ಧಾರವಾಡ ಜಿಲ್ಲೆಯಲ್ಲಿ ಕೇವಲ 5 ದಿನಗಳಲ್ಲಿ ‌55 ಮಿ.ಮೀ. ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಹಳ್ಳಗಳು

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ  ನಿರಂತರವಾಗಿ ಸುರಿದ ಮಳೆಯಿಂದಾಗಿ 37 ಮನೆಗಳು ಹಾನಿಯಾಗಿವೆ. ಜಿಲ್ಲೆಯಲ್ಲಿ ಪ್ರವಾಹ ಎದುರಾದರೆ ಜನರ ರಕ್ಷಣೆಗೆ ಪ್ರವಾಹಕ್ಕೆ ಸಿಲುಕಿದವರ ರಕ್ಷಣೆಗೆ ಒಂದು ಎನ್.ಆರ್.ಎಫ್ ತಂಡ ಬೀಡುಬಿಟ್ಟಿದೆ. ಈ ತಂಡದಲ್ಲಿ 25 ಜನ ಸಿಬ್ಬಂದಿಗಳು ಇದ್ದಾರೆ.

news18-kannada
Updated:August 6, 2020, 10:24 PM IST
ಧಾರವಾಡ ಜಿಲ್ಲೆಯಲ್ಲಿ ಕೇವಲ 5 ದಿನಗಳಲ್ಲಿ ‌55 ಮಿ.ಮೀ. ಮಳೆ; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಹಳ್ಳಗಳು
ಮಳೆಯ ರಭಸಕ್ಕೆ ಬೆಳೆ ನಾಶವಾಗಿರುವ ದೃಶ್ಯ
  • Share this:
ಧಾರವಾಡ(ಆ.06): ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರೊ‌ ಮಳೆ ಹಲವಾರು ಅವಾಂತರ ಸೃಷ್ಟಿ ಮಾಡಿದೆ.

ಧಾರವಾಡ ಜಿಲ್ಲೆಯಲ್ಲಿ ಜೂನ್ 1 ರಿಂದ ಆಗಸ್ಟ್ 5ರವರೆಗೆ ವಾಡಿಕೆ ಮಳೆ 300 ಮಿ.ಮೀ ಸುರಿಯಬೇಕಿತ್ತು. ಆದರೆ 326 ಮಿ.ಮೀ ಮಳೆ ಸುರಿದಿದೆ. ಅಲ್ಲದೇ ಆಗಸ್ಟ್ 1 ರಿಂದ 5ರವರೆಗೆ 25 ಮಿ.ಮೀ ವಾಡಿಕೆ‌ ಮಳೆ ಸುರಿಯಬೇಕಿತ್ತು.  ಆದರೆ 59 ಮಿ.ಮೀ ಮಳೆ ಸುರಿದ ಪರಿಣಾಮ ಜಿಲ್ಲೆಯಲ್ಲಿ ಪ್ರವಾಹದ ಮುನ್ಸೂಚನೆ ಸಿಕ್ಕಿದೆ.

ಈಗಾಗಲೇ ಧಾರವಾಡದ ತಾಲೂಕಿನ ಹಾರೋಬೆಳವಡಿ ಗ್ರಾಮದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ಕಳೆದ ವರ್ಷದ ಪ್ರವಾಹಕ್ಕೆ ಧಾರವಾಡ-ಸವದತ್ತಿ ಪ್ರಮುಖ ಸಂಪರ್ಕ ಸೇತುವೆಯ ಅಕ್ಕಪಕ್ಕದ ರಸ್ತೆ ಕುಸಿದಿತ್ತು. ಇದರ ಪರಿಣಾಮವಾಗಿ ನಾಲ್ಕು ತಿಂಗಳು ಸಂಪರ್ಕ‌ ಕಡಿತವಾಗಿತ್ತು. ನಂತರ ತಾತ್ಕಾಲಿಕ ಸೇತುವೆ ನಿರ್ಮಾಣ ‌ಮಾಡಲಾಗಿದೆ.

ನಾಳೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಾವೇಶ: ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಆದರೆ ವರುಣನ ಆರ್ಭಟದಿಂದ ಈ ತಾತ್ಕಾಲಿಕ ಸೇತುವೆ ಸಹ ಮುಳುಗಡೆಯಾಗಿದೆ. ಬೆಣ್ಣೆ ಹಳ್ಳಕ್ಕೆ ಬಂದ ಪ್ರವಾಹಕ್ಕೆ ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು ನೂರಾರು ಎಕರೆಯಲ್ಲಿ ಬೆಳೆದಿದ್ದ ಹತ್ತಿ, ಹೆಸರು, ಉದ್ದು ಬೆಳೆ ನಾಶ ಮಾಡಿದೆ. ಬೆಳೆ ಹಾನಿಯಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಜಿಲ್ಲೆಯ ಬೆಣ್ಣೆಹಳ್ಳ, ತುಪ್ಪರಿಹಳ್ಳ, ದೊಡ್ಡಹಳ್ಳ, ಹುಲಿಕೇರಿ, ಮುಗದಕೆರೆ, ಉಣಕಲ್ಲ ಕೆರೆ, ಕೆಲಗೇರಿ ಪ್ರಮುಖ ಕೆರೆಗಳಾಗಿದ್ದು ಅಪಾಯಮಟ್ಟ ಮೀರಿ‌ನೀರು ಹರಿಯುತ್ತಿವೆ. ಹಳ್ಳ ಹಾಗೂ ಕೆರೆಯ ಹತ್ತಿರವಿರುವ ಸುಮಾರು 83 ಗ್ರಾಮಗಳು ಅಪಾಯದ ಅಂಚಿನಲ್ಲಿವೆ. ಹೀಗೆ ಮಳೆ ಮುಂದುವರೆದರೆ ಈ ಗ್ರಾಮಗಳಲ್ಲಿ ಪ್ರವಾಹ ಎದುರಾಗಲಿದೆ.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ  ನಿರಂತರವಾಗಿ ಸುರಿದ ಮಳೆಯಿಂದಾಗಿ 37 ಮನೆಗಳು ಹಾನಿಯಾಗಿವೆ. ಜಿಲ್ಲೆಯಲ್ಲಿ ಪ್ರವಾಹ ಎದುರಾದರೆ ಜನರ ರಕ್ಷಣೆಗೆ ಪ್ರವಾಹಕ್ಕೆ ಸಿಲುಕಿದವರ ರಕ್ಷಣೆಗೆ ಒಂದು ಎನ್.ಆರ್.ಎಫ್ ತಂಡ ಬೀಡುಬಿಟ್ಟಿದೆ. ಈ ತಂಡದಲ್ಲಿ 25 ಜನ ಸಿಬ್ಬಂದಿಗಳು ಇದ್ದಾರೆ.

ಮಳೆಯಿಂದ ಪ್ರವಾಹಕ್ಕೆ ಸಿಲುಕಿರುವ ಗ್ರಾಮಗಳಲ್ಲಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಗ್ರಾಮಸ್ಥರೊಂದಿಗೆ ಸಭೆ ನಡೆಸುವಂತೆ ಸೂಚನೆ ಮಾಡಲಾಗಿದೆ. ಪ್ರತಿ ತಾಲೂಕಿಗೆ ಜಿಲ್ಲಾಮಟ್ಟದ ನೋಡೆಲ್ ಅಧಿಕಾರಿ ನೇಮಕ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಪರಿಹಾರ ಕೇಂದ್ರ ಆರಂಭಿಸಲು ಕಟ್ಟಡಗಳನ್ನು ಗುರುತಿಸಲಾಗುತ್ತುದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದ್ದಾರೆ.
Published by: Latha CG
First published: August 6, 2020, 10:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading