Anekal: ಮಳೆ ಬಂದ್ರೆ ಕೆರೆಯಂತಾಗುವ ಕ್ರೀಡಾಂಗಣ ಉಳಿಸುವಂತೆ ಕ್ರೀಡಾಪಟುಗಳ ಆಗ್ರಹ

ಆನೇಕಲ್ ತಾಲ್ಲೂಕಿನ ಗಡಿ ಬಾಗದ ಕ್ರೀಡಾಪಟುಗಳ ಉತ್ತಮ ಭವಿಷ್ಯಕ್ಕಾಗಿ ನಿರ್ಮಿಸಿದ ತಾಲ್ಲೂಕು ಮಟ್ಟದ ಕ್ರೀಡಾಂಗಣ ಅತ್ತ ಕ್ರೀಡಾಪಟುಗಳಿಗೆ ಕ್ರೀಡಾಂಗಣವಾಗಿಯು ಉಳಿದಿಲ್ಲ‌ ಇತ್ತ ಕೆರೆಯಾಗಿಯು ಉಳಿದಿಲ್ಲ. ಅಸ್ತಿತ್ವ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಇದೆ.  ಜೊತೆಗೆ ಕಾಡಿನಂತೆ ಗಿಡಗಂಟೆಗಳು ಬೆಳೆದು ನಿಂತಿದೆ.

ಆನೇಕಲ್ ಕ್ರೀಡಾಂಗಣ

ಆನೇಕಲ್ ಕ್ರೀಡಾಂಗಣ

  • Share this:
    ಆನೇಕಲ್: ಗಡಿ ಬಾಗದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ತಾಲ್ಲೂಕು ಮಟ್ಟದ ಕ್ರೀಡಾಂಗಣ (Anekal Taluka Stadium)ಅಭಿವೃದ್ಧಿ  ಮಾಡಲಾಗಿದೆ. ಆದ್ರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ (Rain fall) ಕೆರೆ ನೀರು (Lake Water) ಕ್ರೀಡಾಂಗಣಕ್ಕೆ ನುಗ್ಗಿದ್ದು, ಇಡೀ ಕ್ರೀಡಾಂಗಣ ಕೆರೆಯಂತಾಗಿದೆ. ಕ್ರೀಡಾಪಟುಗಳು (Athletes) ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಬೇಸರಗೊಂಡಿದ್ದು, ಕ್ರೀಡಾಂಗಣ ಉಳಿಸುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ತಾಲ್ಲೂಕು ಮಟ್ಟದ ಕ್ರೀಡಾಂಗಣ ಜಲಾವೃತವಾಗಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಕೆರೆ (Chikkakere) ತುಂಬಿ ಹರಿಯುತ್ತಿದ್ದು, ಕೆರೆಗೆ ಹೊಂದಿಕೊಂಡಂತೆ ಇರುವ ಕ್ರೀಡಾಂಗಣ ಮಳೆ ನೀರಿನಿಂದ ತುಂಬಿದೆ.

    ಗಡಿ ಬಾಗದ ಪ್ರತಿಭೆಗಳಿಗೆ ಅನುಕೂಲವಾಗಲಿ. ಉತ್ತಮ ರೀತಿಯಲ್ಲಿ ತರಬೇತಿ ಪಡೆದು ದೇಶ ವಿದೇಶಗಳಲ್ಲಿ ತಾಲ್ಲೂಕಿನ ವಿಜಯ ಪತಾಕೆ ಹಾರಿಸಲಿ ಎಂದು 2008-2009 ರಲ್ಲಿ ಸುಮಾರು 42 ಎಕರೆ ವಿಸ್ತೀರ್ಣದ ಆನೇಕಲ್ ಚಿಕ್ಕಕೆರೆ ಅಂಗಳದಲ್ಲಿ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಂಗಣ ನಿರ್ಮಿಸಲಾಗಿದೆ.

    ಕ್ರೀಡಾಂಗಣ ಉಳಿಸಲು ಕ್ರೀಡಾಪಟುಗಳ ಒತ್ತಾಯ

    ಕ್ರೀಡಾಂಗಣದಲ್ಲಿ ತರಬೇತಿ ಪಡೆದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ಕ್ರೀಡಾಪಟುಗಳು ಪ್ರಶಸ್ತಿಗಳನ್ನು ಪಡೆದು ಮಿಂಚಿದ್ದಾರೆ. ಆದ್ರೆ ಸದ್ಯ ಕ್ರೀಡಾಂಗಣದ ಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಹಾಗಾಗಿ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕ್ರೀಡಾಂಗಣ ಉಳಿಸಲು ಮುಂದಾಗಬೇಕು ಎಂದು ಕ್ರೀಡಾಪಟು ರವಿ ಒತ್ತಾಯಿಸಿದ್ದಾರೆ.

    ಇನ್ನೂ ಕೆರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಿದ್ದು, ಪ್ರತಿ ಬಾರಿ ಮಳೆ ಸುರಿದು ಕೆರೆ ಭರ್ತಿಯಾದರೆ ಕೆರೆ ನೀರು ಕ್ರೀಡಾಂಗಣಕ್ಕೆ ನುಗ್ಗುತ್ತದೆ. ಪ್ರೇಕ್ಷಕರ ಗ್ಯಾಲರಿ ಸೇರಿದಂತೆ ಇಡೀ ಕ್ರೀಡಾಂಗಣ ಕೆರೆಯಂತಾಗುತ್ತದೆ. ಇದರಿಂದ ಕ್ರೀಡಾಪಟುಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

    Lake water enrets Anekal taluka stadium cank mrq
    ಆನೇಕಲ್ ಕ್ರೀಡಾಂಗಣ


    ತರಬೇತಿ, ಅಭ್ಯಾಸಕ್ಕೆ ಇರೋದು ಒಂದೇ ಕ್ರೀಡಾಂಗಣ

    ವಿದ್ಯಾರ್ಥಿನಿಯರು ಸೇರಿದಂತೆ ಸಾಕಷ್ಟು ಮಂದಿ ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳ ತರಬೇತಿಗಾಗಿ ಕ್ರೀಡಾಂಗಣವನ್ನು ನೆಚ್ಚಿಕೊಂಡಿದ್ದಾರೆ. ತಾಲ್ಲೂಕಿನ ಕ್ರೀಡಾಪಟುಗಳು ಭವಿಷ್ಯದ ದೃಷ್ಟಿಯಿಂದ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಬೇಕು. ಕೆರೆಯ ಮಟ್ಟದಿಂದ ಕ್ರೀಡಾಂಗಣದ ಮಟ್ಟವನ್ನು ಏರಿಸಬೇಕು.

    ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಸರಿಪಡಿಸಿ ಮಳೆ ನೀರು ಸರಾಗವಾಗಿ ಹರಿದು ಮುಂದೆ ಸಾಗುವಂತೆ ಮಾಡಬೇಕು ಎಂದು ಕಬಡ್ಡಿ ಕ್ರೀಡಾಪಟು ರೂಪಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಗಿಡಗಂಟೆಗಳಿಂದ ತುಂಬಿರುವ  ಕ್ರೀಡಾಂಗಣ

    ಆನೇಕಲ್ ತಾಲ್ಲೂಕಿನ ಗಡಿ ಬಾಗದ ಕ್ರೀಡಾಪಟುಗಳ ಉತ್ತಮ ಭವಿಷ್ಯಕ್ಕಾಗಿ ನಿರ್ಮಿಸಿದ ತಾಲ್ಲೂಕು ಮಟ್ಟದ ಕ್ರೀಡಾಂಗಣ ಅತ್ತ ಕ್ರೀಡಾಪಟುಗಳಿಗೆ ಕ್ರೀಡಾಂಗಣವಾಗಿಯು ಉಳಿದಿಲ್ಲ‌ ಇತ್ತ ಕೆರೆಯಾಗಿಯು ಉಳಿದಿಲ್ಲ. ಅಸ್ತಿತ್ವ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಇದೆ.  ಜೊತೆಗೆ ಕಾಡಿನಂತೆ ಗಿಡಗಂಟೆಗಳು ಬೆಳೆದು ನಿಂತಿದೆ.

    Lake water enrets Anekal taluka stadium cank mrq
    ಆನೇಕಲ್ ಕ್ರೀಡಾಂಗಣ


    ಪುಂಡ ಪೋಕರಿಗಳ ನಡುವೆ ನಾಯಿಗಳ ಹಾವಳಿಯು ಇದ್ದು, ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಗಮನಹರಿಸುತ್ತಿಲ್ಲ ಎಂಬ ಆರೋಪವಿದ್ದು, ಇನ್ನಾದರೂ ಸರ್ಕಾರ ಕ್ರೀಡಾಪಟುಗಳ ಧ್ವನಿಗೆ ಸ್ಪಂದಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

    ಇದನ್ನೂ ಓದಿ:  Anekal: ಮಳೆ ಬಳಿಕ ದೊಡ್ಡ ದೊಡ್ಡ ಕಂದಕಗಳಾದ ರಸ್ತೆ ಗುಂಡಿಗಳು; ಪ್ರಾಧಿಕಾರದಿಂದ ತೇಪೆ ಹಚ್ಚುವ ಕೆಲಸ

    Anekal: ಅವೈಜ್ಞಾನಿಕ ರೈಲ್ವೆ ಅಂಡರ್ ಪಾಸ್ ಜಲಾವೃತ

    ಹಲವು ದಿನಗಳಿಂದ ಸುರಿದ ಮಳೆಗೆ ಆನೇಕಲ್ (Anekal Rains) ಬಳಿಯ ರೈಲ್ವೆ ಅಂಡರ್ ಪಾಸ್ (Railway Underpass) ಜಲಾವೃತವಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಸುರಿಯದಿದ್ದರೂ ಅಲ್ಲಿನ ಅಂಡರ್ ಪಾಸ್ ಮಾತ್ರ ಮಳೆ ನೀರಿನಿಂದ ತುಂಬಿದೆ. ಸುತ್ತಮುತ್ತಲಿನ ಗ್ರಾಮಸ್ಥರು ರೈಲ್ವೆ ಅಂಡರ್ ಪಾಸ್​ನಲ್ಲಿ ಹರಸಾಹಸಪಟ್ಟು ಸಂಚರಿಸುವಂತಾಗಿದ್ದು, ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಸಾಮಾನ್ಯವಾಗಿ ಮಳೆ ಬಂದ್ರೆ ಎಲ್ಲರೂ ಖುಷಿಪಡ್ತಾರೆ. ಅದ್ರೆ ಕಳೆದ ಹಲವು ದಿನಗಳಿಂದ ಎಡೆಬಿಡದೇ ಸುರಿದ ಮಳೆಗೆ ಬೆಂಗಳೂರು (Bengaluru) ಹೊರವಲಯ ಆನೇಕಲ್ ತಾಲ್ಲೂಕಿನ ಅರವಂಟಿಕೆಪುರ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಪಡುವಂತಾಗಿದೆ.

    ಇದನ್ನೂ ಓದಿ:  Anekal: ಆಮೆಗತಿಯಲ್ಲಿ ಹುಸ್ಕೂರು ಅಂಡರ್ ಪಾಸ್ ಕಾಮಗಾರಿ; ಮಳೆ ಬಂದ್ರೆ ಕೆರೆಯಂತಾಗುವ ರಸ್ತೆ

    ಆನೇಕಲ್ ಪಟ್ಟಣ ಮತ್ತು ಬೆಂಗಳೂರು ಸೇರಿದಂತೆ ಬೇರೆ ಕಡೆ ಸಂಚರಿಸಲು ಅರವಂಟಿಕೆಪುರ ಸೇರಿದಂತೆ ಸುತ್ತಮುತ್ತಲಿ ಹತ್ತೂರು ಹಳ್ಳಿ ಜನ ಅರವಂಟಿಕೆಪುರ ರೈಲ್ವೆ ಅಂಡರ್ ಪಾಸ್ ಮೂಲಕ ಸಾಗಬೇಕಿದೆ. ಆದ್ರೆ ಸಣ್ಣ ಮಳೆ ಬಂದರೂ ಸಾಕು ರೈಲ್ವೆ ಅಂಡರ್ ಪಾಸ್ ಜಲಾವೃತವಾಗುತ್ತದೆ.
    Published by:Mahmadrafik K
    First published: