ಇನ್ನೂ ಒಂದು ತಿಂಗಳು ಮಳೆಗೆ ತತ್ತರಿಸಲಿದೆ ರಾಜ್ಯ; ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ?

ಬುಧವಾರ ಬೆಂಗಳೂರಿನಲ್ಲಿ ದಾಖಲೆಯ ಮಳೆ ಸುರಿದಿದ್ದು, 24 ಗಂಟೆಗಳಲ್ಲಿ 6 ಮಿ.ಮೀ ಮಳೆಯಾಗಿದೆ. ಹಾಸನ ಜಿಲ್ಲೆಯಲ್ಲಿ 47.4 ಮಿ.ಮೀ ಮಳೆ ಸುರಿದಿದೆ. ದಕ್ಷಿಣ ಮೈಸೂರು ಮತ್ತು ಮಂಗಳೂರು ಕಡೆ ಯಾವುದೇ ದಾಖಲೆಯ ಮಳೆಯಾಗಿಲ್ಲ ಎಂದು ವರದಿಯಾಗಿದೆ.

Latha CG | news18-kannada
Updated:October 10, 2019, 11:49 AM IST
ಇನ್ನೂ ಒಂದು ತಿಂಗಳು ಮಳೆಗೆ ತತ್ತರಿಸಲಿದೆ ರಾಜ್ಯ; ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ?
ಸಾಂದರ್ಭಿಕ ಚಿತ್ರ
Latha CG | news18-kannada
Updated: October 10, 2019, 11:49 AM IST
ಬೆಂಗಳೂರು(ಅ.10): ರಾಜ್ಯದಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ನಿನ್ನೆ ರಾಜಧಾನಿಯಲ್ಲಿ ಭಾರೀ ಮಳೆಯಾಗಿ ಸುಮಾರು 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಇಂದು ಸಹ ಮಳೆರಾಯ ತನ್ನ ರೌದ್ರ ನರ್ತನ ತೋರಲಿದ್ದಾನೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾನುವಾರದವರೆಗೆ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಮಳೆಯಾಗಲಿದೆ. 24 ಗಂಟೆಗಳಲ್ಲಿ 115 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅಕ್ಟೋಬರ್​ ತಿಂಗಳ ಆರಂಭದಿಂದಲೂ ರಾಜ್ಯದಲ್ಲಿ ಅಧಿಕ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ ಬೆಂಗಳೂರು ಸೇರಿ ದಕ್ಷಿಣ ಭಾಗದಲ್ಲಿ ಭಾರೀ 77 ಮಿಮೀ ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತ ಶೇ.63 ರಷ್ಟು ಹೆಚ್ಚಾಗಿದೆ. ಬೆಳಗಾವಿ ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ 61 ಮಿ.ಮೀ ಮಳೆಯಾಗಿದ್ದು, ಶೇ.39ರಷ್ಟು ಮಳೆ ಹೆಚ್ಚಾಗಿದೆ.

ಬೆಂಗಳೂರಲ್ಲಿ ಇಂದು 2 ಬೃಹತ್ ಪ್ರತಿಭಟನಾ ಮೆರವಣಿಗೆ; ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಭೀತಿ

ಮುಂದಿನ ಎರಡು ವಾರ ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆಯ ಪ್ರಕಾರ ಈ ತಿಂಗಳ ಕೊನೆಯವರೆಗೆ ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ಅನೇಕ ಕಡೆಗಳಲ್ಲಿ ಮಳೆಯಾಗಲಿದೆ. ಅಕ್ಟೋಬರ್ 23ರವರೆಗೆ ಬೆಂಗಳೂರಿಗರಿಗೆ ಮಳೆಯ ಹಾವಳಿ ತಪ್ಪಿದ್ದಲ್ಲ. ಶೇ.80-90ರಷ್ಟು ಮಳೆಯಾಗಲಿದೆ. ಹೀಗಾಗಿ ಬೆಂಗಳೂರಿಗರು ಈ ತಿಂಗಳು ಜಾಗರೂಕತೆಯಿಂದ ಇರಬೇಕಿದೆ.

ಮಳೆರಾಯ ರಾಜಧಾನಿಯಲ್ಲಿ ಮಾತ್ರವಲ್ಲದೇ, ರಾಜ್ಯದ ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲೂ ಅಬ್ಬರಿಸಲಿದ್ದಾನೆ. ಈ ತಿಂಗಳ ಪೂರ್ತಿ ರಾಜ್ಯದಲ್ಲಿ ಮಳೆಯ ಆರ್ಭಟ ಇರಲಿದೆ. ಕರಾವಳಿ ಭಾಗಗಳಲ್ಲಿ ನಿರೀಕ್ಷಿತ ಮಳೆಯಾಗಲಿದೆ. ಈ ವಾರಾಂತ್ಯದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಥೇಚ್ಚ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ದಾಖಲೆಯ ಮಳೆ ಸುರಿದಿದ್ದು, 24 ಗಂಟೆಗಳಲ್ಲಿ 6 ಮಿ.ಮೀ ಮಳೆಯಾಗಿದೆ. ಹಾಸನ ಜಿಲ್ಲೆಯಲ್ಲಿ 47.4 ಮಿ.ಮೀ ಮಳೆ ಸುರಿದಿದೆ. ದಕ್ಷಿಣ ಮೈಸೂರು ಮತ್ತು ಮಂಗಳೂರು ಕಡೆ ಯಾವುದೇ ದಾಖಲೆಯ ಮಳೆಯಾಗಿಲ್ಲ ಎಂದು ವರದಿಯಾಗಿದೆ.
Loading...

Bengaluru Rain: ಮಳೆಯ ಆರ್ಭಟಕ್ಕೆ ಬೆಂಗಳೂರಿನಲ್ಲಿ 150 ಮನೆಗಳು ಜಲಾವೃತ; ಇಂದು ಹವಾಮಾನ ಹೇಗಿರಲಿದೆ?

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...