Karnataka Rains: ಅತಿವೃಷ್ಟಿ ರಾಗಿ ಕಣಜದಲ್ಲಿ ಬಿತ್ತನೆ ಕುಂಠಿತ; ಹಿಂಗಾರು ನಿರೀಕ್ಷೆಯಲ್ಲಿ ರೈತ ವರ್ಗ

ಪ್ರತಿ ವರ್ಷ ಅಗಸ್ಟ್ ತಿಂಗಳು ಕೊನೆ ವಾರದ ಹೊತ್ತಿಗೆ ಆನೇಕಲ್ ತಾಲ್ಲೂಕಿನ ಬಹುತೇಕ ಎಲ್ಲಾ ರೈತರು ಬಿತ್ತನೆ ಚಟುವಟಿಕೆಗಳು ಮುಗಿಸುತ್ತಿದ್ದರು. ಆದ್ರೆ ಈ ವರ್ಷ ಆಗಸ್ಟ್ ಕೊನೆ ವಾರ ಸಮೀಪಿಸುತ್ತಿದ್ದರೂ ಅರ್ಧದಷ್ಟು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ.

ಜಮೀನು ಜಲಾವೃತ

ಜಮೀನು ಜಲಾವೃತ

  • Share this:
ರಾಗಿ ಕಣಜ ಖ್ಯಾತಿಯ ಆನೇಕಲ್ (Anekal) ತಾಲ್ಲೂಕಿನಲ್ಲಿ ವಾಡಿಕೆ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ (Heavy Rainfall) ಈ ಬಾರಿ ರಾಗಿ (Paddy ಬಿತ್ತನೆ ಕುಂಠಿತವಾಗಿದೆ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಸುರಿದಿದ್ದರಿಂದ ಸಕಾಲಕ್ಕೆ ರೈತರು (Farmers) ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಕಳೆದ ಒಂದು ವಾರದಿಂದ ಮಳೆ ಬಿಡುವು ನೀಡಿದ್ದು,  ಬಿತ್ತನೆಗಾಗಿ ಜಮೀನು ಹದಗೊಳಿಸಬಹುದಾಗಿದೆ. ಸದ್ಯ ಮಳೆ ಎಡೆಬಿಡದೆ ಸುರಿದಿದ್ದರಿಂದ ಭೂಮಿ (Agriculture Land) ಬಂಡೆಯಂತಾಗಿದೆ. ಈಗ ಬಿತ್ತನೆ ಮಾಡಿದರು ರಾಗಿ ಬೆಳೆ (Paddy Crop) ಉತ್ತಮವಾಗಿ ಬೆಳೆಯುವುದಿಲ್ಲ. ಹಾಗಾಗಿ ಈಗಾಗಲೇ ಬಿತ್ತನೆ ಸಮಯ ಮುಗಿದಿದ್ದು, ಈಗಲೂ ಬಿತ್ತನೆ ಮಾಡಲು ಜಮೀನು ಹದ ಮಾಡಿ ಮಳೆ ಸುರಿದು ಭೂಮಿ ತೇವ ಆದ ಬಳಿಕ ಬಿತ್ತನೆ ಮಾಡಿದರೆ ಒಳಿತು ಎಂದು ರೈತ ರಾಜಗೋಪಾಲ್ ಹೇಳುತ್ತಾರೆ.

ಹೌದು ಪ್ರತಿ ವರ್ಷ ಅಗಸ್ಟ್ ತಿಂಗಳು ಕೊನೆ ವಾರದ ಹೊತ್ತಿಗೆ ಆನೇಕಲ್ ತಾಲ್ಲೂಕಿನ ಬಹುತೇಕ ಎಲ್ಲಾ ರೈತರು ಬಿತ್ತನೆ ಚಟುವಟಿಕೆಗಳು ಮುಗಿಸುತ್ತಿದ್ದರು. ಆದ್ರೆ ಈ ವರ್ಷ ಆಗಸ್ಟ್ ಕೊನೆ ವಾರ ಸಮೀಪಿಸುತ್ತಿದ್ದರೂ ಅರ್ಧದಷ್ಟು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ.

ಬಿತ್ತನೆ ಕಾರ್ಯಕ್ಕೆ ಮಳೆ ಅಡ್ಡಿ

ಪ್ರಾರಂಭದಲ್ಲಿ ಉತ್ತಮವಾಗಿ ಮಳೆ ಸುರಿದಿದ್ದರಿಂದ ರೈತರು ಸಂತಸಗೊಂಡಿದ್ದರು. ಅದೇ ಖುಷಿಯಲ್ಲಿ ಜಮೀನನ್ನು ಸಹ ಉಳಿಮೆ ಮಾಡಿ ಬಿತ್ತನೆಗೆ ಹದಗೊಳಿಸಿದ್ದರು. ಆದ್ರೆ ಬಿತ್ತನೆ ಕಾರ್ಯ ಸಮೀಪಿಸುತ್ತಿದ್ದಂತೆ ಮಳೆ ಬಿಟ್ಟು ಬಿಡದೇ ಸತತವಾಗಿ ಸುರಿದಿದ್ದರಿಂದ ಬಿತ್ತನೆ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.

ಇದನ್ನೂ ಓದಿ:  Manekshaw Parade Ground: ದ್ವಾರದ ಮೇಲಿದ್ದ ಟಿಪ್ಪು, ರಾಣಿ ಚೆನ್ನಮ್ಮ ಹೆಸರಿಗೆ ಸುಣ್ಣ ಬಳಿದ ಸರ್ಕಾರ

ಇನ್ನೂ ಸತತ ಮಳೆಯಿಂದ ಭೂಮಿ ಬಂಡೆಯಂತಾಗಿದೆ. ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತ್ತಿದ್ದು, ಬಿತ್ತನೆಗೆ ಬೇಕಾದ ತೇವಾಂಶ ಭೂಮಿಯಲ್ಲಿ ಇಲ್ಲವಾಗಿದ್ದು, ರೈತರು ಬಿತ್ತನೆ ಮಾಡಲಾಗದೆ ಕಂಗಲಾಗಿದ್ದಾರೆ. ಈಗಾಗಲೇ ಬಿತ್ತನೆ ಅವಧಿ ಮುಗಿಯುವ ಹಂತದಲ್ಲಿದ್ದು, ಮಳೆ ನಿರೀಕ್ಷೆಯಲ್ಲಿರುವುದಾಗಿ ರೈತ ರೆಡ್ಡಿ ತಿಳಿಸಿದ್ದಾರೆ.

Heavy rain effect on agriculture activities in anekal cank mrq
ಕೃಷಿ ಭೂಮಿ


ಕಳೆದ ವರ್ಷ ಕಟಾವಿಗೆ ಅಡ್ಡಿಯಾಗಿತ್ತು ಮಳೆ

ಇನ್ನೂ ಕಳೆದ ಹಲವು ವರ್ಷಗಳಿಂದ ವರುಣನ ಕಣ್ಣಾಮುಚ್ಚಾಲೆ ಆಟದಿಂದಾಗಿ ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನಲ್ಲಿ ಬರ ಕಾಡಿತ್ತು. ಕಳೆದ ವರ್ಷ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ ರಾಗಿ ಬೆಳೆ ಕಟಾವಿಗೆ ಅಡ್ಡಿಯಾಗಿ ಬೆಳೆ ಮಣ್ಣು ಪಾಲಾಗಿತ್ತು.

ಹಿಂಗಾರು ಮಳೆಯ ನಿರೀಕ್ಷೆಯ ಮೇಲೆ ರೈತರು

ಈ ವರ್ಷ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ರೈತನಿಗೆ ಬರಪೂರ ಮಳೆ ಸುರಿದಿದ್ದು, ಅತಿವೃಷ್ಟಿಯಾಗಿದೆ. ಹಾಗಾಗಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾನೆ. ಇಷ್ಟೊತ್ತಿಗೆ ರಾಗಿ, ಅವರೆ, ಅಲಸಂದೆ ಬಿತ್ತನೆ ಮಾಡಬೇಕಿತ್ತು. ಆದ್ರೆ ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಈಗ ಬಿತ್ತನೆ ಮಾಡಿದರು ಕಾಲ ಮಿಂಚಿ ಹೋಗಿದೆ.

ಒಂದು ವೇಳೆ ಹಿಂಗಾರು ಉತ್ತಮ ಮಳೆಯಾದರೆ ಒಂದಷ್ಟು ಫಸಲು ಕೈಗೆ ಬರಬಹುದು. ಇಲ್ಲದಿದ್ದರೆ ಬಿತ್ತನೆ ಕಾಳು ಹಾಳಾಗುತ್ತದೆ ಎಂದು ರೈತ ರಾಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಉತ್ತಮ ಮಳೆಯಾದ್ರೆ ಅತಿವೃಷ್ಠಿ ಮಳೆಯಾಗದಿದ್ದರೆ ಅನಾವೃಷ್ಠಿ. ಒಟ್ಟಿನಲ್ಲಿ ರೈತನಿಗೆ ಮಳೆಯಾದ್ರು ಕಷ್ಟ ಮಳೆಯಾಗದಿದ್ದರೂ ನಷ್ಟ. ಅದರಲ್ಲೂ ಮಳೆ ನೆಚ್ಚಿಕೊಂಡು ಕೃಷಿ ಮಾಡುವ ರೈತನ ಸದ್ಯದ ಸ್ಥಿತಿ ಹೇಳ ತೀರದಾಗಿದೆ.

Heavy rain effect on agriculture activities in anekal cank mrq
ಕೃಷಿ ಭೂಮಿ


ಇದನ್ನು ಓದಿ:  Largest Flag: ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿತು ದೇಶದ ಅತೀ ದೊಡ್ಡ ರಾಷ್ಟ್ರಧ್ವಜ! ಕೋಲಾರದ ಮುಕುಟಕ್ಕೆ ಮತ್ತೊಂದು ಕಿರೀಟ

ಸಂಚಾರಕ್ಕೆ ಮುಕ್ತವಾದ ಸೇತುವೆಗಳು

ನಿರಂತರ ಮಳೆಯಿಂದಾಗಿ ಮಲೆನಾಡು ಸೇರಿದಂತೆ ರಾಜ್ಯದ ಕೆಳ ಹಂತದ ಸೇತುವಗಳು ಜಲಾವೃತಗೊಂಡಿದ್ದವು. ಮಳೆ ಕಡಿಮೆಯಾದ ಹಿನ್ನೆಲೆ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.
Published by:Mahmadrafik K
First published: