ಚುನಾವಣಾ ಸಿಬ್ಬಂದಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು; ಹಲವೆಡೆ ಬೇರೆಯವರ ಹೆಸರಿನಲ್ಲಿ ಕಿಡಿಗೇಡಿಗಳಿಂದ ಮತದಾನ

ಎಂಇಎಸ್​ ಕಾಲೇಜಿನಲ್ಲಿ ಮತದಾನಕ್ಕೆ ಬಂದ 83 ವರ್ಷದ ವಿಕಲಾಂಗ ಬಿ.ಕೃಷ್ಣರಾವ್ ಎಂಬುವವರ ಹೆಸರು ಡಿಲೀಟ್​ ಆಗಿತ್ತು. 1960ರಿಂದ ವೋಟ್ ಮಾಡ್ತಿದ್ದೆ.  ಮೊದಲ ಬಾರಿ ಹೀಗಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

news18
Updated:April 18, 2019, 10:14 AM IST
ಚುನಾವಣಾ ಸಿಬ್ಬಂದಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು; ಹಲವೆಡೆ ಬೇರೆಯವರ ಹೆಸರಿನಲ್ಲಿ ಕಿಡಿಗೇಡಿಗಳಿಂದ ಮತದಾನ
ಸಾಂದರ್ಭಿಕ ಚಿತ್ರ
news18
Updated: April 18, 2019, 10:14 AM IST
ಬೆಂಗಳೂರು: ಇಂದು ರಾಜ್ಯದ 14 ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಂಗಳೂರಿನಲ್ಲೂ ಬೆಳಗ್ಗೆಯಿಂದ ಹುರುಪಿನ ಮತದಾನ ನಡೆಯುತ್ತಿದೆ. ಸಾಮಾನ್ಯ ಜನರು, ಸಿನಿಮಾ ತಾರೆಯರು, ರಾಜಕಾರಣಿಗಳು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇದೇ ವೇಳೆ ನಗರದಲ್ಲಿ ಚುನಾವಣಾ ಸೇವೆಯಲ್ಲಿ ನಿರತರಾಗಿದ್ದ ಸಿಬ್ಬಂದಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಇನ್ನು ಕೆಲವು ಕಡೆ ಬೇರೆಯವರ ಹೆಸರಿನಲ್ಲಿ ಕಿಡಿಗೇಡಿಗಳು ಮತದಾನ ನಡೆದ ಘಟನೆ ವರದಿಯಾಗಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಕೊಡಿಗೇಹಳ್ಳಿ ಕೆ.ವಿ.ಶಂಕರ ಎಂಬುವವರ ಹೆಸರಿನಲ್ಲಿ ವೋಟರ್ ಐಡಿ ಇದೆ. ಆದರೆ ಲಿಸ್ಟ್ ನಲ್ಲಿ ಹೆಸರಿರಲಿಲ್ಲ. ಇದೇ ವೇಳ ಮತ ಹಾಕಲು ಅಲ್ಲಿಗೆ ಬಂದ ಕೃಷ್ಣಭೈರೇಗೌಡ ಅವರನ್ನು ಕಂಡು, ನನಗೆ ಮತ ಹಾಕಲು ಅವಕಾಶ ನೀಡ್ತಿಲ್ಲ ಅಂತಾ ಅವರ ಮುಂದೆ ಅಳಲು ತೋಡಿಕೊಂಡರು. ನನ್ನ ಕುಟುಂಬದ ಎಲ್ಲರದ್ದು ಮತದಾನಕ್ಕೆ ಅವಕಾಶವಿದೆ. ಆದ್ರೆ ನನಗಿಲ್ಲ ಏಕೆ? ನಿಮಗೆ ಇಂತಹ ಪರಿಸ್ಥಿತಿ ಎದುರಾಗಿದ್ರೆ ಏನ್ಮಾಡ್ತಿದ್ರಿ ಅಂತಾ ಪ್ರಶ್ನಿಸಿದರು. ಈ ಬಗ್ಗೆ ಚುನಾವಣಾ ಆಯೋಗದವರನ್ನು ಕೇಳಿ ಎಂದು ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದರು.

ಬ್ಯಾಟರಾಯನಪುರ, ಗಾಳಿ ಆಂಜನೇಯ ಸ್ವಾಮಿ ವಾರ್ಡ್​, ಬೂತ್ ನಂಬರ್ 244ರಲ್ಲಿ ಚುನಾವಣಾ ಸಿಬ್ಬಂದಿ ರಾಮಚಂದ್ರಪ್ಪ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: ಲೋಕಸಭಾ ಚುನಾವಣೆ 2019: ರಾಜ್ಯದ 14 ಕ್ಷೇತ್ರಗಳ ಪೈಕಿ ಟಾಪ್ 5 ಜಿದ್ದಾಜಿದ್ದಿ ಕಣದ ಮಾಹಿತಿ ಇಲ್ಲಿದೆ..!

ಇನ್ನು ಎಂಇಎಸ್​ ಕಾಲೇಜಿನಲ್ಲಿ ಮತದಾನಕ್ಕೆ ಬಂದ 83 ವರ್ಷದ ವಿಕಲಾಂಗ ಬಿ.ಕೃಷ್ಣರಾವ್ ಎಂಬುವವರ ಹೆಸರು ಡಿಲೀಟ್​ ಆಗಿತ್ತು. 1960ರಿಂದ ವೋಟ್ ಮಾಡ್ತಿದ್ದೆ.  ಮೊದಲ ಬಾರಿ ಹೀಗಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿಯ ಹೊಂಗಸಂದ್ರ ನಿವಾಸಿ ದೇವರಾಜ್ ಹೆಸರಲ್ಲಿ ಬೇರೆಯವರು ಜ್ಞಾನಭಾರತಿ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ದೇವರಾಜ್ ಫೋಟೋ ಬದಲು ಬೇರೆಯವರ ಪೋಟೋ ಇದೆ. ಹೀಗಾಗಿ ಆ ವ್ಯಕ್ತಿ ವೋಟ್ ಹಾಕಿ ಹೋಗಿದ್ದಾರೆ. ನನಗೆ ವೋಟ್ ಮಾಡಲು ಅವಕಾಶ ಮಾಡಿಕೊಡುವಂತೆ ದೇವರಾಜ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.
Loading...

ಇನ್ನು ರಾಜರಾಜೇಶ್ವರಿ ನಗರದಲ್ಲೂ ವ್ಯಕ್ತಿಯೊಬ್ಬರ ಮತವನ್ನು ಬೇರೊಬ್ಬರು ಚಲಾಯಿಸಿದ್ದ ಘಟನೆ ವರದಿಯಾಗಿದೆ.

First published:April 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626