ಮಾಸ್ಕ್ ಧರಿಸದೆ ವಿಧಾನಸೌಧಕ್ಕೆ ಬಂದ ಪ್ರತಾಪ್ ಸಿಂಹ; ಸಂಸದನಿಗೂ ನೋ ಎಂಟ್ರಿ ಎಂದ ಅಧಿಕಾರಿಗಳು!

ವಿಧಾನಸೌಧ ಪ್ರವೇಶಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಪ್ರತಾಪ್ ಸಿಂಹ ಮಾಸ್ಕ್ ಧರಿಸಿರಲಿಲ್ಲ. ಈ ಹಿನ್ನೆಲೆ ಅವರ ಪ್ರವೇಶಕ್ಕೆ ನಿರಾಕರಿಸಲಾಯಿತು‌.

ಸಂಸದ ಪ್ರತಾಪ್​ ಸಿಂಹ

ಸಂಸದ ಪ್ರತಾಪ್​ ಸಿಂಹ

  • Share this:
ಬೆಂಗಳೂರು (ಜೂ. 19): ಮಾಸ್ಕ್ ಧರಿಸದೆ ವಿಧಾನಸೌಧಕ್ಕೆ ಆಗಮಿಸಿದ ಸಂಸದ ಪ್ರತಾಪ್‌ ಸಿಂಹ ಅವರಿಗೆ ಆರೋಗ್ಯ ಸಿಬ್ಬಂದಿ ನಿರ್ಬಂಧ ಹೇರಿದ ಘಟನೆ ಇಂದು ನಡೆದಿದೆ. ಇಂದು ಸಂಸದ ಪ್ರತಾಪ ಸಿಂಹ ಮಾಸ್ಕ್ ಧರಿಸದೇ ವಿಧಾನಸೌಧಕ್ಕೆ ಆಗಮಿಸಿದ್ದರು. ವಿಧಾನಸೌಧದ ಪಶ್ಚಿಮ ಗೇಟ್ ಬಳಿ ಇದ್ದ ಆರೋಗ್ಯ ಸಿಬ್ಬಂದಿ ಪ್ರತಾಪ್ ಸಿಂಹ ಅವರ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ಥರ್ಮಲ್‌ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸ್ ಮಾಡುವ ಸಿಬ್ಬಂದಿ ಸಂಸದರಿಗೆ ಮಾಸ್ಕ್ ಧರಿಸುವಂತೆ ಒತ್ತಾಯಿಸಿದರು. ಮಾಸ್ಕ್ ಧರಿಸದೆ ವಿಧಾನಸೌಧ ಒಳಪ್ರವೇಶಕ್ಕೆ ತಪಾಸಣಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸೌಧ ಪ್ರವೇಶಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಪ್ರತಾಪ್ ಸಿಂಹ ಮಾಸ್ಕ್ ಧರಿಸಿರಲಿಲ್ಲ. ಈ ಹಿನ್ನೆಲೆ ಅವರ ಪ್ರವೇಶಕ್ಕೆ ನಿರಾಕರಿಸಲಾಯಿತು‌. ಮಾಸ್ಕ್ ಧರಿಸಿಕೊಂಡು ಬರುವಂತೆ‌ ಸಿಬ್ಬಂದಿ ಮನವಿ ಮಾಡಿದರು. ಮಾಸ್ಕ್ ಇಲ್ಲದ ಕಾರಣ ಸಂಸದ ಪ್ರತಾಪ್ ಸಿಂಹ ಬಳಿಕ ವಾಪಾಸ್ ತೆರಳಿದರು. ಈಗಾಗಲೇ ಕೊರೋನಾ ವೈರಸ್ ಶಕ್ತಿಸೌಧಕ್ಕೆ ಕಾಲಿಟ್ಟಿದೆ. ಹೀಗಾಗಿ, ವಿಧಾನಸೌಧದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಿಎಂ ಗೃಹ ಕಚೇರಿ ಕೃಷ್ಣಾಗೂ ಕೊರೋನಾ ಕಾಲಿಟ್ಟ ಕಾರಣ, ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಎಲ್ಲ ಸಭೆಗಳನ್ನು ವಿಧಾನಸೌಧಕ್ಕೆ ಶಿಫ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ಕಚೇರಿಯಲ್ಲಿ ಕೆಲಸ ಮಾಡಿದ್ದ ಲೇಡಿ ಪೊಲೀಸ್ ಗಂಡನಿಗೆ ಸೋಂಕು - ಕೊರೋನಾ ಭೀತಿಯಲ್ಲಿ ಹಿರಿಯ ಸಚಿವರು, ಅಧಿಕಾರಿಗಳು

ಹೀಗಾಗಿ, ತಪಾಸಣಾ‌ ಸಿಬ್ಬಂದಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ‌ ಮಾಸ್ಕ್ ಧರಿಸದೇ ಬಂದ ಸಂಸದ ಪ್ರತಾಪ್ ಸಿಂಹ ಅವರ ಪ್ರವೇಶಕ್ಕೂ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತ ಕೊರೋನಾ ಭೀತಿ ಹಿನ್ನೆಲೆ ವಿಧಾನಸೌಧ ಸುತ್ತಮುತ್ತ ಸ್ಯಾನಿಟೈಸ್ ಕಾರ್ಯ ನಡೆಸಲಾಯಿತು. ನಿನ್ನೆ ಸಂಜೆ ವಿಕಾಸಸೌಧವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿತ್ತು.‌ ಇದೀಗ ವಿಧಾನಸೌಧದ ಸುತ್ತಮುತ್ತ, ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸ್ ಮಾಡಿ ಶುಚಿಗೊಳಿಸಲಾಗುತ್ತಿದೆ.
First published: