ಪಾಕ್​​​​​​ ಪರ ಘೋಷಣೆ ಆರೋಪ: ಮಾರ್ಚ್​​ 2ಕ್ಕೆ ಅರುದ್ರಾ ಜಾಮೀನು ಅರ್ಜಿ ವಿಚಾರಣೆ

ಇನ್ನು ಪಾಕ್​​ ಪರ ಘೋಷಣೆ ಕೂಗಿದ್ದಾಳೆ ಎನ್ನಲಾದ ಮತ್ತೋರ್ವ ಯುವತಿ ಅರುದ್ರಾ ವಿರುದ್ಧ ಎಸ್‌ಜೆ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 153ಎ ಮತ್ತು153ಬಿ ಸೆಕ್ಷನ್​​ ಅಡಿಯಲ್ಲಿ ಪೊಲೀಸರು ಎಫ್​​ಐಆರ್​ ದಾಖಲಿಸಿಕೊಂಡಿದ್ದಾರೆ.

ಬಂಧಿತ ಯುವತಿ ಅರಿದ್ರಾ.

ಬಂಧಿತ ಯುವತಿ ಅರಿದ್ರಾ.

  • Share this:
    ಬೆಂಗಳೂರು(ಮಾ.01): ಪಾಕಿಸ್ತಾನ ಪರ ಘೋಷಣೆ ಕೂಗಿದ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುದ್ರಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ 6ನೇ ಎಸಿಎಂಎಂ ಕೋರ್ಟ್ ಮಾರ್ಚ್ 2ಕ್ಕೆ ಮುಂದೂಡಿದೆ. ಶನಿವಾರ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು, ಇದೊಂದು ವಿಶೇಷ ಪ್ರಕರಣ. ಅಮೂಲ್ಯ ಮತ್ತು ಅರುದ್ರಾ ಎರಡು ಪ್ರಕರಣಗಳು ಒಂದಕ್ಕೊಂದು ಸಂಬಂಧವಿದೆ. ಹೀಗಾಗಿ‌ ತನಿಖಾ ವರದಿ ಮೇಲೆ ವಾದ ಮಂಡಿಸಲು ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರುದ್ರಾ ಪರ ವಕೀಲರು, ಸುಪ್ರೀಂಕೋರ್ಟ್​ ಆದೇಶದಂತೆ ಒಂದು ವಾರದಲ್ಲಿ ಜಾಮೀನು ಅರ್ಜಿ ಇತ್ಯರ್ಥವಾಗಬೇಕು. ಹಾಗಾಗಿ ವಾದಕ್ಕೆ ಕಾಲಾವಕಾಶ ನೀಡದಂತೆ ಮಂಡಿಸಿದರು. ಇಬ್ಬರ ವಾದ-ಪ್ರತಿವಾದ ಆಲಿಸಿ ನ್ಯಾಯದೀಶರು, ಪ್ರಕರಣ ಮುಂದೂಡಿದರು.

    ಈ ಹಿಂದೆಯೇ ಪಾಕ್​​ ಪರ ಘೋಷಣೆ ಆರೋಪ ಹೊತ್ತ ಪ್ರಕರಣದ ಅರುದ್ರಾಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು. ನಗರದ 6ನೇ ಎಸಿಎಂಎ ನ್ಯಾಯಾಧೀಶ ಕೃಷ್ಣಮೂರ್ತಿಯವರು ಹೀಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು. ಮಾರ್ಚ್​​​​ 5ರವೆಗೂ ನ್ಯಾಯಾಂಗ ಬಂಧನದಲ್ಲಿರುವ ಅರುದ್ರಾಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು.

    ಫೆ.21ನೇ ತಾರೀಕು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ವಿವಾದ ಸೃಷ್ಟಿಸಿದ್ದ ಅಮೂಲ್ಯ ಲಿಯೋನಾ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಟೌನ್ ಹಾಲ್ ಬಳಿ ಹಿಂದೂಪರ ಸಂಘಟನೆಗಳು ಅಮೂಲ್ಯ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮತ್ತೋರ್ವ ಯುವತಿ ಪಾಕಿಸ್ತಾನ ಜಿಂದಾಬಾದ್​ ಎಂಬ ಘೋಷಣೆ ಕೂಗಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗೆ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎನ್ನಲಾದ ಯುವತಿಯನ್ನು ಅರುದ್ರಾ ಎಂದು ಗುರುತಿಸಲಾಗಿತ್ತು.

    ಇದನ್ನೂ ಓದಿ: ಪಾಕ್​​​​​​ ಪರ ಘೋಷಣೆ ಆರೋಪ: ಅರುದ್ರಾಗೆ 14 ದಿನ ನ್ಯಾಯಾಂಗ ಬಂಧನ

    ಇನ್ನು ಪಾಕ್​​ ಪರ ಘೋಷಣೆ ಕೂಗಿದ್ದಾಳೆ ಎನ್ನಲಾದ ಮತ್ತೋರ್ವ ಯುವತಿ ಅರುದ್ರಾ ವಿರುದ್ಧ ಎಸ್‌ಜೆ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 153ಎ ಮತ್ತು153ಬಿ ಸೆಕ್ಷನ್​​ ಅಡಿಯಲ್ಲಿ ಪೊಲೀಸರು ಎಫ್​​ಐಆರ್​ ದಾಖಲಿಸಿಕೊಂಡಿದ್ದಾರೆ.

    ಅರುದ್ರಾ ಗ್ರಾಫಿಕ್ ಡಿಸೈನರ್. ಮೂಲತ ಮಲ್ಲೇಶ್ವರ ನಿವಾಸಿ. ಆಕೆ ಖಾಸಗಿ ಕಾಲೇಜೊಂದರಲ್ಲಿ ಪದವಿ ಪೂರ್ಣಗೊಳಿಸಿದ್ದಳು. ಸದ್ಯ ಖಾಸಗಿ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಳು. ಅರುದ್ರಾಳ ಮೂಲ ಹೆಸರು ಅನ್ನಪೂರ್ಣ ಎನ್ನಲಾಗಿದೆ. ಅರುದ್ರಾ ತಾಯಿ ರಮಾ, ತಂದೆ ನಾರಾಯಣ್. ಎರಡು ವರ್ಷದ ಹಿಂದೆ ಈಕೆ ಅಪ್ಪ ಅಮ್ಮನಿಂದ ದೂರವಾಗಿದ್ದಳು. ನಂತರ ಮಲ್ಲೇಶ್ವರಂನ ಅಜ್ಜಿ ಮನೆಯಲ್ಲಿ ಇದ್ದಳು. ಬಳಿಕ ಸ್ನೇಹಿತೆಯೊಂದಿಗೆ ವಾಸವಿದ್ದಳು. ಎಡಪಂಥೀಯ ಚಿಂತನೆಗಳತ್ತ ಒಲವು ಹೊಂದಿದ್ದ ಅರುದ್ರಾ, ತನ್ನ ಹೆಸರು ಬದಲಿಸಿಕೊಂಡಿದ್ದಳು.
    First published: