Yadagiri: ವರುಣನ ಅಬ್ಬರಕ್ಕೆ ಜನ ತತ್ತರ! ಹಬ್ಬದ ಸಂಭ್ರಮ ಕಸಿದ ಮಳೆ

ಯಾದಗಿರಿ  (Yadagiri) ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಬೆಳಿಗ್ಗೆ ಮಳೆ ಸುರಿದಿದ್ದು ಮಳೆಯ ಅಬ್ಬರಕ್ಕೆ ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. 

ಯಾದಗಿರಿ  (Yadagiri) ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಬೆಳಿಗ್ಗೆ ಮಳೆ ಸುರಿದಿದ್ದು ಮಳೆಯ ಅಬ್ಬರಕ್ಕೆ ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. 

ಯಾದಗಿರಿ  (Yadagiri) ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಬೆಳಿಗ್ಗೆ ಮಳೆ ಸುರಿದಿದ್ದು ಮಳೆಯ ಅಬ್ಬರಕ್ಕೆ ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. 

  • Share this:
ಯಾದಗಿರಿ(ಆ.02): ಜಿಲ್ಲೆಯಲ್ಲಿ ಮಳೆಯ (Rain) ಅಬ್ಬರ ಜೋರಾಗಿದೆ. ವರುಣನ ಅರ್ಭಟಕ್ಕೆ ಜಿಲ್ಲೆಯ ಜನರು ನರಕಯಾತನೆ ಜೀವನ ನಡೆಸುವಂತಾಗಿದೆ. ಯಾದಗಿರಿ  (Yadagiri) ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಬೆಳಿಗ್ಗೆ ಮಳೆ ಸುರಿದಿದ್ದು ಮಳೆಯ ಅಬ್ಬರಕ್ಕೆ ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಜಿಲ್ಲೆಯ ಸುರಪುರ,ಶಹಾಪುರ,ಹುಣಸಗಿ,ವಡಗೇರಾ, ಗುರುಮಿಠಕಲ್, ಯಾದಗಿರಿ ಸೇರಿದಂತೆ ಮೊದಲಾದ ಕಡೆ ಮಳೆ ಸುರಿದ ಪರಿಣಾಮ ಜನರು ನಲುಗಿ ಹೋಗಿದ್ದಾರೆ. ನಿನ್ನೆ ಯಾದಗಿರಿಯಲ್ಲಿ 0.1 ಎಂಎಂ ಮಳೆಯಾಗಿದೆ ,ಶಹಾಪುರ ತಾಲೂಕಿನಲ್ಲಿ (Taluk) 5.2 ಎಂಎಂ ಮಳೆಯಾಗಿದ್ದು,ಸುರಪುರ ತಾಲೂಕಿನಲ್ಲಿ 6.0 ಎಂಎಂ ,ಗುರುಮಿಠಕಲ್ ತಾಲೂಕಿನಲ್ಲಿ 1.4 ಎಂಎಂ ಹಾಗೂ ವಡಗೇರಾ ತಾಲೂಕಿನಲ್ಲಿ 1.5 ಎಂಎಂ ಮಳೆಯಾಗಿದೆ.ಶಹಾಪುರ ಹಾಗೂ ಸುರಪುರ ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ.

ಹಬ್ಬದ ಸಂಭ್ರಮ ಕಸಿದ ಮಳೆ!

ನಾಗರ ಪಂಚಮಿ (Nagar Panchami) ಹಬ್ಬ ನಾಡಿಗೆ ದೊಡ್ಡ ಹಬ್ಬವಾಗಿದೆ (Festival). ಆದರೆ,ಶ್ರಾವಣ ಮಾಸದ ಮೊದಲನೇ ನಾಗರ ಪಂಚಮಿ ಹಬ್ಬದ ಸಂಭ್ರಮಕ್ಕೆ ಮಳೆ ವಿಘ್ನವಾಗಿದೆ.ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮುನಮುಟಗಿ ಗ್ರಾಮದ  ಎಸ್ ಸಿ ಪಂಗಡದ ಜನರು ವಾಸ ಮಾಡುವ 10 ಮನೆಯೊಳಗೆ ನೀರು ನುಗ್ಗಿವೆ.ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ಮನೆಯೊಳಗೆ ನೀರು ನುಗ್ಗಿದ್ದ ಪರಿಣಾಮ ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳು ನೀರು ಪಾಲಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.ಆಹಾರ ಸಾಮಾಗ್ರಿಗಳು ಜಲಾವೃತವಾದ ಹಿನ್ನೆಲೆ ಜನರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಮನೆಯೊಳಗೆ ನುಗ್ಗಿರುವ ನೀರು ಹೊರ ತೆಗೆಯಲು ಜನರು ಹರಸಾಹಸ

ಪಡುವಂತಾಗಿದೆ.ಇಂದು ನಾಗರ ಪಂಚಮಿ ಹಬ್ಬ ಆಚರಣೆ ಮಾಡಿ ಸಂಭ್ರಮ ಪಡಬೇಕಾದ ಮಹಿಳೆಯರು ಹಬ್ಬ ಆಚರಣೆ ಮಾಡದೇ ಸಂಕಷ್ಟ ಎದುರಿಸುವಂತಾಗಿದೆ. ಆಹಾರ  (Food) ಸಾಮಾಗ್ರಿಗಳು ನೀರು ಪಾಲಾದ ಹಿನ್ನೆಲೆ ಅಡುಗೆ (Cooking) ಮಾಡಲು ಸಾಧ್ಯವಾಗದೇ ಉಪವಾಸದಲ್ಲಿ ಕಾಲ ಕಳೆದಿದ್ದಾರೆ.ಈ ಬಗ್ಗೆ ಮುನಮುಟಗಿ ಗ್ರಾಮದ ರಾಮಲಿಂಗಮ್ಮ ಮಾತನಾಡಿ, ಪ್ರತಿ ಬಾರಿ ಮಳೆ ಬಂದಾಗ ಮನೆಯೊಳಗೆ ನೀರು ನುಗ್ಗುತ್ತವೆ ನಾವು ಮಳೆ ಬಂದಾಗ ಜೀವನ ನಡೆಸುವದು ಕಷ್ಟವಾಗುತ್ತದೆ ಯಾರು ಸಹಾಯಕ್ಕೆ ಬರುವದಿಲ್ಲ.ಮನೆಯೊಳಗೆ ನೀರು ನುಗ್ಗಿದ್ದ ಪರಿಣಾಮ ಬಟ್ಟೆ ಬರಿ,ಎಲ್ಲಾ ವಸ್ತುಗಳು ಹಾನಿಯಾಗಿವೆ.ನಾಗರ ಪಂಚಮಿ ಹಬ್ಬ ಇದ್ದರು ನಾವು ಹಬ್ಬ ಮಾಡದಂತಾಗಿದೆ.ನಾವು ಅಡುಗೆ ಮಾಡಿಕೊಂಡು ಊಟ ಮಾಡಿಲ್ಲವೆಂದು ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಸಿದ ದೇವಸ್ಥಾನದ ಗೋಪುರ!

ಭಾರಿ ಮಳೆಗೆ ಜಿಲ್ಲೆಯ ಶಹಾಪುರ ತಾಲೂಕಿನ ಇಟಗಾ ಎಸ್ ಗ್ರಾಮದ ಪರಮಾನಂದೇಶ್ವರ ದೇವಸ್ಥಾನದ ಗೋಪುರ ಕುಸಿದು ಬಿದ್ದಿದೆ.150 ವರ್ಷದ ಹಳೆದಾದ ದೇವಸ್ಥಾನದ ಶಿಖರ ಕುಸಿದ ಬಿದ್ದ ಪರಿಣಾಮ ಭಕ್ತರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Rain Alert: 20 ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಸಂದೇಶ; ಮನೆ ಮೇಲೆ ಕುಸಿದ ಗುಡ್ಡ, ನಾಲ್ವರು ಸಾವು

ಸೇತುವೆ ಜಲಾವೃತ!

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳುರು- ಪರತುನಾಯಕ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು,ಊರಿಗೆ ತೆರಳಲು ಜನರು ಪರದಾಡುವಂತಾಗಿದೆ. ಹರಿದು ಹೋಗುವ ಸೇತುವೆ ಮೂಲಕ ಅಪಾಯದ ನಡುವೆ ಜನರು ಸಂಚಾರ ಮಾಡುವಂತಾಗಿದೆ.

ಇದನ್ನೂ ಓದಿ: Bhatkal: ಭಟ್ಕಳದಲ್ಲಿ ಹಿಂದೆಂದೂ ಕಾಣದ ಪ್ರವಾಹ; ಅಂಗಡಿ, ರಸ್ತಗಳು ಜಾಲವೃತ; ಗುಡ್ಡ ಕುಸಿದು ನಾಲ್ವರ ಸಾವು

ಬೆಳೆ ಹಾನಿ

ಸುರಪುರ ತಾಲೂಕಿನ ಯಕ್ತಾಪುರ ,ವಡಗೇರಾ ತಾಲೂಕಿನ ನಾಯ್ಕಲ್,ಮನಗನಾಳ,ಯಾದಗಿರಿ ತಾಲೂಕಿನ ಹೆಡಗಿಮುದ್ರಾ,ಠಾಣಾಗುಂದಿ ಸೇರಿದಂತೆ ಮೊದಲಾದ ಕಡೆ ಹತ್ತಿ,ತೊಗರಿ ಹಾಗೂ ಇನ್ನಿತರ ಬೆಳೆ ನೀರು ಪಾಲಾಗಿ ಬೆಳೆ ಹಾಗಿದೆ.
Published by:Divya D
First published: