Covid Test Reportನಲ್ಲಿ ಗೋಲ್​​ಮಾಲ್​​ ಮಾಡಿದ್ರೆ ಲ್ಯಾಬ್​ಗಳ ಲೈಸೆನ್ಸ್ ರದ್ದು: ಸಚಿವ ಸುಧಾಕರ್ ಎಚ್ಚರಿಕೆ

ತಪ್ಪು ವರದಿ ನೀಡಿದರೆ ಲೈಸೆನ್ಸ್ ಕ್ಯಾನ್ಸಲ್ ಮಾಡಿ ಕಾನೂನು ಕ್ರಮ ವಹಿಸುತ್ತೇವೆ. ಕೆಲ ವ್ಯಕ್ತಿಗಳು ಅವರದ್ದೇ ಆದ ವ್ಯಾಖ್ಯಾನ ಮಾಡುತ್ತಾರೆ, ಅವರ ಅಭಿಪ್ರಾಯ ಆಗಲ್ಲ. ಒಂದು ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ನಿಯಮದ ಪ್ರಕಾರ ಕೆಲಸ ಮಾಡಬೇಕು ಎಂದು ಲ್ಯಾಬ್​​ ಮಾಲೀಕರಿಗೆ ಎಚ್ಚರಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ: ಏರ್​​ಪೋರ್ಟ್​​ನಲ್ಲಿ ಕೋವಿಡ್ ಟೆಸ್ಟ್ (Airport Covid Testing) ಗೋಲ್ ಮಾಲ್ ಆರೋಪಕ್ಕೆ ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ.ಸುಧಾಕರ್(Health Minister K Sudhakar)​, ನನ್ನ ಗಮನಕ್ಕೆ ಈ ವಿಚಾರ ಬಂದಿಲ್ಲ, ಆ ರೀತಿಯಲ್ಲಿ ಇದ್ದರೆ ಕ್ರಮ ಕೈಗೊಳ್ಳುತ್ತೇವೆ. ತಪ್ಪು ವರದಿ ನೀಡಿದರೆ ಲೈಸೆನ್ಸ್ ಕ್ಯಾನ್ಸಲ್ ಮಾಡಿ ಕಾನೂನು ಕ್ರಮ ವಹಿಸುತ್ತೇವೆ. ಕೆಲ ವ್ಯಕ್ತಿಗಳು ಅವರದ್ದೇ ಆದ ವ್ಯಾಖ್ಯಾನ ಮಾಡುತ್ತಾರೆ, ಅವರ ಅಭಿಪ್ರಾಯ ಆಗಲ್ಲ. ಒಂದು ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ನಿಯಮದ ಪ್ರಕಾರ ಕೆಲಸ ಮಾಡಬೇಕು ಎಂದು ಲ್ಯಾಬ್​​ ಮಾಲೀಕರಿಗೆ ಎಚ್ಚರಿಸಿದರು. ಸಿಎಂ ಮನೆ ಬಳಿ ಕಾಂಗ್ರೆಸ್ ನಾಯಕರು ಧರಣಿ ನಡೆಸುವುದಾದರೆ ಪರವಾನಿಗೆ ಪಡೆದು ಅವರು ಪ್ರತಿಭಟನೆ ಮಾಡಲಿ. ಯಾರ ಮನೆ ಬಳಿ, ಯಾವ ರೀತಿ ಬೇಕಾದರೂ ಪ್ರತಿಭಟಿಸಲು ಅವಕಾಶ ಇದೆ. ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಎಂಬುದು ತಿಳಿಸಲಿ ಎಂದು ಖಾರವಾಗಿಯೇ ಹೇಳಿಕೆ ನೀಡಿದರು.

ಯಾರೇ ಮಾಡಿದ್ರೂ ತಪ್ಪು ತಪ್ಪೇ..

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ತಪ್ಪು ಮಾಡಿದರು ತಪ್ಪೇ. ನಿಯಮಗಳನ್ನು ಯಾರೂ ಸಹ ಮೀರಿ ನಡೆಯಬಾರದು. ಶುಕ್ರವಾರದ ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ. ಸಾಧಕ ಬಾಧಕ ಗಮನಿಸಿ ಸಿಎಂ ಬೊಮ್ಮಾಯಿ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತಾರೆ. ವಿಪಕ್ಷ ನಾಯಕರು ಹತಾಶೆಯಿಂದ ಮಾತಾಡುತ್ತಿದ್ದಾರೆ, ನಾನು ಅದಕ್ಕೆಲ್ಲಾ ಪ್ರತಿಕ್ರಿಯಿಸಲ್ಲ ಎಂದರು.

ಇದನ್ನೂ ಓದಿ: Pratap Simha: ರಾಜ್ಯದಲ್ಲಿ ಕ್ಯಾಂಟೀನ್ ಮಾಡುವಾಗ ಸಿದ್ದರಾಮಯ್ಯಗೆ ನೆನಪಾಗಿದ್ದು ಇಂದಿರಾ ಗಾಂಧಿ ಮಾತ್ರನಾ? ಪ್ರತಾಪ್ ಸಿಂಹ​ ಲೇವಡಿ

ಪ್ರತಾಪ್​ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ

ಸರ್ಕಾರ ಯಾವುದೇ ಕಾರಣಕ್ಕೂ ಲಾಕ್​ಡೌನ್​ ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಮುಖ್ಯಮಂತ್ರಿಗಳು ರಾಜ್ಯದ ಜನರ ಆರೋಗ್ಯದ ಹಿತ ಕಾಯಲು ತೆಗೆದುಕೊಳ್ಳುತ್ತಾರೆ. ನಾನು ಯಾರ ಹೇಳಿಗೂ ಕೂಡಾ ಪ್ರತಿಕ್ರಿಯೆ ಕೊಡಲ್ಲ. ಜನರ ಆರೋಗ್ಯ ನನಗೆ ತುಂಬಾ ಮುಖ್ಯ, ನಮ್ಮ ಅಭಿಪ್ರಾಯ ಶುಕ್ರವಾರ ನೀಡುತ್ತೇವೆ ಎಂದರು.

ಮಾಜಿ ಸಿಎಂ ಎಚ್​ಡಿಕೆ ಸಲಹೆ

ಕೊರೊನಾ 3ನೇ ಅಲೆ (Corona 3rd Wave) ದಿನೇ ದಿನೇ ರಾಜ್ಯದಲ್ಲಿ ತೀವ್ರಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆ ಸಂಬಂಧ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ. ಇನ್ನೊಂದು ವಾರದಲ್ಲಿ 3ನೇ ಅಲೆ ತೀವ್ರಗೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ. ಮುಂದಿನ 15 ದಿನಗಳ ಕಾಲ ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವುದೇ ಒಳಿತು ಎಂದು ಎಚ್​ಡಿಕೆ ಸಲಹೆ ನೀಡಿದ್ದಾರೆ. ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಕೋವಿಡ್ ಅನಾಹುತಗಳ ಗ್ರಾಫ್  ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗಿದೆ. ಕರ್ಫ್ಯೂ ವಿಚಾರವಾಗಿ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲು ಗಮನಿಸುತ್ತಿದ್ದೇನೆ. ನೈಟ್ ಕರ್ಫ್ಯೂ ಜಾರಿಗೆ ತಂದಿರೋದು ಸರಿಯಿಲ್ಲ ಅಂತಿದ್ದಾರೆ ಎಂದು ಅಸಮಾಧನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಾಸ್ಕ್ ಕಡ್ಡಾಯವಲ್ಲ ಎಂದ ಸಚಿವ Umesh Katti.. ಮತ್ಯಾಕೆ ಜನಸಾಮಾನ್ಯರಿಗೆ ದಂಡ ಹಾಕುತ್ತಿದ್ದೀರಿ..?

ತಜ್ಞ ವೈದ್ಯರು ಹೋಂ ಐಸೋಲೇಷನ್‌ನಲ್ಲಿರುವವರಿಗೆ ಅಂತಾನೇ 6 ಔಷಧಿಗಳನ್ನು ಸೂಚಿಸಿದ್ದಾರೆ. ಇತ್ತೀಚೆಗೆ ಕೋವಿಡ್ ರೋಗಲಕ್ಷಣದಲ್ಲಿ ಹೆಚ್ಚು ಕಫ, ಕೆಮ್ಮು ಕಂಡು ಬರ್ತಿದೆ.‌ ಜೊತೆಗೆ ಕಡಿಮೆ ಪ್ರಮಾಣದ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ಈ ಎಲ್ಲಾ ರೋಗಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು 5 ಉತ್ತಮವಾದ ಮಾತ್ರೆಗಳು ಹಾಗೂ ಒಂದು ಸಿರಪ್‌ನ್ನು ಕೂಡಾ ಕಿಟ್‌ನಲ್ಲಿ ಇಡಬೇಕು, ಜೊತೆಗೆ ಮೂರು ಪದರವನ್ನೊಳಗೊಂಡ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಇರಬೇಕು ಅಂತ ಸಲಹೆ ನೀಡಿದ್ದಾರೆ. ಹಾಗಾದ್ರೆ ಆ ಔಷಧಗಳು ಯಾವ್ದು ಎಷ್ಟು ಪ್ರಮಾಣದಲ್ಲಿ ತಗೋಳೋದಕ್ಕೆ ತಜ್ಞರು ಹೇಳಿದ್ದಾರೆ ಅಂತ ನೋಡೋದಾದ್ರೆ‌..

ತಜ್ಞರು ಸೂಚಿಸಿರೋ 6 ಔಷಧಗಳು ಯಾವುದು..?

ಪ್ಯಾರಸಿಟಮಾಲ್ 500mg ಮಾತ್ರೆಗಳು

ವಿಟಮಿನ್ ಸಿ 500mg ಮಾತ್ರೆಗಳು

ಝಿಂಕ್ ಸಲ್ಫೈಟ್ 50mg ಮಾತ್ರೆಗಳು

ಲೆವೋಟ್ರೈಸೈನ್ 10mg ಮಾತ್ರೆಗಳು

ಪಾಂಟಪ್ರೋಝೋಲ್ 40mg ಮಾತ್ರೆಗಳು

ಆ್ಯಂಟಿ ಟುಸಿವ್ ಕಾಫ್ ಸಿರಪ್
Published by:Kavya V
First published: