HOME » NEWS » State » HEAVY RAIN AT SUBRAMANYA AND MAIN BRIDGES ARE MAY COLLAPSE IN DAKSHINA KANNADA LG

ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆ; ಪ್ರಮುಖ ಸೇತುವೆಗಳು ಕುಸಿಯುವ ಹಂತದಲ್ಲಿ

ಭಾರೀ ಮಳೆಯಿಂದಾಗಿ ಕೊಲ್ಲಮೊಗ್ರು-ಕಡಂಬಳ ಸಂಪರ್ಕಿಸುವ ಕಡಂಬಳ ಸೇತುವೆಯು ಕುಸಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ. ಸೇತುವೆಯ ತಡೆಗೋಡೆ ಕುಸಿದಿದೆ. ಇದರಿಂದಾಗಿ ಈ ಭಾಗದ 40ಕ್ಕೂ ಅಧಿಕ ಮನೆಗಳಿಗೆ ವಾಹನ ಸಂಪರ್ಕ ಕಡಿತಗೊಂಡಿದೆ. ಈ ಪರಿಸರದಲ್ಲಿ ಅನೇಕ ಕೃಷಿ ತೋಟಗಳಿಗೆ ನೀರು ನುಗ್ಗಿ ಕೃಷಿ ಹಾನಿ ಉಂಟಾಗಿದೆ.

news18-kannada
Updated:October 10, 2020, 1:00 PM IST
ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆ; ಪ್ರಮುಖ ಸೇತುವೆಗಳು ಕುಸಿಯುವ ಹಂತದಲ್ಲಿ
ಕುಸಿಯುವ ಹಂತದಲ್ಲಿರುವ ಸೇತುವೆ
  • Share this:
ದಕ್ಷಿಣ ಕನ್ನಡ(ಅ.10): ಸುಬ್ರಹ್ಮಣ್ಯ ಪರಿಸರದ ಕೊಲ್ಲಮೊಗ್ರು, ಬಾಳುಗೋಡು, ಕಲ್ಮಕಾರು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳ ಕಾಲ ಸುರಿದ ರಣ ಭೀಕರ ಮಳೆಗೆ ಈ ಭಾಗದಲ್ಲಿ ಭಾರೀ ಹಾನಿ ಸಂಭವಿಸಿದೆ. ಭಾರೀ ಮಳೆಯಿಂದ‌ ಕೊಲ್ಲಮೊಗ್ರುವಿನ ಕಡಂಬಳ ಸೇತುವೆ ಕುಸಿತಗೊಂಡಿದೆ. ಕೊಲ್ಲಮೊಗ್ರು ಮತ್ತು ಪದಕ ಸೇತುವೆ ಹಾನಿಗೊಳಗಾಗಿದೆ. ಇದರಿಂದಾಗಿ ತಮ್ಮ ದೈನಂದಿನ ಸಂಪರ್ಕಕ್ಕಾಗಿ ಈ ಸೇತುವೆಗಳನ್ನೇ ಅವಲಂಬಿಸಿದ್ದ ಕುಗ್ರಾಮದ ಜನರಲ್ಲಿ ಸಂಪರ್ಕ‌ ಕಡಿಯುವ  ‌ಭೀತಿ ಎದುರಾಗಿದೆ. ಅಚಾನಕ್ ಆಗಿ ಸುರಿದ ಬಾರೀ ಮಳೆಗೆ ಒಮ್ಮೆಗೆ ನೀರು ಹರಿದು ಬಂದು ಅನೇಕ ಮನೆಗಳಿಗೆ ನೀರು ನುಗ್ಗಿದೆ. ಶುಕ್ರವಾರ ಸಂಜೆ 5 ಗಂಟೆಯಿಂದಲೇ ಗುಡುಗು, ಮಿಂಚು ಮತ್ತು ಸಿಡಿಲಿನ ಬಾರೀ ಮಳೆ ಸುರಿದಿದೆ. ಕೊಲ್ಲಮೊಗ್ರುವಿನಲ್ಲಿ ಗುರುವಾರ ದಾಖಲೆಯ 123 ಮಿ.ಮಿ ಮಳೆಯಾಗಿದೆ.ಸುಮಾರು 4 ಗಂಟೆಗಳ ಕಾಲ ಈ ಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ.ಉಳಿದಂತೆ ಕಮಿಲ(115 ಮಿ.ಮಿ), ಬಳ್ಪ(107 ಮಿ.ಮಿ), ಮಲ್ಲಾರ(95 ಮಿ.ಮಿ), ಕಂದ್ರಪ್ಪಾಡಿ(92 ಮಿ.ಮಿ) ಮತ್ತು ಸುಬ್ರಹ್ಮಣ್ಯದಲ್ಲಿ 88(ಮಿ.ಮಿ) ಮಳೆಯಾಗಿದೆ.

ಹಿಂದೆಂದೂ ಬಂದಿರದ ಭಾರೀ  ಪ್ರವಾಹ ಸೇತುವೆ ಮೇಲೆ ಹರಿದು ಬಂದಿದೆ. ಪ್ರವಾಹದ ಹೊಡೆತಕ್ಕೆ ಸಿಲುಕಿ  ಕೊಲ್ಲಮೊಗ್ರು ಪೇಟೆಯ ಅರಳೀಕಟ್ಟೆ ಬಳಿ ನಿರ್ಮಾಣಗೊಂಡಿರುವ ಸೇತುವೆಯೂ  ಜಖಂಗೊಂಡಿದೆ. ಸೇತುವೆಯ ಒಂದು ಭಾಗದಲ್ಲಿ ಭಾರೀ ಭೂ ಕುಸಿತ ಉಂಟಾಗಿದೆ. ಸೇತುವೆಯ ಸಮೀಪದ ರಸ್ತೆಯ ಅಂಚಿನ  ಮಣ್ಣು ಕೊಚ್ಚಿ ಹೋಗಿ ಇಲ್ಲಿದ್ದ  ಭಾರೀ ಗಾತ್ರದ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ. ಪ್ರವಾಹದಿಂದ ಸೇತುವೆಯು ಸಂಪೂರ್ಣ ಹಾನಿಗೊಳಗಾಗಿದ್ದು ಸೇತುವೆ ಕುಸಿದು ಸಂಪರ್ಕ ಕಡಿತಗೊಳ್ಳುವ ಭೀತಿ‌ ಎದುರಿಸಲಾರಂಭಿಸಿದ್ದಾರೆ.

ಲಿಂಗ ಪರಿವರ್ತನೆಗಾಗಿ ಬೆಲೆಬಾಳುವ ಸೀರೆ ಕದ್ದು ಗೂರ್ಖನ ಕೈಗೆ ಸಿಕ್ಕಿಬಿದ್ದ ತೃತೀಯ ಲಿಂಗಿ

ಭಾರೀ ಮಳೆಯಿಂದಾಗಿ ಕೊಲ್ಲಮೊಗ್ರು-ಕಡಂಬಳ ಸಂಪರ್ಕಿಸುವ ಕಡಂಬಳ ಸೇತುವೆಯು ಕುಸಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ. ಸೇತುವೆಯ ತಡೆಗೋಡೆ ಕುಸಿದಿದೆ. ಇದರಿಂದಾಗಿ ಈ ಭಾಗದ 40ಕ್ಕೂ ಅಧಿಕ ಮನೆಗಳಿಗೆ ವಾಹನ ಸಂಪರ್ಕ ಕಡಿತಗೊಂಡಿದೆ. ಈ ಪರಿಸರದಲ್ಲಿ ಅನೇಕ ಕೃಷಿ ತೋಟಗಳಿಗೆ ನೀರು ನುಗ್ಗಿ ಕೃಷಿ ಹಾನಿ ಉಂಟಾಗಿದೆ.

ಸೇತುವೆ ಮುಳುಗಡೆ ಪರ್ವ; ರಸ್ತೆಗೆ ಹಾನಿ

ಭಾರೀ ಮಳೆಗೆ ಬಾಳುಗೋಡಿನ ಪದಕ ಸೇತುವೆಯು ಮುಳುಗಡೆಗೊಂಡಿತ್ತು. ಭಾರೀ ಪ್ರವಾಹ ಬಂದ ಕಾರಣ ಸೇತುವೆಯಲ್ಲಿ ಬಿರುಕು ಉಂಟಾಗಿದೆ. ಈ ಭಾಗದಲ್ಲಿ  ಕೃಷಿ ತೋಟಗಳೇ ಹೆಚ್ಚಿದ್ದು, ಪರಿಸರದಲ್ಲಿ ಭಾರೀ ಪ್ರವಾಹಕ್ಕೆ ಸಿಲುಕಿ ಸುಮಾರು 2000ಕ್ಕೂ ಅಧಿಕ ಅಡಿಕೆ ಮರಗಳು ಧರಾಶಾಹಿಯಾಗಿ ಕೃಷಿಕರಿಗೆ ಭಾರೀ ನಷ್ಟ ಉಂಟಾಗಿದೆ.

ಗುಂಡಿಹಿತ್ಲು ಹೊಳೆಯಲ್ಲಿ ಪ್ರವಾಹದಿಂದಾಗಿ ನೂತನವಾಗಿ ಕಾಯಕಲ್ಪಗೊಂಡ  ಹರಿಹರ-ಗುಂಡಿಹಿತ್ಲು ರಸ್ತೆಯು ಸಂಪೂರ್ಣ ಹಾನಿಗೊಳಗಾಗಿದೆ. ರಸ್ತೆ ತುಂಬೆಲ್ಲಾ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದೆ. ಅಲ್ಲದೆ ಗ್ರಾಮೀಣ ಕಚ್ಚಾರಸ್ತೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ.
Youtube Video

ಕರಾವಳಿಯಲ್ಲಿ ಅಕ್ಟೋಬರ್ 11 ರಿಂದ ಮತ್ತೆ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ನದಿ ಹಾಗೂ ಸಮುದ್ರ ಪಾತ್ರದ ಜನ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.
Published by: Latha CG
First published: October 10, 2020, 1:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories