Bengaluru Rains: ಬೆಂಗಳೂರಿನಲ್ಲಿ ವರುಣನ ಅಬ್ಬರ: ಅಂಡರ್‌ಪಾಸ್‌ ಜಲಾವೃತ, ತಗ್ಗು ಪ್ರದೇಶಗಳಿಗೆ ನೀರು

ಇಲ್ಲಿ ಚೇಂಬರ್ ಸಮಸ್ಯೆ ಇದೆ. ಹೊಸ ಚೇಂಬರ್ ಮಾಡಿದಾಗಿಂದ್ಲೂ ಮನೆಗಳಿಗೆ ನೀರು ನುಗ್ಗೋದು ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ್ಲೂ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ. ಚುನಾವಣೆ ವೇಳೆ ಬಂದು ಮತ ಹಾಕಿಸಿಕೊಂಡು ಹೋಗುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Rains) ರಾತ್ರಿ ಸುರಿದ ಮಳೆಗೆ, ನಗರವಾಸಿಗಳು ಹೈರಾಣು ಅಗಿದ್ದಾರೆ. ರಾತ್ರಿ 10 ಗಂಟೆಯ ನಂತರ ಆರಂಭವಾದ ಮಳೆಯಿಂದಾಗಿ ನಗರದ ಬಹುತೇಕ ಅಂಡರ್ ಪಾಸ್ (Underpass)ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಎರಡು ಗಂಟೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಬಿಬಿಎಂಪಿ (BBMP) ಅಧಿಕಾರಿಗಳ ವಿರುದ್ಧ  ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಕಳಿಪುರಂ, ವಿಂಡ್ಸರ್ ಮ್ಯಾನರ್, ರೇಸ್ ಕೋರ್ಸ್ ರಸ್ತೆಯ ಅಂಡರ್‌ಪಾಸ್‌ ಜಲಾವೃತವಾಗಿ ರಾತ್ರಿ ವಾಹನ ಸವಾರರ (Benglauru Traffic And Potholes)ಪರದಾಟ ನಡೆಸುವಂತಾಯ್ತು.

ಬೆಂಗಳೂರಿನ ಯಾವ ಏರಿಯಾದಲ್ಲಿ ಮಳೆ?

ಬೆಂಗಳೂರಿನ ಪೂರ್ವ ವಲಯ, ಆರ್.ಆರ್ ನಗರ ವಲಯ, ಪೂರ್ವ ವಲಯದಲ್ಲಿ ಹೆಚ್ಚು ಮಳೆಯಾಗಿದೆ. ಬಸವೇಶ್ವರ ನಗರ 79‌ mm, ಪ್ರಕಾಶ್ ನಗರ 79‌ mm, ಕಾಟನ್ ಪೇಟೆ 55 mm, ಬಿನ್ನಿಮಿಲ್‌ 55 mm, ಓಕಳಿಪುರಂ, ಕೆ.ಪಿ ಅಗ್ರಹಾರ 55‌ mm, ಆರ್.ಆರ್ ನಗರ 49 mm, ಸುಭಾಷ್ ನಗರ 48.5‌ mm, ಮಲ್ಲೇಶ್ವರಂ 38‌ mm ಮತ್ತು  ಯಶವಂತಪುರದಲ್ಲಿ 38.5 mm ಮಳೆಯಾಗಿರುವ ಬಗ್ಗೆ ಬಿಬಿಎಂಪಿ ವರದಿ ಮಾಡಿದೆ.

ಗಾಯತ್ರಿನಗರ ವಾರ್ಡ್ ನ ಲಕ್ಷ್ಮೀ ನಾರಾಯಣ ಪುರ ಏರಿಯಾದ ಹಲವು ಏರಿಯಾಗಳ  ಮನೆಗಳಿಗೆ ನೀರು ನುಗ್ಗಿದೆ. ರಾತ್ರಿಯೆಲ್ಲ ಜನರು ಜಾಗರಣೆ ಮಾಡುವಂತಾಯ್ತು. ಮಳೆ ಬಂದ ಪ್ರತೀ ಸಾರಿ ನೂ ಇದೇ ಗತಿ. ಅಧಿಕಾರಿಗಳಿಗೆ ಎಷ್ಟು ಹೇಳಿದ್ರೂ ಏನೂ ಪ್ರಯೋಜನೆ ಇಲ್ಲ. ಇಲ್ಲಿ ಚೇಂಬರ್ ಸಮಸ್ಯೆ ಇದೆ. ಹೊಸ ಚೇಂಬರ್ ಮಾಡಿದಾಗಿಂದ್ಲೂ ಮನೆಗಳಿಗೆ ನೀರು ನುಗ್ಗೋದು ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ್ಲೂ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ. ಚುನಾವಣೆ ವೇಳೆ ಬಂದು ಮತ ಹಾಕಿಸಿಕೊಂಡು ಹೋಗುತ್ತಾರೆ. ಆದ್ರೆ ಯಾವ ಅಧಿಕಾರಿಗಳೂ ಸಮಸ್ಯೆ ಬಗೆಹರಿಸಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ  ಕುಸಿತ ಹಿನ್ನೆಲೆಯಲ್ಲಿ  ಬೆಂಗಳೂರು (Bengaluru Rainfall) ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ.  ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಅ.  23ರಂದು ಹೆಚ್ಚು ಮಳೆ ಬೀಳುವ ಸಂಭವವಿದೆ. ಅ. 1 ರಿಂದ 20ರವರೆಗೆ ನಗರದಲ್ಲಿ 209 ಮಿ.ಮೀ. ಮಳೆ ಸುರಿದಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ರಸ್ತೆಗಳು ಗುಂಡಿ ಬಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.

ಇದನ್ನೂ ಓದಿ:  Karnataka Weather Today: ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಮಳೆ: ಯಾವ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ತಮಿಳುನಾಡಿನಲ್ಲಿ ಭಾರೀ ಮಳೆ  ಸಾಧ್ಯತೆ

ಉತ್ತರಾಖಂಡ್ ನಲ್ಲಿ ಅಕ್ಟೋಬರ್ 1 ರಿಂದ 21ರವರೆಗೆ ಶೇ.41ರಷ್ಟು ಮಳೆಯಾಗಿದೆ. ಸಾಧಾರಣ ಮಳೆಗಿಂತ ನಾಲ್ಕು ಪಟ್ಟು ಮಳೆಯಾಗಿದೆ. ಮುಂದಿನ ನಾಲ್ಕೈದು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ವರುಣ ವಿರಾಮ ನೀಡಿದ್ದನು. ಆದ್ರೆ ಇಂದು ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ  ಸಾಧ್ಯತೆಗಳಿದ್ದು , ನದಿ ತೀರದ ಜನರು ಎಚ್ಚರಿಕೆಯಿಂದಿರಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತ ನೇರ ಪರಿಣಾಮ ಚೆನ್ನೈ ನಗರದ ಮೇಲೆ ಬೀಳಲಿದೆ. ಹಾಗೆಯೇ ಬೆಂಗಳೂರಿನಲ್ಲಿಯೂ ಮಳೆ ಸುರಿಯಲಿದೆ.

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ(Rainfall)ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.
Published by:Mahmadrafik K
First published: