು ಮಳೆ.
  • Share this:
ಆನೇಕಲ್(ಸೆ.20): ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಇಂದು ಬೆಳಗ್ಗೆಯಿಂದಲೇ ಮೋಡ ಕವಿದಂತೆ ಇದ್ದ ವಾತಾವರಣ ಮಧ್ಯಾಹ್ನದ ಹೊತ್ತಿಗೆ ಅಲ್ಲಲ್ಲಿ ಬಿಟ್ಟು ಬಿಟ್ಟು ಜಿಟಿ ಜಿಟಿ ಮಳೆ ಸುರಿಯಲು ಪ್ರಾರಂಭವಾಗಿದೆ. ಆನೇಕಲ್ ಪಟ್ಟಣ, ತಮಿಳುನಾಡು ಗಡಿ ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಬನ್ನೇರುಘಟ್ಟ ಹೀಗೆ ಆನೇಕಲ್ ತಾಲ್ಲೂಕಿನ ಹಲವು ಕಡೆ ಕಳೆದ ಎರಡು ಮೂರು ಗಂಟೆಯಿಂದ ಜಿಟಿ ಜಿಟಿ ಮಳೆ ನಿಂತು ನಿಂತು ಸುರಿಯುತ್ತಿದೆ. 

ಅತ್ತ ಜೋರಾಗಿಯು ಮಳೆ ಸುರಿಯದೇ ಇತ್ತ ಸಂಪೂರ್ಣವಾಗಿ ಮಳೆ ಇಲ್ಲದಂತಿರದೆ ಬಿಟ್ಟು ಬಿಟ್ಟು ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜಿಟಿ ಜಿಟಿ ಮಳೆ ಒಂದು ಕಡೆ ಸಂಡೇ ರಜೆ ಹಿನ್ನೆಲೆ ಜನ ಮನೆಯಿಂದ ಹೊರಬಾರದೆ ಗೂಡು ಸೇರಿಕೊಂಡಿದ್ದಾರೆ.

ಬೈಕ್ ಸವಾರರು ಮಳೆ ನಡುವೆಯು ಮನೆಯಿಂದ ಹೊರಬಂದು ಪರದಾಡುವಂರಾಗಿದೆ. ಹಾಗೆಯೇ ಮಳೆಯಲ್ಲಿಯೇ ಛತ್ರಿ, ಟವಲ್, ಪ್ಲಾಸ್ಟಿಕ್ ಕವರ್ ನೆರವಿನಲ್ಲಿ ಸಾಗುತ್ತಿದ್ದದ್ದು ಕಂಡುಬಂತು. ಜೊತೆಗೆ ಸಾರ್ವಜನಿಕರು ಸಹ ಜಿಟಿ ಜಿಟಿ ಮಳೆಯಿಂದಾಗಿ ಹೈರಾಣಾಗಿದ್ದು, ಛತ್ರಿ ನೆರವಿನಿಂದ ತಮ್ಮ ತಮ್ಮ ಮನೆಗಳನ್ನು ಸೇರಿಕೊಳ್ಳವುದು ಕಂಡುಬಂತು.

ಇದನ್ನೂ ಓದಿ: Siddaramaiah: ಸ್ವಾರ್ಥ ರಾಜಕಾರಣಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ; ಕುಮಾರಸ್ವಾಮಿ ಬೆನ್ನಲ್ಲೇ ಸಾ.ರಾ. ಮಹೇಶ್ ಟೀಕೆ

ಇನ್ನೂ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರೈತ ಖುಷಿಯಾಗಿದ್ದಾನೆ. ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರಾಗಿ ಬೆಳೆ ಸೊಂಪಾಗಿ ಬೆಳೆದು ನಿಂತಿದ್ದು, ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನ ರೈತ ಸಂತಸಗೊಂಡಿದ್ದಾನೆ.
Published by: Ganesh Nachikethu
First published: September 20, 2020, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading