ಕೊರೋನಾತಂಕದ ನಡುವೆ ರಾಜಧಾನಿಯ ಮಾರುಕಟ್ಟೆಗಳಲ್ಲಿ ಜನಜಾತ್ರೆ; ದೇವಸ್ಥಾನಗಳಲ್ಲಿಯೂ ಭಕ್ತರ ದಂಡು!

ಹಬ್ಬದ ಹಿನ್ನೆಲೆ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಗುಂಪು ಕಾಣುತ್ತಿತ್ತು. ಮಹಾಮಂಗಳಾರತಿ ಹಿನ್ನೆಲೆಯಲ್ಲಿ ಅಂತರವಿಲ್ಲದೆ ಭಕ್ತಗಣ ಗರ್ಭಗುಡಿ ಆವರಣದಲ್ಲಿ ಕೊರೋನಾ ನಿಯಮ ಪಾಲನೆ‌ ಕಷ್ಟವಾಗಿತ್ತು. ದೇವಸ್ಥಾನದ ಸಿಬ್ಬಂದಿ ಮನವಿಗೆ ಭಕ್ತರು ಡೋಂಟ್ ಕೇರ್ ಎನ್ನುತ್ತಿದ್ದರು‌.

ಕೆ.ಆರ್. ಮಾರುಕಟ್ಟೆ

ಕೆ.ಆರ್. ಮಾರುಕಟ್ಟೆ

  • Share this:
ಬೆಂಗಳೂರು; ಕೊರೋನಾ ಮಧ್ಯೆಯೂ ದೀಪಾವಳಿ‌ ಹಬ್ಬಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಜನರು ಭರ್ಜರಿ ಶಾಪಿಂಗ್ ಮುಂದುವರೆಸಿದ್ದಾರೆ‌. ಮಾರುಕಟ್ಟೆಗಳೆಲ್ಲ ಕೊರೋನಾ ಕೇಂದ್ರಗಳಂತೆ ಭಾಸವಾಗುತ್ತಿದ್ದರೂ ಜನ ಕೇರ್ ಮಾಡ್ತಿಲ್ಲ. ಕೇವಲ ಮಾರ್ಕೆಟ್ ಮಾತ್ರವಲ್ಲ ದೇವಸ್ಥಾನಗಳಲ್ಲಿಯೂ ದೇವರ ದರ್ಶನಕ್ಕೆ ಸಾಮಾಜಿಕ ಅಂತರವೂ ಲೆಕ್ಕಿಸದೇ ನಾ ಮುಂದು ತಾ ಮುಂದೆ ಎಂದು ಓಡಾಡುತ್ತಿದ್ದರು.

ದೀಪಾವಳಿ ಹಬ್ಬದಲ್ಲಿಯೂ ಅದೆಷ್ಟೇ ಹೇಳಿದರೂ ಜನರು ಗುಂಪು ಗೂಡುವುದು ತಪ್ಪುತ್ತಿಲ್ಲ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾದ ಮಾರ್ಕೆಟ್ ಗಳಲ್ಲಿ ಸಾವಿರಾರು ಲೆಕ್ಕದಲ್ಲಿ ಜನರು ಹೂ, ಹಣ್ಣು- ತರಕಾರಿ ಖರೀದಿಗೆ ಮುಗಿಬೀಳುತ್ತಿದ್ದಾರೆ. ಕೆ ಆರ್ ಮಾರ್ಕೆಟ್ ನಲ್ಲಿಯಂತೂ ಇಡೀ ದಿನ ಎಲ್ಲಿ ನೋಡಿದರಲ್ಲಿ ಜನವೋ ಜನ. ಸಾಮಾಜಿಕ ಅಂತರವಿಲ್ಲದೆ ಓಡಾಡುತ್ತಿದ್ದರು‌. ಕಳೆದ ಮೂರು ದಿನಗಳಿಂದ ಇದೇ ಪರಿಸ್ಥಿತಿ ಇದ್ದರೂ ವಿರಳ ಸಂಖ್ಯೆಯಲ್ಲಿರುವ ಬಿಬಿಎಂಪಿ ಮಾರ್ಷಲ್, ಪೊಲೀಸರು ಕೊರೋನಾ ನಿಯಮಗಳನ್ನು ಪಾಲನೆ ಮಾಡುವಂತೆ ಜನರಿಗೆ ಸೂಚನೆ ನೀಡಲು ಕಷ್ಟವಾಯಿತು. ಇನ್ನು ನಿಯಮ ಪಾಲನೆ‌ ಮಾಡದವರಿಗೆ ದಂಡ ಹಾಕುವುದು ದೂರದ ಮಾತಾಗಿತ್ತು.

ಬನಶಂಕರಿಯ ಸಾರಕ್ಕಿ ಮಾರುಕಟ್ಟೆಯಲ್ಲೂ ಪರಿಸ್ಥಿತಿಯಿತ್ತು. ಬೆಳ್ಳಂಬೆಳಿಗ್ಗೆ ಹೂವು, ಹಣ್ಣು ಖರೀದಿರಲು ಮುಂದಾದ ಸಿಲಿಕಾನ್ ಸಿಟಿ ಜ‌ನ, ಕೊರೋನಾ ನಡುವೆಯೂ ಸಾಮಾಜಿಕ‌ ಅಂತರ ಇಲ್ಲದೆ ದುಬಾರಿ ಬೆಲೆಯಾದರೂ ಹೂವು, ಹಣ್ಣು ಖರೀದಿ ಮಾಡುತ್ತಿದ್ದರು. ತರಕಾರಿ ಮಾರುಕಟ್ಟೆಯೂ ಜೊತೆಯಲ್ಲಿಯೇ ಇರುವುದರಿಂದ ಜನಸಂದಣಿ ಹೆಚ್ಚಿತ್ತು. ಕಳೆದೆರಡು ದಿನ ಇನ್ನು ಹಚ್ಚಿನ ಜನದಟ್ಟಣೆಯಿತ್ತು. ಮಾಸ್ಕ್ ಹಾಕದೆ ಮಾರುಕಟ್ಟೆಯಲ್ಲಿ ಜನರು ಓಡಾಡುತ್ತಿರುವ ದೃಶ್ಯ ಕಂಡುಬಂದಿತು‌. ಕೇವಲ ಮಾರುಕಟ್ಟೆಗಳು ಮಾತ್ರವಲ್ಲ ದೇವಾಲಯಗಳಲ್ಲೂ ಸಾಮಾಜಿಕ ಅಂತರ ಮಾಯವಾಗಿತ್ತು.

ಇದನ್ನು ಓದಿ: ದೀಪಾವಳಿ ಸಂಭ್ರಮಕ್ಕೆ ವರುಣನ ಅಡ್ಡಿ; ಇಂದಿನಿಂದ 4 ದಿನ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ

ಹಬ್ಬದ ಹಿನ್ನೆಲೆ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಗುಂಪು ಕಾಣುತ್ತಿತ್ತು. ಮಹಾಮಂಗಳಾರತಿ ಹಿನ್ನೆಲೆಯಲ್ಲಿ ಅಂತರವಿಲ್ಲದೆ ಭಕ್ತಗಣ ಗರ್ಭಗುಡಿ ಆವರಣದಲ್ಲಿ ಕೊರೋನಾ ನಿಯಮ ಪಾಲನೆ‌ ಕಷ್ಟವಾಗಿತ್ತು. ದೇವಸ್ಥಾನದ ಸಿಬ್ಬಂದಿ ಮನವಿಗೆ ಭಕ್ತರು ಡೋಂಟ್ ಕೇರ್ ಎನ್ನುತ್ತಿದ್ದರು‌. ಹಬ್ಬದ ಹಿನ್ನೆಲೆ ದೇವಿಗೆ ವಿಶೇಷ‌ಪೂಜೆ, ಅಭಿಷೇಕ ನೆರವೇರಿಸಲಾಯಿತು. ದೇವಾಲಯದಲ್ಲಿ ಸಾಧ್ಯವಾದಷ್ಟು ಕೋವಿಡ್ ನಿಯಮ ಪಾಲನೆ ಮಾಡಲಾಗುತ್ತಿದೆ ಎಂದು ದೇವಾಲಯ ಅರ್ಚಕ ತಿಳಿಸುತ್ತಾರೆ.

ಇನ್ನು ಬೆಂಗಳೂರಿನ ದಾಸರಹಳ್ಳಿಯ ಮಲ್ಲಸಂದ್ರ ಮಾರ್ಕೆಟ್ ನಲ್ಲಿ ಜನರ ಜಮಾವಣೆಗೊಂಡಿದ್ದರು. ಹಬ್ಬಕ್ಕಾಗಿ ಹೂ, ಹಣ್ಣು, ತರಕಾರಿ ಖರೀದಿಸಲು ಮುಗಿಬೀಳುತ್ತಿದ್ದರು. ಇಷ್ಟು ಜನಸಂದಣಿಯಿದ್ದರೂ ಬೆಂಗಳೂರಿನ ಬಹುತೇಕ ಮಾರ್ಕೆಟ್, ದೇವಸ್ಥಾನಗಳಲ್ಲಿ ಮಾರ್ಷಲ್, ಹೆಚ್ಚಿನ ಪೊಲೀಸ್ ಸಿಬ್ಬಂದಿ ಕಾಣಸಿಗಲಿಲ್ಲ. ಎರಡನೇ ಹಂತ‌ದ ಕೊರೋನಾ ಸಂದರ್ಭದಲ್ಲಿ ಮಾರ್ಕೆಟ್ ಹಾಟ್ ಸ್ಪಾಟ್ ಆಗಿ ಮಾರ್ಪಾಟ್ಟಾಗಿದೆ.
Published by:HR Ramesh
First published: