Heavy Rain: ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ; ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು!

ಪ್ರತಿ ಬಾರಿ ಮಳೆಗಾಲದಲ್ಲಿ ಊರಲ್ಲಿ ಯಾರಾದ್ರೂ ಮೃತಪಟ್ಟರು ಅಂತ್ಯಕ್ರಿಯೆ ನಡೆಸಲು ಕೋಡ್ಲು ಗ್ರಾಮಸ್ಥರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಮಳೆಗಾಲದಲ್ಲಿ 4-5 ತಿಂಗಳು ಸ್ಮಶಾನದ ರಸ್ತೆಯೇ ಮುಳುಗಡೆಯಾಗುತ್ತದೆ.

ನೀರಲ್ಲಿ ಶವಹೊತ್ತು ಸಾಗಿದ ಗ್ರಾಮಸ್ಥರು

ನೀರಲ್ಲಿ ಶವಹೊತ್ತು ಸಾಗಿದ ಗ್ರಾಮಸ್ಥರು

  • Share this:
ಶಿವಮೊಗ್ಗ (ಆ.07): ರಾಜ್ಯದಲ್ಲಿ ಮಳೆಯ ಆರ್ಭಟ ಕಡಿಮೆಯಾಗೋ ಲಕ್ಷಣವೇ ಕಾಣ್ತಿಲ್ಲ. ಗೃಹ ಸಚಿವರ (Home Minister) ತವರೂರು ತೀರ್ಥಹಳ್ಳಿ (Tirtahalli) ತಾಲೂಕಿನಲ್ಲಿ ಜನರಿಗೆ ಎಂಥಾ ಸ್ಥಿತಿ ಬಂದಿದೆ. ರಸ್ತೆಯಿಲ್ಲದೇ ಜನರು ಶವವನ್ನು ನೀರಿನಲ್ಲೇ ಹೊತ್ತು ಸಾಗಿದ್ದಾರೆ. ಹೊಸಹಳ್ಳಿ (Hosahalli) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡ್ಲು ಗ್ರಾಮದಿಂದ ಸ್ಮಶಾನ (Graveyard) ಜಾಗಕ್ಕೆ ರಸ್ತೆಯಿಲ್ಲದೇ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಯೋ ಸಹಜ ಸಮಸ್ಯೆಯಿಂದ (Problem) ಸಾವನ್ನಪ್ಪಿದ್ದ ಕೋಡ್ಲು ಗ್ರಾಮದ ತಮ್ಮಯ್ಯ ಗೌಡ ಎಂಬುವರ ಶವ ಸಾಗಿಸಲು ಕುಟುಂಬಸ್ಥರು (Family) ಹರಸಾಹಸ ಪಟ್ಟಿದ್ದಾರೆ. ಹಳ್ಳದ ನೀರಿನಲ್ಲೇ ಹೊತ್ತುಕೊಂಡು ಸಾಗಿ, ಸುರಿವ ಮಳೆಯಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ರಸ್ತೆಯಿಲ್ಲದೇ ಶವವನ್ನು ನೀರಿನಲ್ಲೇ ಹೊತ್ತು ಸಾಗಿದ ಗ್ರಾಮಸ್ಥರು


ಮಳೆಗಾಲದಲ್ಲಿ 4-5 ತಿಂಗಳು ಸ್ಮಶಾನ ರಸ್ತೆ ಮುಳುಗಡೆ

ಪ್ರತಿ ಬಾರಿ ಮಳೆಗಾಲದಲ್ಲಿ ಊರಲ್ಲಿ ಯಾರಾದ್ರೂ ಮೃತಪಟ್ಟರು ಅಂತ್ಯಕ್ರಿಯೆ ನಡೆಸಲು ಕೋಡ್ಲು ಗ್ರಾಮಸ್ಥರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಮಳೆಗಾಲದಲ್ಲಿ 4-5 ತಿಂಗಳು ಸ್ಮಶಾನದ ರಸ್ತೆಯೇ ಮುಳುಗಡೆಯಾಗುತ್ತದೆ. ಸ್ಮಶಾನಕ್ಕೆ ಎತ್ತರಿಸಿ ರಸ್ತೆ ಮಾಡುವಂತೆ ಹಲವು ಬಾರಿ ಗ್ರಾಮಸ್ಥರು  ಮನವಿ ಮಾಡಿಕೊಂಡಿದ್ದು ಪ್ರಯೋಜನವಾಗಿಲ್ಲ. ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಡ್ಲು ಗ್ರಾಮಸ್ಥರು ಮಳೆಗಾಲದಲ್ಲಿ ಪರದಾಡುವಂತಾಗಿದ್ದು, ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Kodagu Rains: ವರುಣಾರ್ಭಟ; ಕಾವೇರಿಯ ರುದ್ರ ಪ್ರತಾಪ, ಸಂಪರ್ಕ ಕಡಿತ, ಮನೆ ಕುಸಿತ , ಜನಜೀವನ ಅಸ್ತವ್ಯಸ್ತ

ಕೊಡಗಿನಲ್ಲಿ ವರುಣನ ಅಬ್ಬರ

ಕಾವೇರಿ ತವರು ಕೊಡಗಿನಲ್ಲಿ ವರುಣ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಧಾರಾಕಾರ ಮಳೆ, ಭೀಕರ ಭೂ ಕುಸಿತ, ಜಲಸ್ಫೋಟ, ಪ್ರವಾಹಕ್ಕೆ  ಜಿಲ್ಲೆ ತತ್ತರಿಸಿ ಹೋಗಿದೆ. ಈ ಬಾರಿಯ ಮಳೆಗಾಲ ಜಿಲ್ಲೆಯಲ್ಲಿ ಭಾರೀ ನಷ್ಟಕ್ಕೆ ಕಾರಣವಾಗಿದೆ. ಜೂನ್ ತಿಂಗಳ ಅಂತ್ಯ ಮತ್ತು ಜುಲೈ  ತಿಂಗಳಿನಲ್ಲಿ ಕೊಡಗಿಗೆ ಎಂಟ್ರಿ ಕೊಟ್ಟ ವರುಣ ಆರಂಭದಲ್ಲೇ ಅಬ್ಬರಿಸಿ ಬೊಬ್ಬಿರಿದಿದ್ದ.

ಜುಲೈ ಮಧ್ಯ ಹಾಗೂ ಅಂತ್ಯಕ್ಕಾದರೂ ವರುಣಾರ್ಭಟ ಕಡಿಮೆಯಾಗಬಹುದು ಅಂದುಕೊಂಡಿದ್ದ ಜನರಿಗೆ ಮೇಲಿಂದ ಮೇಲೆ ಶಾಕ್‌ ಕೊಟ್ಟ ಮಳೆರಾಯ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಭೂಕಂಪನ, ಜಲಸ್ಪೋಟದೊಂದಿಗೆ ಜಿಲ್ಲೆಯ ಜನ ಹೈರಾಣಾಗುವಂತೆ ಮಾಡಿದೆ. ಮಳೆಯ ಪರಿಣಾಮ ಕೊಡಗು ಈಗಾಗಲೇ ಸಾವಿರ ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ.

ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಹಾನಿ

ಇನ್ನು ಭಾರೀ ನಷ್ಟ ಅಂದ್ರೆ ಅದು ಜಿಲ್ಲೆಯೊಳಗಿನ 1174.41 ಕಿಲೋ ಮೀಟರ್ ರಸ್ತೆಗೆ ಹಾನಿಯಾಗಿದೆ.‌ ಇದೊಂದೆ ಬರೋಬ್ಬರಿ 264 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ 83 ಸೇತುವೆಗಳಿಗೆ ಹಾನಿಯಾಗಿದ್ದು, 21 ಕೋಟಿ ನಷ್ಟವಾಗಿದೆ. ಅಲ್ಲದೆ 28 ಪ್ರಾಥಮಿಕ ಆರೋಗ್ಯ ಕೇಂದ್ರ, 150 ಶಾಲೆಗಳು ಹಾಗೂ 39 ಅಂಗನವಾಡಿ ಕೇಂದ್ರಗಳಿಗೆ ಮಳೆಯಿಂದ ಹಾನಿಯಾಗಿದೆ. ಅಷ್ಟೇ ಅಲ್ಲದೆ ಮಳೆಯ ಆರ್ಭಟಕ್ಕೆ ಜುಲೈನಿಂದ ಇಲ್ಲಿಯವರೆಗೆ 1819 ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, 137 ಟ್ರಾನ್ಸ್‌ಫಾರ್ಮರ್ಸ್‌‌ಗೆ ಹಾನಿಯಾಗಿದೆ.

ಹಾಸನದಲ್ಲೂ ಕೊಚ್ಚಿ ಹೋಗಿದೆ ಹೆದ್ದಾರಿ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಗೆ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿದೆ. ನಿರಂತರ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪದ ರಸ್ತೆ ತಡೆಗೋಡೆ ಕುಸಿತವಾಗಿದೆ. ನಿರಂತರ ಮಳೆಗೆ ಸುಮಾರು 25. ಮೀಟರ್ ಉದ್ದಕ್ಕೆ ಬೃಹತ್ ತಡೆಗೋಡೆ ಕೊಚ್ಚಿಹೋಗಿದೆ.

ಇದನ್ನೂ ಓದಿ: Landslides: ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ; ಕರಿಕೆ ರಸ್ತೆ, ಸಂಪಾಜೆಯ ಕಲ್ಲಾಳದಲ್ಲಿ ಭೂಕುಸಿತ

ಚತುಷ್ಪತ ರಸ್ತೆ ನಿರ್ಮಾಣಕ್ಕಾಗಿ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಿಸಿದ್ದ ತಡೆಗೋಡೆ ನಾಶವಾಗಿದೆ. ಸತತ 6 ದಿನಗಳಿಂದ ಮಲೆನಾಡಲ್ಲಿ ಮಳೆ ಆರ್ಭಟ ನಿಂತಿಲ್ಲ. ಈ ಹಿಂದೆ ದೋಣಿಗಲ್ ಸಮೀಪ ಭೂ ಕುಸಿತವಾಗಿದ್ದ ಸ್ಥಳದಿಂದ ಒಂದು ಕಿಲೋಮೀಟರ್ ಹಿಂದೆ ತಡೆಗೋಡೆ ಕೊಚ್ಚಿ ಹೋಗಿದೆ. ಮತ್ತಷ್ಟು ಮಳೆ ಹೆಚ್ಚಾದರೆ ಮುಖ್ಯ ರಸ್ತೆಗೆ ಹಾನಿಯಾಗೋ ಆತಂಕ ಎದುರಾಗಿದೆ.
Published by:Pavana HS
First published: