Anekal: ಅವೈಜ್ಞಾನಿಕ ರೈಲ್ವೆ ಅಂಡರ್ ಪಾಸ್ ಜಲಾವೃತ; ಸುತ್ತಮುತ್ತಲಿನ ಗ್ರಾಮಸ್ಥರ ಪರದಾಟ

ಸುರಂಗ ಮಾರ್ಗದಲ್ಲಿ ನಿಲ್ಲುವ ನೀರಿನ ಮಟ್ಟದ ಮೇಲ್ಭಾಗದಲ್ಲಿ ಚರಂಡಿ ನಿರ್ಮಿಸಿದ್ದಾರೆ. ಜೊತೆಗೆ ಒಳ ಚರಂಡಿ ಕಾರಣಾಂತರಗಳಿಂದ ಬಂದ್ ಆದರೆ ತೆರವುಗೊಳಿಸಲು ಯಾವುದೇ ಅವಕಾಶ ಇಲ್ಲದಂತೆ ಒಳ ಚರಂಡಿ ನಿರ್ಮಿಸಿರುವುದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಿಲ್ಲ.

ರೈಲ್ವೇ ಅಂಡರ್​ಪಾಸ್ ಜಲಾವೃತ

ರೈಲ್ವೇ ಅಂಡರ್​ಪಾಸ್ ಜಲಾವೃತ

  • Share this:
ಆನೇಕಲ್:  ಮಳೆ (Rains) ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬ ಮಾತಿದೆ. ಅದೇ ರೀತಿ ಮಳೆ ನಿಂತರೂ ಅದರ ನೀರಿನ ಎಫೆಕ್ಟ್ ಮಾತ್ರ ನಿಂತಿಲ್ಲ. ಹೌದು ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ ಆನೇಕಲ್ (Anekal Rains) ಬಳಿಯ ರೈಲ್ವೆ ಅಂಡರ್ ಪಾಸ್ (Railway Underpass) ಜಲಾವೃತವಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಸುರಿಯದಿದ್ದರೂ ಅಲ್ಲಿನ ಅಂಡರ್ ಪಾಸ್ ಮಾತ್ರ ಮಳೆ ನೀರಿನಿಂದ ತುಂಬಿದೆ. ಸುತ್ತಮುತ್ತಲಿನ ಗ್ರಾಮಸ್ಥರು ರೈಲ್ವೆ ಅಂಡರ್ ಪಾಸ್​ನಲ್ಲಿ ಹರಸಾಹಸಪಟ್ಟು ಸಂಚರಿಸುವಂತಾಗಿದ್ದು, ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಸಾಮಾನ್ಯವಾಗಿ ಮಳೆ ಬಂದ್ರೆ ಎಲ್ಲರೂ ಖುಷಿಪಡ್ತಾರೆ. ಅದ್ರೆ ಕಳೆದ ಹಲವು ದಿನಗಳಿಂದ ಎಡೆಬಿಡದೇ ಸುರಿದ ಮಳೆಗೆ ಬೆಂಗಳೂರು (Bengaluru) ಹೊರವಲಯ ಆನೇಕಲ್ ತಾಲ್ಲೂಕಿನ ಅರವಂಟಿಕೆಪುರ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಪಡುವಂತಾಗಿದೆ.

ಆನೇಕಲ್ ಪಟ್ಟಣ ಮತ್ತು ಬೆಂಗಳೂರು ಸೇರಿದಂತೆ ಬೇರೆ ಕಡೆ ಸಂಚರಿಸಲು ಅರವಂಟಿಕೆಪುರ ಸೇರಿದಂತೆ ಸುತ್ತಮುತ್ತಲಿ ಹತ್ತೂರು ಹಳ್ಳಿ ಜನ ಅರವಂಟಿಕೆಪುರ ರೈಲ್ವೆ ಅಂಡರ್ ಪಾಸ್ ಮೂಲಕ ಸಾಗಬೇಕಿದೆ. ಆದ್ರೆ ಸಣ್ಣ ಮಳೆ ಬಂದರೂ ಸಾಕು ರೈಲ್ವೆ ಅಂಡರ್ ಪಾಸ್ ಜಲಾವೃತವಾಗುತ್ತದೆ.

ರಸ್ತೆ ಮೇಲೆ  5 ರಿಂದ 6 ಅಡಿಯಷ್ಟು ನೀರು ಸಂಗ್ರಹಣೆ

5 ರಿಂದ 6 ಅಡಿ ನೀರು ನಿಂತು ರಸ್ತೆ ಕೆರೆಯಂತಾಗುತ್ತದೆ. ಲಾರಿ, ಬಸ್​ನಂತಹ ವಾಹನಗಳು ಹರಸಾಹಸಪಟ್ಟು ಸಂಚರಿಸಿದ್ರೆ. ಕಾರು ಮತ್ತು ಬೈಕ್ ಸವಾರರು ಮಳೆ ನೀರಿನಲ್ಲಿ ಹರಸಾಹಸಪಟ್ಟು ಸಾಗಬೇಕಿದೆ. ಇಲ್ಲದಿದ್ದರೆ ಬದಲಿ ಮಾರ್ಗವಾಗಿ 5 ಕಿ.ಮಿ ಬಳಸಿಕೊಂಡು ಸಾಗಬೇಕಿದೆ. ರೈಲ್ವೆ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ರೈಲ್ವೆ ಅಂಡರ್ ಪಾಸ್​ನಲ್ಲಿ ನಿಲ್ಲುವಂತಾಗಿದೆ ಎಂದು ಸ್ಥಳೀಯ ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲ್ವೇ ಅಂಡರ್​ಪಾಸ್ ಜಲಾವೃತ


ಇದನ್ನೂ ಓದಿ:  Karnataka Weather Report: ವರುಣನ ಒಂದೊಂದು ಹನಿಗೂ ಆತಂಕ, ಭಯದಲ್ಲಿ ಜನರು; 1998ರ ಬಳಿಕ ಬೆಂಗಳೂರಿನಲ್ಲಿ ದಾಖಲೆ ಮಳೆ

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ

ಇನ್ನು ರೈಲು ಅಪಘಾತಗಳನ್ನು ತಡೆಯುವ ಸಲುವಾಗಿ ರೈಲ್ವೆ ಇಲಾಖೆ ಅರವಂಟಿಗೆಪುರ ಸಮೀಪದ ಫ್ರೀ ಸಿಗ್ನಲ್ ರೈಲ್ವೆ ಕ್ರಾಸಿಂಗ್ ಬಳಿ ಸುರಂಗ ಮಾರ್ಗವನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಿದೆ. ಆದ್ರೆ ಸುತ್ತಮುತ್ತಲಿನ ಪ್ರದೇಶದಿಂದ ಹರಿದು ಬರುವ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ.

ಸುರಂಗ ಮಾರ್ಗದಲ್ಲಿ ನಿಲ್ಲುವ ನೀರಿನ ಮಟ್ಟದ ಮೇಲ್ಭಾಗದಲ್ಲಿ ಚರಂಡಿ ನಿರ್ಮಿಸಿದ್ದಾರೆ. ಜೊತೆಗೆ ಒಳ ಚರಂಡಿ ಕಾರಣಾಂತರಗಳಿಂದ ಬಂದ್ ಆದರೆ ತೆರವುಗೊಳಿಸಲು ಯಾವುದೇ ಅವಕಾಶ ಇಲ್ಲದಂತೆ ಒಳ ಚರಂಡಿ ನಿರ್ಮಿಸಿರುವುದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಿಲ್ಲ.

Heavy rain anekal railway underpass flooded cank mrq
ರೈಲ್ವೇ ಅಂಡರ್​ಪಾಸ್ ಜಲಾವೃತ


ಪಂಪ್ ಮೂಲಕ ನೀರು ಹೊರಕ್ಕೆ

ಮಳೆ ಬಂದ್ರೆ ವಾಹನ ಸವಾರರು ಪರದಾಟ ನಡೆಸಬೇಕಾಗಿದೆ. ಅನ್ಯಮಾರ್ಗವಿಲ್ಲದೇ ಪಂಪ್ ಮೂಲಕ ಅಂಡರ್ ಪಾಸ್​​ನಲ್ಲಿ ತುಂಬಿದ್ದ ನೀರನ್ನು ಹೊರ ಹಾಕಬೇಕಿದೆ ಎಂದು ರೈಲ್ವೆ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿ ವೆಂಕಟೇಶ್ ಹಿಡಿಶಾಪ ಹಾಕಿದ್ದಾರೆ.

ಬಿಬಿಎಂಪಿ ಲೆಕ್ಕಾಚಾರ ಬುಡಮೇಲು, ಆಗಸ್ಟ್ ತಿಂಗಳಲ್ಲಿ ವರುಣಾರ್ಭಟ

24 ವರ್ಷಗಳ ಬಳಿಕ ರಾಜಧಾನಿ ಕಂಡು ಕೇಳರಿಯದ ಮಳೆಗೆ ತತ್ತರಗೊಂಡಿದೆ. ಆಗಸ್ಟ್‌ಗೆ ಬಿದ್ದ ಮಳೆಗೆ ಬೆಂಗಳೂರಿನ ಹೊಸ ಹೊಸ ಏರಿಯಾಗಳಲ್ಲೂ ಪ್ರವಾಹ ಉಂಟಾಗಿದೆ. ಪಾಲಿಕೆ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶ  ಎಂದು 209 ಏರಿಯಾಗಳನ್ನು ಗುರುತಿಸಿತ್ತು.  ಆದರೆ ಈ ಬಾರಿ ಹೊಸ ಏರಿಯಾಗಳಲ್ಲೂ ಮಳೆಯ ಅವಾಂತರ ಸೃಷ್ಟಿಯಾಗಿದೆ.

Heavy rain anekal railway underpass flooded cank mrq
ರೈಲ್ವೇ ಅಂಡರ್​ಪಾಸ್ ಜಲಾವೃತ


ಇದನ್ನೂ ಓದಿ: Bengaluru Rains: ಮಳೆಯಿಂದ Rainbow Layout ಜಲಾವೃತ; ಆಸ್ಪತ್ರೆಗೆ ತೆರಳಲಾರದೇ ವೃದ್ಧ ಸಾವು; ರಾಜಧಾನಿಯಲ್ಲಿ ಇದೆಂತಾ ಸ್ಥಿತಿ?

ಐಟಿ ಬಿಟಿ ವಲಯಗಳು ಜಲಾವೃತ

ಬೆಳ್ಳಂದೂರು, ವರ್ತೂರು, ನಲ್ಲೂರಹಳ್ಳಿ ಕೆರೆ.. ಕೆರೆ ಉಕ್ಕಿ ಹರಿದಿರುವುದೇ ಪ್ರವಾಹಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇದರಿಂದ ಮಾರತಹಳ್ಳಿ, ಸರ್ಜಾಪುರ, ಔಟರ್ ರಿಂಗ್ ರಸ್ತೆ, ಬೆಳ್ಳಂದೂರು ಭಾಗದಲ್ಲಿ ಪ್ರವಾಹ ಉಂಟಾಗಿದೆ. ಆರ್ ಆರ್ ನಗರ, ಹೊರಮಾವು, ದಾಸರಹಳ್ಳಿ ಭಾಗದಲ್ಲಿ ಪ್ರತಿ ಭಾರಿ ಮಳೆ ಅವಾಂತರ ಉಂಟಾಗುತ್ತಿತ್ತು. ಈ ಬಾರಿ ವರುಣ ತನ್ನ ದಿಕ್ಕು ಬದಲಿಸಿದ ಕಾರಣ ಐಟಿ ಬಿಟಿ ವಲಯಗಳು ಜಲಾವೃತಗೊಳ್ಳುತ್ತಿವೆ.
Published by:Mahmadrafik K
First published: