ಬೆಂಗಳೂರು (ಡಿ.12): ಆರೋಗ್ಯ ಇಲಾಖೆ ಕಚೇರಿಯಲ್ಲಿ ಸಚಿವ ಸುಧಾಕರ್ (Minister Sudhakar) ತುರ್ತು ಸುದ್ದಿಗೋಷ್ಠಿ ನಡೆಸಿದ್ದರು. ಇದೇ ವೇಳೆ ಮಾತಾಡಿದ ಸಚಿವರು ಡಿಸೆಂಬರ್ 14 ರಂದು ನಮ್ಮ ಕ್ಲಿನಿಕ್ (Namma Clinic) ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನಮ್ಮ ಕ್ಲಿನಿಕ್ ಯೋಜನೆ ಜಾರಿ ಮಾಡಲಿದ್ದು, ಧಾರವಾಡದಿಂದ ಸಿಎಂ ಬೊಮ್ಮಾಯಿ ಅವರು ನಮ್ಮ ಕ್ಲಿನಿಕ್ಗೆ ಚಾಲನೆ ನೀಡಲಿದ್ದಾರೆ. ಒಟ್ಟು 438 ನಮ್ಮ ಕ್ಲಿನಿಕ್ ಲೋಕಾರ್ಪಣೆಯಾಗಲಿದೆ ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ 150 ನಮ್ಮ ಕ್ಲಿನಿಕ್
438 ನಮ್ಮ ಕ್ಲಿನಿಕ್ಗಳ ಪೈಕಿ ಡಿ. 14 ರಂದು 114 ಕ್ಲಿನಿಕ್ಗೆ ಚಾಲನೆ ಸಿಗಲಿದೆ. ಬೆಂಗಳೂರಿನಲ್ಲಿ ಮಾತ್ರ ಜನವರಿಯಲ್ಲಿ 150 ನಮ್ಮ ಕ್ಲಿನಿಕ್ ತೆರೆಯಲಾಗುತ್ತೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 248 ನಮ್ಮ ಕ್ಲಿನಿಕ್ ತೆರೆಯಲಾಗುತ್ತೆ. ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಇದರಿಂದ ಉಪಯೋಗ ಆಗಲಿದೆ ಎಂದು ಸಚಿವರು ಹೇಳಿದ್ದಾರೆ.
20 ಸಾವಿರ ಜನರಿಗೆ ಒಂದು ನಮ್ಮ ಕ್ಲಿನಿಕ್ ಎಂಬ ಅನುಪಾತದಲ್ಲಿ ನಮ್ಮ ಕ್ಲಿನಿಕ್ ಸೇವೆ ಒದಗಿಸಲಿದೆ. ಈ ಕ್ಲಿನಿಕ್ಗಳಲ್ಲಿ 12 ಪ್ರಮುಖ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
12 ಪ್ರಮುಖ ಸೇವೆ ಒದಗಿಸಲಿರುವ ನಮ್ಮ ಕ್ಲಿನಿಕ್
ಗರ್ಭಿಣಿ ಹಾರೈಕೆ
ಶಿಶುವಿನ ಹಾರೈಕೆ
ಮಕ್ಕಳ ಸೇವೆ
ಕುಟುಂಬ ಕಲ್ಯಾಣ ಸೇವೆ
ಸಾಂಕ್ರಾಮಿಕ ರೋಗಗಳ ನಿರ್ವಹಣೆ
ಸಂಪೂರ್ಣ ಓಪಿಡಿ ಸೇವೆಗಳು
ಮಧುಮೇಹ, ರಕ್ತದೊತ್ತಡ ಚೆಕ್ ಅಪ್
ಕ್ಯಾನ್ಸರ್ ಸ್ಕ್ರೀನಿಂಗ್ ಸೇವೆ
ಬಾಯಿ ಆರೋಗ್ಯ ಸಮಸ್ಯೆಗಳು ಸೇವೆ
ಕಣ್ಣಿನ ತಪಾಸಣೆ
ಮೂಗು, ಗಂಟಲು ENT ಸೇವೆಗಳು
ಮಾನಸಿಕ ಆರೋಗ್ಯ ಸ್ಕ್ರೀನಿಂಗ್ ಸೇವೆ
ವೃದ್ಧಾಪ್ಯ ಆರೈಕೆ
ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಒಟ್ಟು 12 ಪ್ರಮುಖ ಆರೋಗ್ಯ ಸೇವೆಗಳು ನಮ್ಮ ಕ್ಲಿನಿಕ್ ನಲ್ಲಿ ಲಭ್ಯವಿರಲಿದ್ದು, ಎಲ್ಲಾ ಸೇವೆಗಳು ಉಚಿತವಾಗಿ ಸಿಗಲಿದೆ.
ಎಲ್ಲಾ ಸೇವೆಗಳು ಉಚಿತ
ಚಿಕಿತ್ಸೆ ಜೊತೆಗೆ ಪ್ರಯೋಗಾಲಯ ಸೇವೆಗಳು ಹಾಗೂ ಔಷಧಿಗಳೂ ಕೂಡ ಸಂಪೂರ್ಣ ಉಚಿತವಾಗಿರಲಿದೆ. 14 ಮಾದರಿಯ ಟೆಸ್ಟ್ ಗಳು ನಮ್ಮ ಕ್ಲಿನಿಕ್ ನಲ್ಲಿ ಸಂಪೂರ್ಣ ಉಚಿತವಿದೆ. ಬೆಳಗ್ಗೆ 9 ರಿಂದ ಸಂಜೆ 4:30ರ ವರೆಗೆ ನಮ್ಮ ಕ್ಲಿನಿಕ್ ಓಪನ್ ಇರಲಿದೆ. ಸೋಮವಾರದಿಂದ ಶನಿವಾರದ ವರೆಗೆ ಜನರಿಗೆ ಸೇವೆ, ಭಾನುವಾರ ರಜೆ ಕರ್ನಾಟಕ ಇತಿಹಾಸದಲ್ಲಿ ನೂರು ಕ್ಲಿನಿಕ್ ಏಕಕಾಲದಲ್ಲಿ ಓಪನ್ ಆಗೋದು ಇದೇ ಮೊದಲು ಎಂದು ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ: Mysuru: ಬಿಲ್ಡಿಂಗ್ ಬಾಡಿಗೆ ಕೇಳಿದ್ದಕ್ಕೆ ರಂಪಾಟ; KSRTC ಡಿಪೋ ಅಧಿಕಾರಿಗೆ ಮಚ್ಚು ತೋರಿಸಿ ಧಮ್ಕಿ
80% ಸರ್ಕಾರದ ಕಟ್ಟಡಗಳೇ ಬಳಕೆಯಾಗಿದೆ. ಒಟ್ಟು 438 ನಮ್ಮ ಕ್ಲಿನಿಕ್ ಯೋಜನೆಗೆ 150 ಕೋಟಿ ತಗುಲಿದೆ. 80 ರಿಂದ 100 ವೈದ್ಯರ ಕೊರತೆ ಇದೆ. ಈಗಾಗಲೇ ನಮ್ಮ ಕ್ಲಿನಿಕ್ ಯೋಜನೆಗಾಗಿ 300 ವೈದ್ಯರ ನೇಮಕಾತಿ ಆಗಿದೆ. ಡಿಸೆಂಬರ್ 14 ಬೆಂಗಳೂರಲ್ಲಿ ಯಾವುದೇ ನಮ್ಮ ಕ್ಲಿನಿಕ್ ಓಪನ್ ಆಗೋದಿಲ್ಲ. ಮೊದಲು ರಾಜ್ಯದ ಗ್ರಾಮೀಣ ಭಾಗದಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣೆಗೊಳ್ಳಲಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಝೀಕಾ ವೈರಸ್ ಪತ್ತೆ ಹಿನ್ನೆಲೆ ಪ್ರತ್ಯೇಕ ಮಾರ್ಗಸೂಚಿ
ರಾಯಚೂರಿನಲ್ಲಿ ಝೀಕಾ ವೈರಸ್ ಶಂಕೆ ವಿಚಾರಕ್ಕೂ ಪ್ರತಿಕ್ರಿಯಿಸಿದ ಸಚಿವರು, ಲ್ಯಾಬ್ ನಿಂದ ರಿಪೋರ್ಟ್ ಬಂದಿದೆ. 5 ವರ್ಷದ ಹೆಣ್ಣು ಮಗುವಿನಲ್ಲಿ ಝೀಕಾ ಪತ್ತೆಯಾಗಿದೆ. ಮಗುವಿನ ಮೇಲೆ ನಾವು ನಿಗಾ ಇಟ್ಟಿದ್ದೇವೆ. ರಾಜ್ಯದಲ್ಲಿನ ಮೊದಲ ಝೀಕಾ ವೈರಸ್ ದೃಢವಾಗಿದ್ದು, ರಾಯಚೂರು ಹಾಗೂ ನೆರೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿರುವುದಾಗಿ ಸಚಿವ ಸುಧಾಕರ್ ಹೇಳಿದ್ದಾರೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡೋದಾಗಿ ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ