HOME » NEWS » State » HEALTH MINISTER K SUDHAKAR SAYS WILL TAKE ACTION AFTER DISCUS WITH CM BS YEDIYURAPPA LG

ಹೆಚ್ಚಾಗುತ್ತಿರುವ ಕೊರೋನಾ; ಸಿಎಂ ಜೊತೆ ಚರ್ಚಿಸಿ ಶೀಘ್ರವೇ ಬಿಗಿ ಕ್ರಮ ಎಂದ ಸಚಿವ ಸುಧಾಕರ್

ವಲಯವಾರು ಕೊರೋನಾ ನಿಯಂತ್ರಣಕ್ಕೆ ಸಚಿವರು ಶ್ರಮ ಹಾಕ್ತಿದಾರೆ. ಜನರ ಸಹಭಾಗಿತ್ವ, ಸಹಕಾರ ಅತ್ಯಂತ ಅಗತ್ಯ. ಹೀಗಾಗಿ ಜನರು ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.

news18-kannada
Updated:April 15, 2021, 11:49 AM IST
ಹೆಚ್ಚಾಗುತ್ತಿರುವ ಕೊರೋನಾ; ಸಿಎಂ ಜೊತೆ ಚರ್ಚಿಸಿ ಶೀಘ್ರವೇ ಬಿಗಿ ಕ್ರಮ ಎಂದ ಸಚಿವ ಸುಧಾಕರ್
ಡಾ. ಕೆ ಸುಧಾಕರ್.
  • Share this:
ಬೆಂಗಳೂರು(ಏ.15): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಏಪ್ರಿಲ್ 10ರಿಂದ 20ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ.  ಹೀಗಿದ್ದರೂ ಸಹ ಕೊರೋನಾ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಕೊರೋನಾ ನಿಯಂತ್ರಣಕ್ಕೆ ಬಿಗಿ ಕ್ರಮ ಮಾಡುವ ವಿಚಾರವಾಗಿ ಆರೋಗ್ಯ ಸಚಿವ ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಿಎಂ ಬಿಎಸ್​ ಯಡಿಯೂರಪ್ಪ  ಬಂದ ಕೂಡಲೇ ಬಿಗಿ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ತಾಂತ್ರಿಕ ಸಲಹಾ ಸಮಿತಿಯವರು ಇವತ್ತು ವರದಿ ಕೊಡ್ತಾರೆ ನಾಳೆ ಸಿಎಂ ಬಿಎಸ್ವೈ ಭೇಟಿಯಾಗಿ ವರದಿ ಬಗ್ಗೆ ಚರ್ಚೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಮಾಡಿರೋ ಕಠಿಣ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಜನತಾ ಕರ್ಪ್ಯೂ ಮಾಡಿದ್ದಾರೆ. ಆದರೆ ಅದನ್ನು ಇಲ್ಲಿ ಮಾಡುವ ಅಗತ್ಯತೆ ಇಲ್ಲ. ಯಾಕೆಂದರೆ ಮಹಾರಾಷ್ಟ್ರದಷ್ಟು ಸೋಂಕಿನ ಪ್ರಮಾಣ ನಮ್ಮಲ್ಲಿ ಇಲ್ಲ, ಹೀಗಾಗಿ ಬೇರೆ ರಾಜ್ಯಗಳ ಕಠಿಣ ಕ್ರಮಗಳ ಬಗ್ಗೆ ಗಮನಿಸುತ್ತಿದ್ದೇವೆ. ಇಲ್ಲೂ ಇಲ್ಲಿನ ಪರಿಸ್ಥಿತಿ ನೋಡಿಕೊಂಡು ಕಠಿಣ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

ಕೋವಿಡ್ -19 ರೋಗಿಗಳ ಮನೆಬಾಗಿಲಿಗೆ ಉಚಿತ ಆಹಾರ ಸೇವೆ: ವಡೋದರಾದ ಈ ಉದಾರ ವ್ಯಕ್ತಿಯ ಸುದ್ದಿ ವೈರಲ್

ಕೆಲ ಜಿಲ್ಲೆಗಳಲ್ಲಿ ರೆಮೆಡಿಸ್ವಿಯರ್ ಇಂಜಕ್ಷನ್ ಕೊರತೆಯಿದೆ ಎಂಬ ವಿಚಾರವಾಗಿ, ನಮ್ಮ ರಾಜ್ಯದಲ್ಲಿ ರೆಮೆಡಿಸ್ವಿಯರ್ ತಯಾರು ಮಾಡುವ ಮೂರೂ ಸಂಸ್ಥೆಗಳಿವೆ.  ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ರೆಮೆಡಿಸ್ವಿಯರ್ ಕೊರತೆಯಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರಿಗೆ ಬೇಕಾದರೆ ತಕ್ಷಣ ವ್ಯವಸ್ಥೆ ಮಾಡುತ್ತೇವೆ. ಯಾವುದೇ ರೆಮೆಡಿಸ್ವಿಯರ್, ಆಕ್ಸಿಜನ್ ಕೊರತೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಾವಿನ ಪ್ರಮಾಣ ಹೆಚ್ಚಳವಾಗುತ್ತಿರುವ ವಿಚಾರವಾಗಿ, ಸಾವಿನ ಪ್ರಮಾಣವನ್ನು ಎಷ್ಟು ಸೋಂಕಿತರಲ್ಲಿ ಎಷ್ಟು ಜನರ ಸಾವಾಗಿದೆ ಅಂತ ಅಳೆಯಬೇಕು. ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಅರ್ಧದಷ್ಟೂ ಇಲ್ಲ. 0.5% ಅಥವಾ 0.6% ರಷ್ಟು ಸಾವಿನ ಪ್ರಮಾಣ ಸದ್ಯ ಇದೆ.  ಇದನ್ನು ಇನ್ನಷ್ಟು ಕಡಿಮೆ ಮಾಡುವ ಗುರಿ ಇದೆ ಎಂದರು.

ಮುಂದುವರೆದ ಅವರು, ವಲಯವಾರು ಕೊರೋನಾ ನಿಯಂತ್ರಣಕ್ಕೆ ಸಚಿವರು ಶ್ರಮ ಹಾಕ್ತಿದಾರೆ. ಜನರ ಸಹಭಾಗಿತ್ವ, ಸಹಕಾರ ಅತ್ಯಂತ ಅಗತ್ಯ. ಹೀಗಾಗಿ ಜನರು ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.

ಏಪ್ರಿಲ್ 18 ರಂದು ನಡೆಯುವ ಸರ್ವಪಕ್ಷ ಸಭೆ ವಿಚಾರವಾಗಿ, ವಿರೋಧ ಪಕ್ಷದ ನಾಯಕರುಗಳ ಟೀಕೆ ಬಗ್ಗೆ ಮಾತಾಡಲ್ಲ. ಆದರೆ ಅವ್ರು ಬಂದು ಸರ್ಕಾರಕ್ಕೆ ಸಲಹೆ ಕೊಡಲಿ. ನಾನು ಅವ್ರು ಬಂದು ಸಲಹೆ ಕೊಡಿ ಎಂದು ಕೇಳಬಹುದು ಇದು ಬಿಟ್ಟು ನಾನು ಏನನ್ನೂ ಮಾತನಾಡಲ್ಲ ಎಂದರು.
Published by: Latha CG
First published: April 15, 2021, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories