Explosion Sound: ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿ ಭೂಕಂಪನ!? ಬೆಚ್ಚಿಬಿದ್ದು ಮನೆಯಿಂದ ಹೊರಗೆ ಓಡಿದ್ರು ಜನ

ಮಂಡ್ಯದ ನಗರದ ಸುತ್ತಮುತ್ತ ಭಾರೀ ಸ್ಫೋಟದ ಶಬ್ಧ ಕೇಳಿಸಿದೆ. ಭಾರೀ ಸ್ಫೋಟದ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಮಧ್ಯಾಹ್ನ 2.33ರ ಸುಮಾರಿಗೆ ಭಾರೀ ಸ್ಫೋಟದ ಸದ್ದು ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಡ್ಯ (ಫೆ.18): ಸಕ್ಕರೆ ನಾಡು ಮಂಡ್ಯದ (Mandya) ನಗರದ ಸುತ್ತಮುತ್ತ ಭಾರೀ ಸ್ಫೋಟದ ಶಬ್ಧ (Explosion sound) ಕೇಳಿಸಿದೆ. ಭಾರೀ ಸ್ಫೋಟದ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಶುಕ್ರವಾರ ಮಧ್ಯಾಹ್ನ 2.33ರ ಸುಮಾರಿಗೆ ಭಾರೀ ಸ್ಫೋಟದ ಸದ್ದು ಕೇಳಿ ಬಂದಿದ್ದು, ಶಬ್ದ ತೀವ್ರತೆಗೆ ಭೂಮಿ ಕಂಪಿಸಿದ (Earth trembled) ಅನುಭವ ಉಂಟಾಗಿದೆ. ಭಾರೀ ಶಬ್ದದಿಂದ ಬೆಚ್ಚಿಬಿದ್ದು ಜನರು ಮನೆಗಳಿಂದ ಹೊರಗೆ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಭಾರೀ ಸ್ಫೋಟದ ಸದ್ದು ಕೇಳಿ ಬರ್ತಿದ್ದು, ಜನರು ಬೆಚ್ಚಿಬೀಳ್ತಿದ್ದಾರೆ. ಏನಿದು ಸ್ಫೋಟದ ಸದ್ದು ಅನ್ನೋದು ಯಾರಿಗೆ ತಿಳಿಯುತ್ತಿಲ್ಲ. ಇನ್ನು ನಗರದಿಂದ 10-15 ಕಿಲೋ ಮೀಟರ್​ ದೂರದಲ್ಲೇ ಗಣಿಗಾರಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಗಣಿಗಾರಿಕೆಯ ಸ್ಫೋಟಕದ ಶಬ್ಧ ಇರಬಹುದು ಅಂತ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲ ಇದು ಭೂಕಂಪ (Earthquake) ಅಂತಿದ್ದಾರೆ ಸ್ಥಳೀಯರು.

ಪಾಂಡವಪುರದಲ್ಲೂ ಕೇಳಿ ಬಂದಿತ್ತು ಶಬ್ದ

ಇತ್ತೀಚಿಗೆ ಬೆಂಗಳೂರಿನ ಹಲವೆಡೆ ಭಾರೀ ದೊಡ್ಡ ಶಬ್ದ ಕೇಳಿಸಿತ್ತು. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಶಬ್ದ ಕೇಳಿಸುವ ಮೂಲಕ ಜನರು ಆತಂಕಗೊಂಡಿದ್ದಾರೆ.ಮಧ್ಯಾಹ್ನ ವೇಳೆಯಲ್ಲಿ ಭಾರೀ ಶಬ್ದ ಕೇಳಿದ್ದು, ಸುಮಾರು ನಾಲ್ಕು ಸೆಕೆಂಡ್‍ಗಳ ಕಾಲ ಶಬ್ದ ಕೇಳಿ ಬಂದಿದೆ. ಶಬ್ಧದ ಪರಿಣಾಮ ಭೂ ಕಂಪಿಸಿದ ಅನುಭವ ಕೂಡ ಆಗಿದೆ ಎಂದು ಜನರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರೀ ಶಬ್ದದಿಂದ ಜನರಲ್ಲಿ ಆತಂಕ ಉಂಟಾಗಿದೆ.

30 ಹಳ್ಳಿಗಳ ಜನರಿಗೂ ಕೇಳಿಸಿದ ಶಬ್ದ

ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ವ್ಯಾಪಿಯ 30 ಹಳ್ಳಿಗಳ ಜನರಿಗೆ ಈ ಶಬ್ದ ಕೇಳಿಸಿದೆ. ಆದರೆ ಯಾವ ಕಾರಣಕ್ಕೆ ಶಬ್ದ ಬಂದಿದೆ ಎಂದು ತಿಳಿದಿಲ್ಲ. ಹೀಗಾಗಿ ಮಾಹಿತಿ ತಿಳಿದು ಶಬ್ದ ಎಲ್ಲಿಂದ ಬಂದಿದೆ ಎಂದು  ಸಂಬಂಧಪಟ್ಟ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ದೊಡ್ಡ ಶಬ್ದ ಕೇಳಿಸಿತ್ತು. ಭಯಾನಕ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಜನ ಭಯಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದರು. ಬೆಂಗಳೂರಿನ ಒಂದು ಕಡೆ ಮಾತ್ರ ಕೇಳಿಸಿದ್ರೆ ಯಾವುದೇ ಭಯ ಇರಲಿಲ್ಲ. ಆದರೆ ನಗರದ ಹಲವೆಡೆ ಈ ಶಬ್ದ ಕೇಳಿಸಿತ್ತು. ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಚ್‍ಎಎಲ್, ಇಸ್ರೋ ಲೇಔಟ್, ವಸಂತಪುರ, ಬನಶಂಕರಿ, ಸೇರಿದಂತೆ ಹಲವೆಡೆ ಈ ಶಬ್ದ ಕೇಳಿಬಂದಿತ್ತು.

ಇದನ್ನೂ ಓದಿ; Crime: ಸಿನೀಮಿಯ ಶೈಲಿಯಲ್ಲಿ ತಾತನ ಸಾಯಿಸಿದ ಮೊಮ್ಮಗ; ಪ್ರಕರಣ ಭೇದಿಸಿದ ಕಿಕ್ಕೇರಿ ಪೊಲೀಸರಿಗೆ ಪ್ರಶಂಸೆ

ಮದ್ದೂರಲ್ಲೂ ಪದೇ ಪದೇ ಕೇಳಿ ಬರ್ತಿದೆ ಶಬ್ದ

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಪದೇ ಪದೇ ಕೇಳಿ ಬರ್ತಿರೋ ನಿಗೂಢ ಶಬ್ದಕ್ಕೆ ಅಲ್ಲಿನ ಜನ್ರು ಹೈರಾಣಾಗಿದ್ದಾರೆ. ಭಾರೀ ಸ್ಫೋಟದ ಶಬ್ದಕ್ಕೆ ಭೂಮಿ ಕಂಪಿಸಿದ ಅನುಭವವಾಗ್ತಿದ್ದು ಜನ್ರನ್ನ ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಆ ಸ್ಫೋಟದ ಸದ್ದಿಗೆ ಕೆಲಕಾಲ ಭೂಮಿ ಕಂಪಿಸಿದ ಅನುಭವವಾಗ್ತಿದೆ. ಅಲ್ದೆ ವಸ್ತುಗಳು ಕೂಡ ಕೂಡ ಅಲುಗಾಡ್ತಿದ್ದು ಜನರನ್ನು ಆಂತಕಕ್ಕೆ ತಳ್ತಿದೆ. ಇಷ್ಟಾದ್ರು ಕೂಡ ಈ ಸ್ಫೋಟದ ಸದ್ದು ಎಲ್ಲಿಂದ ಬರ್ತಿದೆ ಅನ್ನೋದು ನಿಗೂಢವಾಗಿದ್ದು ಮದ್ದೂರಿನ ಜನ್ರನ್ನ ಮತ್ತಷ್ಟು ಆತಂಕಕ್ಕೆ ತಳ್ಳಿದೆ.

ಇದನ್ನೂ ಓದಿ: Mandya Crime: ಐವರ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್​; ತಂಗಿಯ ಗಂಡನ ಮೋಹಕ್ಕೆ ಬಿದ್ದ ಅಕ್ಕನಿಂದಲೇ ಕೃತ್ಯ

ಸ್ಫೋಟದ ಶಬ್ದಕ್ಕೆ ಗೊತ್ತಾಗಿಲ್ಲ ನಿಖರ ಕಾರಣ

ಇನ್ನು ಈ ರೀತಿಯ ಭಾರೀ ಶಬ್ದ ಈ ಹಿಂದೇಯೂ ಕೂಡ ನಾಲ್ಕೈದು ಭಾರೀ ಕೇಳಿ ಬಂದಿದ್ದು, ಜನ್ರನ್ನು ಪದೇ ಪದೇ ಆತಂಕಕ್ಕೀಡು ಮಾಡ್ತಿದೆ. ಈ ತಾಲೂಕಿನಲ್ಲಿ‌ ಸುತ್ತಲು ಅಕ್ರಮ ಕಲ್ಲು ಕ್ವಾರೆ ನಡೆಯುತ್ತಿದೆ. ಮೈ-ಬೆಂ ಹೆದ್ದಾರಿ ಹಾದು ಹೋಗಿದ್ದು ಜಿಲ್ಲಾಡಳಿತ ಮಾತ್ರ ಹೆದ್ದಾರಿಯಲ್ಲಿ ಭಾರೀ ವಾಹನಗಳ ಟೈರು ಬ್ಲಾಸ್ಟ್ ಆಗಿ ಈ ಈ ರೀತಿ ಭಾರೀ ಶಬ್ಧ ಕೇಳಿ ಬರ್ತಿದೆ ಅಂತಾ ಸಬೂಬು ಹೇಳಿ ಕೈ ತೊಳೆದು ಕೊಳ್ತಿದೆ.

ಆದ್ರೆ ಹೆದ್ದಾರಿಯಲ್ಲಿ ಯಾವುದೇ ವಾಹನದ ಟೈರ್ ಬ್ಲಾಸ್ಟ್ ಆದ ಮಾಹಿತಿ ಇರೋದಿಲ್ಲ.ಆದ್ರೆ ಪದೇ ಪದೇ ಈ ರೀತಿ‌ ಶಬ್ದ ಇಲ್ಲಿನ ಜನ್ರನ್ನು‌ ಆತಂಕಕ್ಕೆ ದೂಡಿದ್ದು ನಿಖಿರ ಕಾರಣ ಕಂಡು ಹಿಡಿಯುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಒಟ್ಟಾರೆ ಮಂಡ್ಯದಲ್ಲಿ ಪದೇ ಪದೇ ಕೇಳಿ ಬರ್ತಿರೋ ಈ ನಿಗೂಢ ಸ್ಫೋಟದ ಶಬ್ದ ಇಲ್ಲಿನ‌ ನಾಗರೀಕರ ಆತಂಕಕ್ಕೆ ಕಾರಣವಾಗಿದ್ದು ಭೂಕಂಪನದ ಅನುಭವಕ್ಕೆ ಹೈರಾಣಾಗಿದ್ದಾರೆ.
Published by:Pavana HS
First published: