HOME » NEWS » State » HEAVY RAIN AT VIJAYAPURA AND FLOOD SITUATION CREATES LG

ವಿಜಯಪುರದಲ್ಲಿ ಡೋಣಿ ಜೊತೆ ಭೀಮಾ ನದಿಯ ಪ್ರವಾಹ; ರೈತರ ಗಾಯದ ಮೇಲೆ ಬರೆ ಎಳೆದ ಮಳೆರಾಯ

ಮಹಾರಾಷ್ಟ್ರದ ಗಡಿಯಲ್ಲಿರುವ ಭೀಮಾ ನದಿಯೂ ಈಗ ಉಕ್ಕಿ ಹರಿಯುತ್ತಿದೆ.  ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಹಾರಾಷ್ಟ್ರ ಉಜನಿ ಜಲಾಶಯದಿಂದ ಸುಮಾರು 1.50 ಲಕ್ಷ ಕ್ಯೂಸೆಕ್ ಮತ್ತು ವೀರ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಿದೆ.

news18-kannada
Updated:October 15, 2020, 3:00 PM IST
ವಿಜಯಪುರದಲ್ಲಿ ಡೋಣಿ ಜೊತೆ ಭೀಮಾ ನದಿಯ ಪ್ರವಾಹ; ರೈತರ ಗಾಯದ ಮೇಲೆ ಬರೆ ಎಳೆದ ಮಳೆರಾಯ
ಮಳೆ
  • Share this:
ವಿಜಯಪುರ, (ಅ. 15):  ಡೋಣಿ ಉಕ್ಕಿತು,  ಈಗ ಭೀಮೆ ಉಕ್ಕುತ್ತಿದೆ.  ಡೋಣಿ ಉಕ್ಕಲು ಜಿಲ್ಲೆಯಲ್ಲಿ ಸುರಿದ ಮಳೆ ಕಾರಣವಾದರೆ, ಭೀಮೆ ತುಂಬಿ ಹರಿಯಲು ಮಹಾರಾಷ್ಟ್ರದ ಮಹಾಮಳೆ ಕಾರಣವಾಗಿದೆ. ಹೌದು, ಈಗಾಗಲೇ ಹವಾಮಾನ ವೈಪರೀತ್ಯದಿಂದಾಗಿ ಕಳೆದ ಮೂರು ದಿನಗಳಿಂದ ಸುರಿದ ಮಳೆ ಸುರಿದ ಮಳೆಯಿಂದ ಬಸವನಾಡು ವಿಜಯಪುರ ಜಿಲ್ಲೆಯ ಜನ ತತ್ತರಿಸಿದ್ದಾರೆ.  ಈವರೆಗೆ ಡೋಣಿ ನದಿ ಪ್ರವಾಹದಿಂದ 36 ಗ್ರಾಮಗಳ ಜನ ತತ್ತರಿಸಿದ್ದರೆ ಈಗ ಭೀಮಾ ನದಿ ಪ್ರವಾಹ ಗಡಿ ಭಾಗದಲ್ಲಿನ ಜನರ ಬಾಳನ್ನು ಕಂಗಾಲಾಗಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿತ್ತು.  ಹಳ್ಳಕೊಳ್ಳಗಳೂ ತುಂಬಿ ಹರಿದು ಡೋಣಿ ನದಿ ಸೇರಿದ ಪರಿಣಾಮ ಈ ಪ್ರವಾಹ ಹೆಚ್ಚಾಗಲು ಕಾರಣವಾಗಿತ್ತು.  ಈಗಾಗಲೇ ಡೋಣಿ ನದಿ ಪ್ರವಾಹದಿಂದ ಕೋಟ್ಯಂತರ ರೂಪಾಯಿ ಬೆಳೆ ಹಾನಿಯಾಗಿದೆ.  ಡೋಣಿ ನದಿ ಪ್ರವಾಹ ಇನ್ನೂ ಮುಂದುವರೆದಿದೆ.

ಆದರೆ, ಮಹಾರಾಷ್ಟ್ರದ ಗಡಿಯಲ್ಲಿರುವ ಭೀಮಾ ನದಿಯೂ ಈಗ ಉಕ್ಕಿ ಹರಿಯುತ್ತಿದೆ.  ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಹಾರಾಷ್ಟ್ರ ಉಜನಿ ಜಲಾಶಯದಿಂದ ಸುಮಾರು 1.50 ಲಕ್ಷ ಕ್ಯೂಸೆಕ್ ಮತ್ತು ವೀರ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಿದೆ.  ಈ ಹಿನ್ನಲೆೆಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿದೆ.

ನಕಲಿ ಕಂದಾಯ ರಸೀದಿ ಸೃಷ್ಠಿ; ದಾವಣಗೆರೆ ಪಾಲಿಕೆ ಖಜಾನೆಗೆ ಕನ್ನ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದಸೂರ ಮೂಲಕ ಕರ್ನಾಟಕವನ್ನು ಪ್ರವೇಶಿಸುವ ಭೀಮಾ ನದಿಗೆ ಕರ್ನಾಚಕ-ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 8 ಬ್ಯಾರೇಜುಗಳನ್ನು ನಿರ್ಮಿಸಲಾಗಿದ್ದು, ಆ ಬ್ಯಾರೇಜುಗಳು ಈಗ ಸಂಪೂರ್ಣವಾಗಿ ಮುಳಿಗಿ ಹೋಗಿವೆ.  ಕ್ಷಣಕ್ಷಣಕ್ಕೂ ಭೀಮೆಯಲ್ಲಿ ಪ್ರವಾಹ ಹೆಚ್ಚುತ್ತಿರುವುದರಿಂದ ಈ ನದಿ ತೀರದ ದಸೂರ, ಉಮರಜ, ಗೋವಿಂದಪುರ, ಉಮರಜ, ನಂದರಗಿ, ಉಮರಾಣಿ, ಟಾಕಳಿ, ತದ್ದೆವಾಡಿ, ಮರಗೂರ, ಶಿರನಾಳ, ಧೂಳಖೇಡ, ಚಣೆಗಾಂವ, ಅಣಚಿ, ಗುಬ್ಬೇವಾಡ, ಶಂಬೆವಾಡ, ಅಗರಖೇಡ, ಚಿಕ್ಕಮಣೂರ, ತಾವರಖೇಡ, ಕಡಣಿ, ತಾರಾಪುರ, ಶಂಬೇವಾಡ, ದೇವಣಗಾಂವ ಸೇರಿದಂತೆ ಭೀಮಾ ತೀರದ ಎಲ್ಲ ಗ್ರಾಮಗಳ ಕೃಷಿ ಭೂಮಿ ಜಲಾವೃತವಾಗಿದೆ.

ಇತ್ತ ಉಮರಾಣಿಯಲ್ಲಿ ಭೀಮಾ ತೀರದ ಹೊಗಳು ಬಹುತೇಕ ಮುಳುಗಡೆಯಾಗಿದ್ದು, ನದಿ ತೀರದಲ್ಲಿ ಇಡಲಾಗಿದ್ದ ವಿದ್ಯುತ್ ಪಂಪಸೆಟ್ ಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ರೈತರು ಪರದಾಡುವಂತಾಗಿದೆ.  ಈವರೆಗೆ ಇಂಥ ಮಳೆಯನ್ನೇ ತಾವು ನೋಡಿರಲಿಲ್ಲ ಎಂದು ಯುವ ರೈತರಾದ ಮಂಜುನಾಥ ಚಿಂಚೋಳಿ, ಮಲ್ಲು ಚಿಂಚೋಳಿ, ಪ್ರದೀಪ ಚಿಂಚೋಳಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ಅಣಚಿ ಗ್ರಾಮದಲ್ಲಿ ವಿಶ್ವನಾಥ ಕಲಬುರ್ಗಿ ಎಂಬುವ ರೈತರಿಗೆ ಸೇರಿದ ಬಾಳೆ ಮತ್ತು ಕಬ್ಬಿನ ತೋಟಕ್ಕೆ ಭೀಮಾ ನದಿ ನೀರು ನುಗ್ಗಿದೆ.  ಬಾಳೆ ತೋಟದಲ್ಲಿ ಎದೆ ಎತ್ತರದವರೆಗೆ ನೀರು ನಿಂತಿರುವುದು ಭೀಮಾ ನದಿಯಲ್ಲಿ ನೀರು ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದೇವಣಗಾಂವದ ಯುವಕ ಗುರು ಹಿರೇಮಠ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಇತ್ತ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದ ಬಳಿಯೂ ವಿಜಯಪುರ- ಕಲಬುರಗಿ ಜಿಲ್ಲೆಯನ್ನು ಸಂಪರ್ಕಿಸುವ ದೇವಣಗಾಂವ-ಅಫಝಲಪೂರ ಸೇತುವೆ ಮೇಲ್ಮಟ್ಟಕ್ಕಿಂತಲೂ ಒಂದೆರಡು ಅಡಿ ಕೆಳಗೆ ಭೀಮಾ ನದಿ ನೀರು ಹರಿಯುತ್ತಿದೆ. ಸೇತುವೆಯ 8 ಮೀ. ಎತ್ತರಕ್ಕೆ ನೀರು ಹರಿಯುತ್ತಿದೆ.

ಸೊನ್ನ ಬ್ಯಾರೇಜಿನ 15 ಗೇಟ್ ಗಳು ಮತ್ತು 3 ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ. ಇಂದು ಸಂಜೆಯ ವೇಳೆಗೆ ಭೀಮಾ ನದಿಗೆ 2.50 ಲಕ್ಷ ಕ್ಯೂಸೆಕ್ ತಲಪುವ ನಿರೀಕ್ಷೆಯಿದ್ದು, ಇದರಿಂದ ಮತ್ತಷ್ಟು ಆಸ್ತಿಪಾಸ್ತಿ ಹಾನಿಯಾಗುವ ಆತಂಕ ಉಂಟಾಗಿದೆ.
Published by: Latha CG
First published: October 15, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories