Bellary Vims Case: ಸಾವಿನ ಹೊಣೆ ಹೊತ್ತು ಸುಧಾಕರ್​ ರಾಜೀನಾಮೆ ಕೊಡ್ಬೇಕು ಎಂದ ಕಾಂಗ್ರೆಸ್​; ಸಿದ್ದು ವಿರುದ್ಧ ಸಚಿವರು ಗರಂ

ಬಳ್ಳಾರಿ ವಿಮ್ಸ್​ನಲ್ಲಿ ರೋಗಿಗಳ ಸಾವು, ಸರ್ಕಾರಿ ಪ್ರಾಯೋಜಿತ ಕೊಲೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೋವು ತಂದಿದೆ. ಇದು ಒಬ್ಬ ನಾಯಕರು ಹೇಳುವ ಮಾತಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಸುಧಾಕರ್​, ಸಿದ್ದರಾಮಯ್ಯ

ಸುಧಾಕರ್​, ಸಿದ್ದರಾಮಯ್ಯ

  • Share this:
ಬೆಂಗಳೂರು (ಸೆ.17): ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ (Bellary Vims Hospital) ನಡೆದ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಹಾಗೂ ಬಿಜೆಪಿ (Congress And BJP) ನಡುವೆ ವಾಗ್ದಾಳಿ ಮುಂದುವರಿದಿದೆ. ವಿಮ್ಸ್ ಆಸ್ಪತ್ರೆಯಲ್ಲಾದ ಅವಘಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹಾಗೂ ಆರೋಗ್ಯ ಸಚಿವ ಸುಧಾಕರ್ (Dr. K Sudhakar)​ ಅವರೇ ಹೊಣೆ ಹೊರಬೇಕು ಎಂದು ಕಾಂಗ್ರೆಸ್​ ನಾಯಕರು ಹೇಳ್ತಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿ ಸಚಿವ ಸುಧಾಕರ್​, ನಾಯಕರಾದವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು. 

ಟ್ವೀಟ್​ ಮೂಲಕ ಕಿಡಿಕಾರಿದ ಕಾಂಗ್ರೆಸ್

ಟ್ವೀಟ್​ ಮೂಲಕ ಕಿಡಿಕಾರಿದ ಕಾಂಗ್ರೆಸ್​, ವಿದ್ಯುತ್ ಕೊರತೆಯಿಂದ ಅವಘಡ ನಡೆದಿಲ್ಲ ಎಂದಾದರೆ ತನಿಖೆಗೆ ಸಮಿತಿ ರಚಿಸಿದ್ದೇಕೆ? ಸರ್ಕಾರ ಸುಳ್ಳು ಹೇಳಿ ರಾಜ್ಯದ ದಿಕ್ಕು ತಪ್ಪಿಸುತ್ತಿದೆ. ರಾಜ್ಯದ ಜನರ ಪ್ರಾಣ ಉಳಿಯಬೇಕು ಎಂದರೆ ಅಸಮರ್ಥ ಸಚಿವ @mla_sudhakar ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದೆ.



ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಳ್ಳಾರಿ ವಿಮ್ಸ್​ಗೆ ಆರೋಗ್ಯ ಸಚಿವ ಸುಧಾಕರ್ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಭೇಟಿ ಕೊಡಬೇಕಿತ್ತು. ಆರೋಗ್ಯ ಸಚಿವರು ಬೆಂಗಳೂರಿನಲ್ಲೇ ಇದ್ದಾರೆ. ಯಾವ ಸಚಿವರೂ ವಿಮ್ಸ್ ಆಸ್ಪತ್ರೆಗೆ ಹೋಗಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ತಪ್ಪಿತಸ್ಥರ ಮೇಲೆ ಕ್ರಮ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಸಚಿವ ಶ್ರೀರಾಮುಲು ಸುಳ್ಳು ಹೇಳಿದ್ದಾರೆ. ಒಟ್ಟಾರೆ 5 ಜನ ಸತ್ತಿದ್ದಾರೆ. ಮೂವರು ಮೃತರ ಕುಟುಂಬಕ್ಕೆ ಕೇವಲ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: Basavaraj Bommai: ಹೈದ್ರಾಬಾದ್‌ನಲ್ಲಿ ಬಸವರಾಜ ಬೊಮ್ಮಾಯಿಗೆ ಅಪಮಾನ, 40% ಸಿಎಂಗೆ ಸ್ವಾಗತ ಅಂತ ಫ್ಲೆಕ್ಸ್ ಹಾಕಿದ ಟಿಆರ್‌ಎಸ್!

ದುರಂತದ ಸಂಪೂರ್ಣ ಹೊಣೆ ನಾನು ಹೊರುತ್ತೇನೆ

ಸರ್ಕಾರಿ ಪ್ರಾಯೋಜಿತ ಕೊಲೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೋವು ತಂದಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು. ಇದು ಒಬ್ಬ ನಾಯಕರು ಹೇಳುವ ಮಾತು ಅಲ್ಲ. ಸಿದ್ದರಾಮಯ್ಯ ಸರ್ಕಾರ ನಡೆಸಿದವರು. ನಾಯಕರಾದವರು ಜವಾಬ್ದಾರಿಯಿಂದ ಮಾತನಾಡಬೇಕು. ಈ ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ತನಿಖೆಗೆ ಸೂಚಿಸಿದ್ದೇನೆ. ಸಾವು ಸಾವೇ, ಇದರ ಸಂಪೂರ್ಣ ಹೊಣೆಗಾರಿಕೆ ತೆಗೆದುಕೊಳ್ಳುತ್ತೇನೆ. ಮುಂದೆ ಯಾವುದೇ ಆಸ್ಪತ್ರೆಯಲ್ಲಿ ಈ ರೀತಿ ಆಗದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: BDA Scam: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರ ವಿರುದ್ಧ FIR ದಾಖಲು

2017ರಲ್ಲಿ ಸಿದ್ದರಾಮಯ್ಯ ಕೆಪಿಎಂಇ ಕಾಯಿದೆ ತರಲು ಹೊರಟಿದ್ದಾಗ ವೈದ್ಯರು ಮೂರು ದಿನ ಬಂದ್ ನಡೆಸಿದ್ದರು. ಆಗ 70 ರಿಂದ 80 ಜನ ಸಾವಾಗಿತ್ತು. ಇದಕ್ಕೆ ಸಿದ್ದರಾಮಯ್ಯ ಜವಾಬ್ದಾರಿ ಅಂತಾ ನಾನು ಹೇಳಬಹುದಾ?. ಸ್ಪೀಕರ್ ಅನುಮತಿ ಕೊಟ್ಟರೆ ಸದನದಲ್ಲಿ ಇದನ್ನು ಪ್ರಸ್ತಾಪ ಪಡಿಸುತ್ತೇನೆ ಎಂದು ಹೇಳಿದರು.

ನಿರ್ದೇಶಕರನ್ನು ಕೆಳಗಿಳಿಸಲು ಉದ್ದೇಶ ಪೂರ್ವಕ ಪವರ್ ಕಟ್ ಎಂಬ ವಿಮ್ಸ್ ನಿರ್ದೇಶಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಮ್ಸ್ ಆಸ್ಪತ್ರೆ ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆ ಮಾಹಿತಿಯನ್ನು ನಾನು ಈ‌ ಹಂತದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಸಚಿವ ಸುಧಾಕರ್​ ತಿಳಿಸಿದ್ದಾರೆ.
Published by:ಪಾವನ ಎಚ್ ಎಸ್
First published: