HOME » NEWS » State » HEALTH STAFF NOT CAME TO TAKE CORONA VACCINE THAT IS WHY SECOND STAGE VACCINATION WAS BACKWARD RHHSN

ಕೊರೋನಾ ಲಸಿಕೆ‌ ಹಾಕಿಸಿಕೊಳ್ಳಲು ಬರುತ್ತಿಲ್ಲ ಆರೋಗ್ಯ ಸಿಬ್ಬಂದಿ, ಹೀಗಾಗಿ ವಿಳಂಬವಾಗುತ್ತಿದೆ ಎರಡನೇ‌ ಹಂತದ ಲಸಿಕೆ ಅಭಿಯಾನ!

ಮೊದಲ ಹಂತದ ಲಸಿಕೆಯನ್ನೇ ಹಂಚಲಾಗದೆ ಒದ್ದಾಡುತ್ತಿರುವ ಬಿಬಿಎಂಪಿ, ಇನ್ನೂ 90 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಗಳಿಗೆ ಲಸಿಕೆ ಹಂಚಿಕೆ ಮಾಡಬೇಕಿದೆ. ಅದು ಮುಗಿದ ಮೇಲೆಯೇ ಎರಡನೇ ಹಂತದ ಅಭಿಯಾನದ ಮಾತು ಆರಂಭವಾಗಿದೆ.

news18-kannada
Updated:February 4, 2021, 6:44 PM IST
ಕೊರೋನಾ ಲಸಿಕೆ‌ ಹಾಕಿಸಿಕೊಳ್ಳಲು ಬರುತ್ತಿಲ್ಲ ಆರೋಗ್ಯ ಸಿಬ್ಬಂದಿ, ಹೀಗಾಗಿ ವಿಳಂಬವಾಗುತ್ತಿದೆ ಎರಡನೇ‌ ಹಂತದ ಲಸಿಕೆ ಅಭಿಯಾನ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆಲ್ಲಾ ಎರಡನೇ ಹಂತದ ಲಸಿಕೆ ಅಭಿಯಾನ ಶುರು ಆಗಬೇಕಿತ್ತು. ಆದರೆ ಮೊದಲ ಹಂತದಲ್ಲೇ 90 ಸಾವಿರ ಮಂದಿಗೆ ಲಸಿಕೆ‌ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಎರಡನೇ ಹಂತದ ಲಸಿಕೆ ಹಂಚಿಕೆ ಅಭಿಯಾನ ವಿಳಂಬ ಆಗ್ತಿದೆ. ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟ ಲಸಿಕೆ ಮಹಾ ಅಭಿಯಾನದ ಎರಡನೇ ಹಂತ ವಿಳಂಬ ಆಗ್ತಿದೆ. ಯಾಕಂದರೆ ಮೊದಲ ಹಂತದಲ್ಲಿ ಕೊಡಲು ಉದ್ದೇಶಿಸಿದ ಲಸಿಕೆಯನ್ನು ಇನ್ನೂ ಕೊಟ್ಟು ಮುಗಿಸಿಲ್ಲ. ಇದರಿಂದ ಬಿಬಿಎಂಪಿ ಕೂಡ ಹೊರತಾಗಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಭರ್ಜರಿ ಯಶ ಕಾಣುತ್ತೆ ಅಂತಲೇ ಭಾವಿಸಲಾಗಿದ್ದ ಲಸಿಕೆ ಅಭಿಯಾನ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್ ಆಗಲಿಲ್ಲ. ಹೀಗಾಗಿ ಎರಡನೇ ಹಂತದ ಅಭಿಯಾನ ಶುರು ಮಾಡಲು ಸಾಧ್ಯವಾಗುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಎರಡು ಲಕ್ಷ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡುವ ಲೆಕ್ಕ ಹಾಕಲಾಗಿತ್ತು. ಆದರೆ ಸದ್ಯ ಸಾಧ್ಯವಾಗಿದ್ದು ಸರಿಸುಮಾರು 70 ಸಾವಿರ ಮಂದಿಗೆ ಮಾತ್ರ. ಇದರ ಜೊತೆಗೆ 40 ಸಾವಿರ ಮಂದಿಗೆ ಲಸಿಕೆ ಹಾಕಿಸಿಕೊಳ್ಳಲು ಷೆಡ್ಯೂಲ್ ಬಿಬಿಎಂಪಿ ಮಾಡಬೇಕಿದೆ. ಇನ್ನು ಈ ಪೈಕಿ 90 ಸಾವಿರ ಮಂದಿಯ ನೋಂದಣಿಯೇ ಆಗಿಲ್ಲ. ಹೀಗಾಗಿ ಮೊದಲ ಹಂತದ ಲಸಿಕೆ ಅಭಿಯಾನ ಆಮೆ ನಡಿಗೆ ನಡೆಯುತ್ತಿದೆ.

ಇದನ್ನು ಓದಿ: ಸೆರೆಯಾಗದ ಚಿರತೆ, ಸುಬ್ರಹ್ಮಣ್ಯ ಸಮೀಪದ ಮೂಲೆಮನೆ ಗ್ರಾಮಸ್ಥರಲ್ಲಿ ಆವರಿಸಿದೆ ಚಿಂತೆ!

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ ವಿಜಯೇಂದ್ರ, ಶೀಘ್ರವೇ ಮೊದಲ‌ ಹಂತದ ಎಲ್ಲಾ ಫಲಾನುಭವಿಗಳಿಗೂ ಲಸಿಕೆ ಕೊಟ್ಟು ಮುಗಿಸಲಿದ್ದೇವೆ. ಇದರ ಬೆನ್ನಲ್ಲೇ ಎರಡನೇ ಹಂತದ ಲಸಿಕೆ ಅಭಿಯಾನವನ್ನೂ ಆರಂಭವಾಗಲಿದೆ. ಇದ್ದಕ್ಕಿದ್ದ ಹಾಗೆ ಲಸಿಕೆ ಬಗ್ಗೆ ಅಡ್ಡ ಪರಿಣಾಮದ ಗುಲ್ಲು ಹಬ್ಬಿ ಹೋಯ್ತು. ಹೀಗಾಗಿ ಆರೋಗ್ಯ ಸಿಬ್ಬಂದಿಗಳೇ ಕಾದು ನೋಡುವ ತಂತ್ರದ ಮೊರೆ ಹೋದರು. ಇದರ ಜೊತೆ ತಾಂತ್ರಿಕ‌ ಕಾರಣದಿಂದ ಎರಡು ದಿನ ಹಾಗೂ ಪೋಲಿಯೋ ಲಸಿಕೆ ಸಲುವಾಗಿ ನಾಲ್ಕು ದಿನ ಒಟ್ಟಾರೆ ಆರು ದಿನ ಕೊರೋನಾ ಲಸಿಕೆ ಹಂಚಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೂ ಮೊದಲ ಹಂತದ ಲಸಿಕೆಯನ್ನೇ ಬಿಬಿಎಂಪಿ ಹಂಚಿಕೆ ಮಾಡುತ್ತಿದೆ. ಇದು ಎರಡನೇ ಹಂತದ ಅಭಿಯಾನವನ್ನು ಶುರು ಮಾಡಲು ಅಡ್ಡಲಾಗಿ ನಿಂತಿದೆ.

ಇತ್ತೀಚೆಗಷ್ಟೇ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಲಸಿಕೆ ಅಭಿಯಾನದ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ವೈದ್ಯರೊಡನೆ ಸಭೆ ನಡೆಸಿದ್ದರು. ಈ ವೇಳೆ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ಹಂತದ ಲಸಿಕೆ ಹಂಚಿಕೆ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದಿದ್ದರು. ಆದರೆ ಮೊದಲ ಹಂತದ ಲಸಿಕೆಯನ್ನೇ ಹಂಚಲಾಗದೆ ಒದ್ದಾಡುತ್ತಿರುವ ಬಿಬಿಎಂಪಿ, ಇನ್ನೂ 90 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಗಳಿಗೆ ಲಸಿಕೆ ಹಂಚಿಕೆ ಮಾಡಬೇಕಿದೆ. ಅದು ಮುಗಿದ ಮೇಲೆಯೇ ಎರಡನೇ ಹಂತದ ಅಭಿಯಾನದ ಮಾತು ಆರಂಭವಾಗಿದೆ.

ವರದಿ: ಆಶಿಕ್ ಮುಲ್ಕಿ
Published by: HR Ramesh
First published: February 4, 2021, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories