ಪಾಲಿಶ್ ಮಾಡಿದ ಅಕ್ಕಿಯಿಂದ ಮಕ್ಕಳಲ್ಲಿ ಹೃದ್ರೋಗ ಸಮಸ್ಯೆ; ಜಯದೇವ ಆಸ್ಪತ್ರೆ ವೈದ್ಯರಿಂದ ಸಂಶೋಧನೆ
ಒಟ್ಟು 250 ಮಕ್ಕಳಲ್ಲಿ ಈ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಇದರಲ್ಲಿ 230 ಮಕ್ಕಳಿಗೆ ಹೆಚ್ಚುವರಿ ಥಯಾಮಿನ್ ನೀಡಿದ ಕೂಡಲೇ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಅವರು ಗುಣಮುಖರಾಗಿದ್ದಾರೆ
news18-kannada Updated:September 15, 2020, 7:11 AM IST

ಸಾಂದರ್ಭಿಕ ಚಿತ್ರ
- News18 Kannada
- Last Updated: September 15, 2020, 7:11 AM IST
ಬೆಂಗಳೂರು(ಸೆಪ್ಟೆಂಬರ್ 15): ಸಾಮಾನ್ಯವಾಗಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಾಣಂತಿ ಪಥ್ಯ ಅನುಸರಿಸುತ್ತಾರೆ. ಅಂದ್ರೆ ಮಗುವನ್ನು ಹೆತ್ತ ತಾಯಿಗೆ ಮೊದಲ ಮೂರು ತಿಂಗಳು ಕಟ್ಟುನಿಟ್ಟಾದ ಆಹಾರ ನೀಡಲಾಗುತ್ತದೆ. ಇದರಲ್ಲಿ ಹೆಚ್ಚಾಗಿ ದಿನದ ಮೂರು ಹೊತ್ತು ಕೂಡಾ ಅನ್ನ ಮತ್ತು ಬಗೆ ಬಗೆಯ ಸಾರು ಮಾತ್ರ ನೀಡಲಾಗುತ್ತದೆ. ಇದರಿಂದಾಗಿ ತಾಯಂದಿರಿಗೆ ಪೋಷಕಾಂಶಗಳ ಕೊರತೆ ಕಂಡು ಬಂದು ಅದರಿಂದ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತಿದೆ. ಆದರೆ, ಇದರಲ್ಲಿ ಮೂಲ ತಪ್ಪು ಅನ್ನದ್ದು. ಬಿಳಿ ಬಣ್ಣದ ಪಾಲಿಶ್ ಅಕ್ಕಿಯನ್ನೇ ಹೆಚ್ಚಾಗಿ ಎಲ್ಲರೂ ಬಳಸುತ್ತಾರೆ. ಬಾಣಂತಿಗೂ ಅದೇ ಅಕ್ಕಿಯ ಅನ್ನವನ್ನು ನೀಡಲಾಗುತ್ತದೆ. ಇದರಿಂದಾಗಿ ಆಕೆಗೆ ವಿಟಮಿನ್ ಬಿ 1 (ಥಯಾಮಿನ್) ಕೊರತೆ ಉಂಟಾಗುತ್ತದೆ. ಮೊದಲ ಮೂರು ತಿಂಗಳು ಮಗು ಕೇವಲ ತಾಯಿಯ ಎದೆ ಹಾಲಿನ ಮೇಲೆ ಅವಲಂಬಿಸಿರುತ್ತದೆ.
ವಿಟಮಿನ್ ಬಿ 1 (ಥಯಾಮಿನ್) ಕೊರತೆ ಮಗುವನ್ನೂ ಕಾಡುತ್ತದೆ. ಇದರಿಂದ ಮಕ್ಕಳಲ್ಲಿ ಹೃದಯಾಘಾತ ಮತ್ತು ಶ್ವಾಸಕೋಶದಲ್ಲಿ ರಕ್ತದ ಒತ್ತಡ ಹೆಚ್ಚುವಂತ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬಂದಿವೆ. ಜಯದೇವ ಹೃದ್ರೋಗ ಸಂಸ್ಥೆಯ 7 ವೈದ್ಯರ ತಂಡ ಈ ಬಗ್ಗೆ ಕಳೆದ 6 ವರ್ಷಗಳಲ್ಲಿ ಕೂಲಂಕಷವಾಗಿ ಸಂಶೋಧನೆ ಮಾಡಿದೆ. ಒಟ್ಟು 250 ಮಕ್ಕಳಲ್ಲಿ ಈ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಇದರಲ್ಲಿ 230 ಮಕ್ಕಳಿಗೆ ಹೆಚ್ಚುವರಿ ಥಯಾಮಿನ್ ನೀಡಿದ ಕೂಡಲೇ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಅವರು ಗುಣಮುಖರಾಗಿದ್ದಾರೆ. ಇದರಿಂದ ಥಯಾಮಿನ್ ಮೂಲ ಕಾರಣದಿಂದ ಇಷ್ಟೆಲ್ಲಾ ಸಮಸ್ಯೆ ಎದುರಾಗಿದ್ದು ಕಂಡು ಬಂದಿದೆ. ಆದರೆ, ಈ ಸಮಸ್ಯೆ ಬರದಂತೆ ತಡೆಯುವ ವಿಧಾನ ಕಷ್ಟದ್ದೇನಲ್ಲ ಎಂದು ಸಂಶೋಧನಾ ತಂಡದ ಸದಸ್ಯೆ ಡಾ ಉಷಾ ಹೇಳುತ್ತಾರೆ.
ಇದನ್ನೂ ಓದಿ : ರೈತರಿಂದಲೇ ಬೆಳೆ ಹಾನಿ ಸಮೀಕ್ಷೆ ದೇಶದಲ್ಲಿ ಮೊದಲು : ಕೃಷಿ ಸಚಿವ ಬಿ ಸಿ ಪಾಟೀಲ್
ತಾಯಿ ಕೆಂಪಕ್ಕಿ ಅಥವಾ ಕುಸುಬಲಕ್ಕಿ ಬಳಸಿದರೆ ಥಯಾಮಿನ್ ಸಮಸ್ಯೆ ಬರಲು ಸಾಧ್ಯವೇ ಇಲ್ಲ. ಯಾಕೆಂದರೆ ಅಕ್ಕಿಯ ಹೊರ ಪದರದಲ್ಲಿ ಥಯಾಮಿನ್ ಅಂಶ ದೇಹಕ್ಕೆ ಅವಶ್ಯವಿದ್ದಷ್ಟು ಇರುತ್ತದೆ. ಆದರೆ, ಪಾಲಿಶ್ ಮಾಡಿದ ಅಕ್ಕಿಯಲ್ಲಿ ಆ ಹೊರ ಪದರವನ್ನು ತೆಗೆಯಲಾಗಿರುತ್ತದೆ. ಹೀಗಾಗಿ ಈ ಸಮಸ್ಯೆ ಎದುರಾಗುತ್ತದೆ.
ಇದಲ್ಲದೇ ಬಾಣಂತಿಯರಿಗೆ ಆರಂಭದಿಂದಲೇ ಉತ್ತಮವಾಗಿ ಬೇಳೆ ಕಾಳು ತರಕಾರಿಗಳನ್ನು ನೀಡಬೇಕು. ಇದರಿಂದ ಮಗುವಿಗೆ ಪೌಷ್ಟಿಕಾಂಶ ಕೊರತೆ ಆಗದಂತೆ ತಡೆಗಟ್ಟಬಹುದು. ಮಗುವಿನ ಹೃದಯ ಮಾತ್ರವಲ್ಲದೆ ಸಂಪೂರ್ಣ ಆರೋಗ್ಯ ಉತ್ತಮವಾಗಲು ಇದು ಸಾಧ್ಯ ಎನ್ನಲಾಗಿದೆ.
ವಿಟಮಿನ್ ಬಿ 1 (ಥಯಾಮಿನ್) ಕೊರತೆ ಮಗುವನ್ನೂ ಕಾಡುತ್ತದೆ. ಇದರಿಂದ ಮಕ್ಕಳಲ್ಲಿ ಹೃದಯಾಘಾತ ಮತ್ತು ಶ್ವಾಸಕೋಶದಲ್ಲಿ ರಕ್ತದ ಒತ್ತಡ ಹೆಚ್ಚುವಂತ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬಂದಿವೆ. ಜಯದೇವ ಹೃದ್ರೋಗ ಸಂಸ್ಥೆಯ 7 ವೈದ್ಯರ ತಂಡ ಈ ಬಗ್ಗೆ ಕಳೆದ 6 ವರ್ಷಗಳಲ್ಲಿ ಕೂಲಂಕಷವಾಗಿ ಸಂಶೋಧನೆ ಮಾಡಿದೆ.