‘ಡಿಕೆಶಿ ಜೈಲಿನಿಂದ ಹೊರಗೆ ಬರಬೇಕೆಂದು ದೇವರಿಗೆ ಪ್ರಾರ್ಥಿಸಿದ್ದೆ‘: ಆರೋಗ್ಯ ಸಚಿವ ಶ್ರೀರಾಮುಲು

ಡಿಕೆಶಿ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. ನಾನು ಇದನ್ನೇ ಬಯಸಿದ್ದೇ. ಅವರು ಹೊರಗೆ ಬರಲಿ ಎಂದು ದೇವರಿಗೆ ಪ್ರಾರ್ಥನೆ ಮಾಡಿದ್ದೆ. ನನಗೆ ಈ ದೇಶದ ಕಾನೂನಿನ ಮೇಲೆ ನಂಬಿಕೆ ಇದೆ ಎಂದರು ಶ್ರೀರಾಮುಲು.

news18-kannada
Updated:October 24, 2019, 2:43 PM IST
‘ಡಿಕೆಶಿ ಜೈಲಿನಿಂದ ಹೊರಗೆ ಬರಬೇಕೆಂದು ದೇವರಿಗೆ ಪ್ರಾರ್ಥಿಸಿದ್ದೆ‘: ಆರೋಗ್ಯ ಸಚಿವ ಶ್ರೀರಾಮುಲು
ಶ್ರೀರಾಮುಲು-ಡಿಕೆ ಶಿವಕುಮಾರ್​
  • Share this:
ಬೆಂಗಳೂರು(ಅ.24): ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಜೈಲಿಗೆ ಹೋಗಬೇಕೆಂದು ನಾನ್ಯಾವತ್ತು ಬಯಸಿರಲಿಲ್ಲ. ಬದಲಿಗೆ ನಾನೇ ಡಿಕೆಶಿ ಜೈಲಿನಿಂದ ಹೊರಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. 

ಇಂದು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಮತ್ತು ಆರೋಗ್ಯ ಸಚಿವ ಶ್ರೀರಾಮುಲು, ಡಿಕೆಶಿ ಜಾಮೀನು ಮೇಲೆ ಹೊರಗೆ ಬಂದಿದ್ದಾರೆ. ನಾನು ಇದನ್ನೇ ಬಯಸಿದ್ದೇ. ಅವರು ಹೊರಗೆ ಬರಲಿ ಎಂದು ದೇವರಿಗೆ ಪ್ರಾರ್ಥನೆ ಮಾಡಿದ್ದೆ. ನನಗೆ ಈ ದೇಶದ ಕಾನೂನಿನ ಮೇಲೆ ನಂಬಿಕೆ ಇದೆ ಎಂದರು.

ಜೈಲಿಗೆ ಹೋಗಿದ್ದಕ್ಕೆ ಖುಷಿಪಟ್ಟಿದ್ದ ಬಿಜೆಪಿ ನಾಯಕರಿಗೆ ಡಿಕೆಶಿ ಧನ್ಯವಾದ ತಿಳಿಸಿದ ಬಗ್ಗೆಯೂ ಶ್ರೀರಾಮುಲು ಪ್ರತಿಕ್ರಿಯಿಸಿದರು. ನಾವು ಯಾರು ಜೈಲಿಗೆ ಹೋಗಬೇಕೆಂದು ಬಯಸುವುದಿಲ್ಲ. ನಮ್ಮೊಂದಿಗೆ ದೇವರು ಇದ್ದಾರೆ. ಅವರೇ ನಮ್ಮ ಕೈ ಹಿಡಿದು ನಡೆಸುತ್ತಾರೆ ಎನ್ನುವ ನಂಬಿಕೆ. ಯಾರೇ ತಪ್ಪು ಮಾಡಲಿ, ಶಿಕ್ಷೆ ನೀಡಲು ಕಾನೂನು ಇದೆ ಎಂದರು.

ನಿನ್ನೆಯಷ್ಟೇ ದೆಹಲಿ ಹೈಕೋರ್ಟ್​​ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಡಿಕೆಶಿಗೆ ಜಾಮೀನು ನೀಡಿತ್ತು. ಸುಮಾರು ಒಂದೂವರೆ ತಿಂಗಳುಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಡಿಕೆಶಿಗೆ ದೆಹಲಿ ಹೈಕೋರ್ಟ್​​ ಜಾಮೀನು ನೀಡಿರುವುದು ಕಾಂಗ್ರೆಸ್​​ ಕಾರ್ಯಕರ್ತರಿಗೆ ಸಂತಸ ತಂದಿದೆ.

ಇದನ್ನೂ ಓದಿ: ಅನರ್ಹ ಶಾಸಕರಿಗೆ ನನ್ನ ನಿಮ್ಮ ಭೇಟಿ ರಣರಂಗದಲ್ಲಿ ಎಂದಿದ್ದ ಡಿಕೆಶಿ ಉಪಚುನಾವಣಾ ಕಣದಲ್ಲಿ ಘರ್ಜಿಸುತ್ತಾರ? 

ಅನಾರೋಗ್ಯದ ಕಾರಣದಿಂದ ದೆಹಲಿ ಹೈಕೋರ್ಟ್​​ ಡಿಕೆಶಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸದ್ಯ ಪ್ರಕರಣದ ಸಾಕ್ಷಿ ನಾಶ ಮಾಡುವ ಸಾಧ್ಯತೆ ಕಡಿಮೆಯಿದೆ ಎಂದು ಮನಗಂಡ ಬಳಿಕವೇ ನ್ಯಾಯಲಯ ಜಾಮೀನು ನೀಡಿದೆ ಎನ್ನಲಾಗಿದೆ. ಅಲ್ಲದೇ ವಿದೇಶಕ್ಕೆ ತೆರಳುವ ಮೊದಲು ಅನುಮತಿ ಪಡೆಯಬೇಕು. 25 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು ಎಂಬುದಾಗಿ ಷರತ್ತು ವಿಧಿಸಿದೆ.

ಏನಿದು ಡಿಕೆಶಿ ಪ್ರಕರಣ?: ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು.---------------
First published: October 24, 2019, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading