ಬೆಂಗಳೂರು; ಆರೋಗ್ಯ ವಿಶನ್ ಗ್ರೂಪ್ ಮೊದಲ ಸಭೆ ನಡೆಸಿದ್ದೇವೆ. 38 ಪರಿಣಿತರು ಈ ಗ್ರೂಪ್ ನಲ್ಲಿದ್ದಾರೆ. ಇಂದು ಮೂರು ತಾಸು ಸಭೆಯಲ್ಲಿ ಚರ್ಚೆ ನಡೆದಿದೆ. ಆರೋಗ್ಯ ಕ್ಷೇತ್ರದ ಸಮಗ್ರ ಬದಲಾವಣೆ ಕುರಿತು ಚರ್ಚೆ ಮಾಡಲಾಗಿದೆ. ಸುಲಭ, ಉತ್ತಮ ಆರೋಗ್ಯ ಸೇವೆ ಒದಗಿಸುವ ಯೋಜನೆ ಇದಾಗಿದ್ದು, ಕೈಗೆಟಕುವ ದರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲೂ ಆರೋಗ್ಯ ಸೇವೆ ನೀಡುವುದು ಇದರ ಗುರಿಯಾಗಿದೆ. ಹಲವರು ಹಲವು ವಿಚಾರ ಪ್ರಸ್ತಾಪಿಸಿದ್ದಾರೆ. ಆರೋಗ್ಯ ಸೇವೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್ ಅವರು ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನ ಮೇಲ್ದರ್ಜೆಗೇರಿಸಲಾಗುವುದು. ಇಂದು ರಕ್ತದೊತ್ತಡ, ಕ್ಯಾನ್ಸರ್ ನಿಂದ ಹೆಚ್ಚು ಸಾವಾಗುತ್ತಿದೆ. ಒತ್ತಡದಿಂದ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದನ್ನು ಬಹುಬೇಗ ಪತ್ತೆ ಹಚ್ಚುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಲೈಫ್ ಸ್ಟೈಲ್ ಬದಲಾವಣೆಯಿಂದಲೂ ರೋಗಗಳು ಬರುತ್ತವೆ. ಅಲೋಪತಿ, ಆಯುಷ್ ನಿಂದ ಇದಕ್ಕೆ ಚಿಕಿತ್ಸೆ ನೀಡುವುದು. ಈ ಎಲ್ಲದರ ಬಗ್ಗೆ ಈ ವಿಶನ್ ಗ್ರೂಪ್ ಸಲಹೆ ನೀಡಲಿದೆ. ಈ ಗ್ರೂಪ್ ಸಬ್ ಕಮಿಟಿ ಮಾಡಿಕೊಳ್ಳಲಿದೆ. 6 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ನಂತರ ಸರ್ಕಾರ ಈ ಯೋಜನೆ ಕಾರ್ಯಗತಕ್ಕೆ ತರಲಿದೆ ಎಂದು ಹೇಳಿದರು.
ಇದನ್ನು ಓದಿ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ಸಂಜೆಯೇ ಆಗಮನ; ತವಕದಲ್ಲಿ ಸಚಿವಾಕಾಂಕ್ಷಿಗಳು
ರಾಜ್ಯದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕೇಂದ್ರ ಶೇ.60, ರಾಜ್ಯ ಶೇ.40 ವೆಚ್ಚ ಭರಿಸುತ್ತಿತ್ತು. ಕೇಂದ್ರದ ಪ್ರಮಾಣ ಹೆಚ್ಚಳಕ್ಕೆ ಮನವಿ ಮಾಡುತ್ತೇವೆ. 50 ಕಿ.ಮೀ. ಟ್ರಾಮಾಕೇರ್ ಸೆಂಟರ್ಗಳ ಹೆಚ್ಚಳ. ಟೆಲಿಮೆಡಿಸಿನ್ ಹೆಚ್ಚು ಬಳಕೆಗೆ ಚಿಂತನೆ. ಡಿಜಿಟಲ್ ಕಾಪಿಡುವ ವ್ಯವಸ್ಥೆಗೆ ಕ್ರಮ. 30 ಸಾವಿರ ಜನಸಂಖ್ಯೆಗೆ ಒಂದು ಆ್ಯಂಬುಲೆನ್ಸ್. ಇದು ನಮ್ಮ ಮುಂದಿರುವ ಗುರಿ. ಹಾಗಾಗಿ ಇಂದಿನ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ. ಪಿಪಿಪಿ ಮಾಡೆಲ್ ನಲ್ಲಿ ನಿರ್ಮಾಣದ ಬಗ್ಗೆ ಚರ್ಚೆ ನಡೆದಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ