ತುಂಗಭದ್ರಾ ನದಿಯಲ್ಲಿ ಪ್ರವಾಹ ಭೀತಿ; ಜಲಾಶಯದಿಂದ 1 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ

ಸಿಂಧನೂರು, ಮಸ್ಕಿ ಭಾಗ ಹೊರತು ಪಡಿಸಿ ಜಿಲ್ಲೆ ಉಳಿದ ತಾಲೂಕಿನಲ್ಲಿ ವಾಡಿಕೆಗಿಂದ ಶೇ.50 ಕ್ಕಿಂತ ಹೆಚ್ಚು ಪ್ರಮಾಣದ ಮಳೆಯಾಗಿದ್ದರಿಂದ ತೇವಾಂಶ ಅಧಿಕಗೊಂಡಿದೆ. ಹೊಲಗಳಲ್ಲಿ ನೀರು ನಿಂತು ಬೆಳೆ ನಾಶವಾಗಿದೆ

ತುಂಗಭದ್ರಾ ನದಿ

ತುಂಗಭದ್ರಾ ನದಿ

 • Share this:
  ರಾಯಚೂರು(ಸೆ.22): ಮಲೆನಾಡಿನಲ್ಲಿ ಅಧಿಕ ಮಳೆಯಾಗಿದ್ದರಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಭೀತಿ ಆವರಿಸಿದೆ. ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್​​ ಗೂ ಅಧಿಕ ನೀರು ಬಿಡಲಾಗಿದೆ. ಹೀಗಾಗಿ  ಅಲ್ಲಲ್ಲಿ ನದಿ ಪಕ್ಕದ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮಧ್ಯೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳು ಜಪ ಮಾಡಿದ ಸ್ಥಳವಾದ ಎಲೆಬಿಚ್ಚಾಲಿಯಲ್ಲಿರುವ ಜಪದಕಟ್ಟೆಯ ಸುತ್ತಲೂ ನದಿ ನೀರು ಆವರಿಸಿದೆ. ಜಪದ ಕಟ್ಟೆಯ ಆವರಣದವರೆಗೂ ನೀರು ಬಂದಿದೆ. ಇನ್ನಷ್ಟು ನೀರು ಬಿಟ್ಟರೆ ಜಪದಕಟ್ಟೆ ಮುಳುಗುವ ಸಾಧ್ಯತೆ ಇದೆ. ಇದರಿಂದ ದರ್ಶನಕ್ಕೆ ಬರುವ ಭಕ್ತರಿಗೆ ನಿರಾಸೆಯಾಗಲಿದೆ. ರಾಯಚೂರಿನಲ್ಲಿ ಕಳೆದ 40 ವರ್ಷಗಳಲ್ಲಿ ಅತ್ಯಧಿಕ ಮಳೆ ಈ ವರ್ಷ ಬಂದಿದೆ. ಮಹಾಮಳೆಗೆ ರೈತರು ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆಹಾನಿಯಿಂದಾಗಿ ಅನ್ನದಾತ ಸಂಪೂರ್ಣ ಸಂಕಷ್ಟದಲ್ಲಿದ್ದಾನೆ.

  ರಾಯಚೂರು ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಈಗ ಕೊಂಚ ಕಡಿಮೆಯಾಗಿದೆ. ಆದರೆ ಈ ಮೊದಲು ಆದ ಮಳೆಗೆ ಬೆಳೆಯುತ್ತಿದ್ದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಅದರಲ್ಲಿಯೂ ಹತ್ತಿ ಹಾಗೂ ಭತ್ತದ ಬೆಳೆ ನಾಶವಾಗಿದೆ. ಅಧಿಕ ಮಳೆಯಿಂದಾಗಿ ಹತ್ತಿಯ ಹೊಲದಲ್ಲಿ ನೀರು ನಿಂತು ಕಾಯಿ ಕಟ್ಟುತ್ತಿದ್ದ ಹತ್ತಿ ಗಿಡ ಈಗ ಕೊಳೆತು ಹೋಗಿದೆ, ಹಳ್ಳ ಹಾಗೂ ನಾಲಾಗಳು ರಭಸವಾಗಿ ಹರಿದಿದ್ದರಿಂದ ಭತ್ತದ ಬೆಳೆಯು ಕೊಚ್ಚಿಕೊಂಡು ಹೋಗಿವೆ. ಜಿಲ್ಲೆಯಲ್ಲಿ ಒಟ್ಟು 84 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಹತ್ತಿ, 1.36 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತವನ್ನು ಬಿತ್ತನೆ ಮಾಡಲಾಗಿದೆ.

  ಕೆರೆಗಳಿಗೆ ವರದಾನವಾದ ಲಾಕ್​​ಡೌನ್ ಸಮಯ; ಉದ್ಯೋಗ ಖಾತ್ರಿಯಿಂದ ಹಸಿರುಮಯವಾದ ಬರದ ಗ್ರಾಮಗಳು

  ಸಿಂಧನೂರು, ಮಸ್ಕಿ ಭಾಗ ಹೊರತು ಪಡಿಸಿ ಜಿಲ್ಲೆ ಉಳಿದ ತಾಲೂಕಿನಲ್ಲಿ ವಾಡಿಕೆಗಿಂದ ಶೇ.50 ಕ್ಕಿಂತ ಹೆಚ್ಚು ಪ್ರಮಾಣದ ಮಳೆಯಾಗಿದ್ದರಿಂದ ತೇವಾಂಶ ಅಧಿಕಗೊಂಡಿದೆ. ಹೊಲಗಳಲ್ಲಿ ನೀರು ನಿಂತು ಬೆಳೆ ನಾಶವಾಗಿದೆ. ರಾಯಚೂರು ತಾಲೂಕಿನ‌ ಯರಗೇರಾ, ಗಾಣಾದಾಳ, ಗುಂಜಳ್ಳಿ, ಸುಹಮಕುಂಟಾ, ಜೆಗರಕಲ್ ಮಾನವುಮಿ ತಾಲೂಕಿನ ಆರೋಲಿ, ರಾಜೋಳ್ಳಿ ಬಂಡಾ , ದೇವದುರ್ಗಾ ತಾಲೂಕಿನಲ್ಲಿ ಮಳೆಯಿಂದ ಅಧಿಕ ನಷ್ಟ ಸಂಭವಿಸಿದೆ.

  ಬೆಳೆಗಾಗಿ ಸಾಕಷ್ಟು ಖರ್ಚು ಮಾಡಿರುವ ರೈತನಿಗೆ ಫಸಲು ಬರುವ ವೇಳೆಗೆ ಮಳೆ ಬಂದು ಹಾನಿ ಸಂಭವಿಸಿದೆ. ಈಗ ಮಳೆ ಬಿಡುವು ನೀಡುವ ಲಕ್ಷಣವಿದ್ದು ಜಿಲ್ಲಾಡಳಿತ ಜಂಟಿ ಸಮಿಕ್ಷೆ ನಡೆಸಿ ಬೇಗ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
  Published by:Latha CG
  First published: