ಕೆ.ಸಿ.ವ್ಯಾಲಿ ನೀರಿನ ಗುಣಮಟ್ಟ ಅಧ್ಯಯನವನ್ನು ಯಾವ ಸಂಸ್ಥೆಗೆ ನೀಡಲಾಗುವುದು ಎಂಬುದರ ಬಗ್ಗೆ ವರದಿ ಕೇಳಿದ ಹೈಕೋರ್ಟ್

ಕೆ.ಸಿ. ವ್ಯಾಲಿಯಲ್ಲಿ ಸಂಸ್ಕರಿಸಿದ ನೀರು ಅಂತರ್ಜಲ ಸೇರುವುದರಿಂದ ಅದು ಕಲುಷಿತವಾಗುತ್ತದೆ. ಆ ನೀರಿನಲ್ಲಿ ಸೀಸ ಮತ್ತು ರಾಸಾಯನಿಕ ಅಂಶಗಳಿರುತ್ತವೆ. ನಮ್ಮಲ್ಲಿ ಬಳಕೆ ಮಾಡುತ್ತಿರುವ ನೀರು ಸಂಸ್ಕರಣೆ ತಂತ್ರಜ್ಞಾನ ಉನ್ನತ ಮಟ್ಟದಲ್ಲ. ಮೊದಲೇ ಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತ ನೀರಿನಲ್ಲಿ ಈಗ ಸೀಸ ಮತ್ತಿತರ ರಾಸಾಯನಿಕ ಸೇರಿ ಅದು ವಿಷಕಾರಿಯಾಗುತ್ತದೆ. ಇದರಿಂದ, ಆ ಭಾಗದ ಸುಮಾರು 50 ಲಕ್ಷ ಜನರು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

HR Ramesh | news18india
Updated:November 11, 2019, 3:55 PM IST
ಕೆ.ಸಿ.ವ್ಯಾಲಿ ನೀರಿನ ಗುಣಮಟ್ಟ ಅಧ್ಯಯನವನ್ನು ಯಾವ ಸಂಸ್ಥೆಗೆ ನೀಡಲಾಗುವುದು ಎಂಬುದರ ಬಗ್ಗೆ ವರದಿ ಕೇಳಿದ ಹೈಕೋರ್ಟ್
ಕೆಸಿ ವ್ಯಾಲಿ ಯೋಜನೆ
  • Share this:
ಬೆಂಗಳೂರು: ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ನೀರನ್ನು ಒದಗಿರುವ
ಕೆ.ಸಿ.ವ್ಯಾಲಿ ಯೋಜನೆಯ ನೀರಿನ ಗುಣಮಟ್ಟದ ವಿಚಾರವಾಗಿ ಇಂದು ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ​ ವಿಚಾರಣೆ ನಡೆಯಿತು.


ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಕೆಸಿ ವ್ಯಾಲಿಗೆ ಸಂಸ್ಕರಿಸಿದ ನೀರು ಹರಿಸುವಿಕೆಯ ಅಧ್ಯಯನಯನ್ನು ಯಾವ ಸಂಸ್ಥೆಗೆ ನೀಡಲಾಗುತ್ತದೆ ಎಂದು ಸರ್ಕಾರದ ವಕೀಲರಿಗೆ ಪ್ರಶ್ನೆ ಮಾಡಿತ್ತು. ಅದಕ್ಕೆ ವಕೀಲರು, ಐಐಎಸ್‌ಸಿ ಅಥವಾ ನೀರಿ ಸಂಸ್ಥೆಗಳಿಗೆ ಅಧ್ಯಯನ ನಡೆಸುವಂತೆ‌ ಮನವಿ‌ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಐಐಎಸ್‌ಸಿ ಈಗಾಗಲೇ 6 ಬಾರಿ ಅಧ್ಯಯನ ನಡೆಸಿ ವರದಿ ಸಹ ನೀಡಿದೆ. ಆದ್ದರಿಂದ ನೀರಿ ಸಂಸ್ಥೆಗೆ ಅಧ್ಯಯನ ನಡೆಸುವಂತೆ ಸೂಚಿಸಬೇಕು ಎಂದು ವಾದ ಮಂಡಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಐಐಎಸ್‌ಸಿ ಸಂಸ್ಥೆ ಅಧ್ಯಯನಕ್ಕೆ ಏಕೆ ನೀಡಬಾರದು ಎಂಬುದಕ್ಕೆ ಸ್ಪಷ್ಟೀಕರಣ ನೀಡುವಂತೆ ಅರ್ಜಿದಾರರಿಗೆ ಸೂಚಿಸಿ, ಅಧ್ಯಯನಕ್ಕೆ ಯಾವ ಸಂಸ್ಥೆಗೆ ನೀಡುವಿರಿ ಎಂದು ಲಿಖಿತ ರೂಪದಲ್ಲಿ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿತು.

ಇದನ್ನು ಓದಿ: ಕೇಂದ್ರ ಆರ್ಥಿಕ ನೀತಿ ವಿರುದ್ಧ ಕಾಂಗ್ರೆಸ್​ನಿಂದ ಟೌನ್ ಹಾಲ್ ಮುಂದೆ ಪ್ರತಿಭಟನೆ

ಪ್ರಕರಣದ ಹಿನ್ನೆಲೆ:ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ 610 ಎಂಎಲ್‌ಡಿ ನೀರನ್ನು ಕೆ.ಸಿ.ವ್ಯಾಲಿ ಪೂರೈಸಲಿದೆ.‌ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಆದರೆ ಕೆ.ಸಿ. ವ್ಯಾಲಿಯಲ್ಲಿ ಸಂಸ್ಕರಿಸಿದ ನೀರು ಅಂತರ್ಜಲ ಸೇರುವುದರಿಂದ ಅದು ಕಲುಷಿತವಾಗುತ್ತದೆ. ಆ ನೀರಿನಲ್ಲಿ ಸೀಸ ಮತ್ತು ರಾಸಾಯನಿಕ ಅಂಶಗಳಿರುತ್ತವೆ. ನಮ್ಮಲ್ಲಿ ಬಳಕೆ ಮಾಡುತ್ತಿರುವ ನೀರು ಸಂಸ್ಕರಣೆ ತಂತ್ರಜ್ಞಾನ ಉನ್ನತ ಮಟ್ಟದಲ್ಲ. ಮೊದಲೇ ಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತ ನೀರಿನಲ್ಲಿ ಈಗ ಸೀಸ ಮತ್ತಿತರ ರಾಸಾಯನಿಕ ಸೇರಿ ಅದು ವಿಷಕಾರಿಯಾಗುತ್ತದೆ. ಇದರಿಂದ, ಆ ಭಾಗದ ಸುಮಾರು 50 ಲಕ್ಷ ಜನರು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

ಇದಕ್ಕೆ ಕೆ.ಸಿ.ವ್ಯಾಲಿ ನೀರಿನ ಶುದ್ಧತೆ ಬಗ್ಗೆ ಮಾಹಿತಿ ನೀಡಲು ಸಮಯ ಬೇಕು ಎಂದು ಸರ್ಕಾರ ಹೇಳಿತ್ತು. ನೀರು ಹರಿಸುವ ಮುನ್ನ ನೀರಿನ ಶುದ್ಧತೆಯನ್ನು ಸಾಬೀತುಪಡಿಸಲು ಕೋರಿ ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿಯ ಆರ್ ಆಂಜನೇಯರೆಡ್ಡಿ ಮತ್ತಿತರರು ಪಿಐಎಲ್ ಸಲ್ಲಿಸಿದ್ದರು. ಈ ಬಗ್ಗೆ ನಡೆಸಿರುವ ಅಧ್ಯಯನ ವರದಿ ಒದಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಯೋಜನೆಯ ಸಮಗ್ರ ಮೌಲ್ಯಮಾಪನ ಮಾಡಲು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ನೇಮಕ‌ ಮಾಡಲು ಇಂಗಿತ ವ್ಯಕ್ತಪಡಿಸಿತ್ತು. ಈ ಕುರಿತು ತಮ್ಮ ನಿಲುವನ್ನು ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.

First published:November 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ