Corona Vaccine: ಡಿಸೆಂಬರ್​ ಅಂತ್ಯದೊಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡುತ್ತೇವೆ; ಆರೋಗ್ಯ ಸಚಿವ ಸುಧಾಕರ್

ಯಾವುದೇ ಕಾರಣಕ್ಕೂ ಮೂರನೇ ಅಲೆ ಬರಬಾರದು. ಅದಕ್ಕೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡಿದ್ದೇವೆ. ಆದರೆ ಮೂರನೆ ಅಲೆ ಬಾರದಂತೆ ತಡೆಯಬೇಕಿದೆ ಎಂದರು.

ಡಾ.ಕೆ. ಸುಧಾಕರ್.

ಡಾ.ಕೆ. ಸುಧಾಕರ್.

 • Share this:
  ಬೆಂಗಳೂರು(ಆ.30): ಇವತ್ತು ಕೊವೀಡ್ ಸಭೆ ಕರೆದಿದ್ದೆವು. ಲಸಿಕೆ ವಿಚಾರವಾಗಿ ಸಭೆ ನಡೆಸಿದೆವು. ಆಗಸ್ಟ್​ ತಿಂಗಳಲ್ಲಿ ಒಂದು ಕೋಟಿ ಹತ್ತು ಲಕ್ಷ ಲಸಿಕೆ ನೀಡಿದ್ದೇವೆ.  ನಾನು ಮತ್ತು ಸಿಎಂ ದೆಹಲಿಯಲ್ಲಿ ಆರೋಗ್ಯ ಸಚಿವರ ಭೇಟಿ ಮಾಡಿದ್ದೆವು. ಅದರ ಪ್ರತಿಫಲವಾಗಿ‌ ಇಷ್ಟೊಂದು ಪ್ರಮಾಣದ ಲಸಿಕೆ ನೀಡಿದ್ದೇವೆ. ಇನ್ಮೇಲೆ ಪ್ರತಿದಿನ ಐದು ಲಸಿಕೆ‌ನೀಡುತ್ತೇವೆ. ಅದನ್ನು ದ್ವಿಗುಣ ಮಾಡುವ ಗುರಿಯಿದೆ. ಲಸಿಕಾ ಉತ್ಸವ ಅಂತ ಕಾರ್ಯಕ್ರಮ ‌ಮಾಡುವ ಪ್ಲಾನ್ ಇದೆ.  ಬೆಂಗಳೂರು ಸೇರಿದಂತೆ ಮಹಾನಗರದಲ್ಲಿ ಹೆಚ್ಚು ‌ಲಸಿಕೆ ಹಾಕಿದ್ದೇವೆ. ಕೆಲ ಜಿಲ್ಲೆಗಳಲ್ಲಿ ಲಸಿಕೆ ತೆಗೆದುಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ. ಅದನ್ನು ಸರಿಪಡಿಸಬೇಕಿದೆ. ಬೆಂಗಳೂರಿನ ಸ್ಲಂಗಳಲ್ಲಿ ಲಸಿಕಾ ಉತ್ಸವ ಮಾಡುತ್ತೇವೆ. ಶೀಘ್ರವಾಗಿ ಈ ಕಾರ್ಯಕ್ರಮ ರೂಪಿಸುತ್ತೇವೆ. ಕೇರಳದ ಗಡಿ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚು ‌ಮಾಡುತ್ತಿದ್ದೇವೆ. ಮೊದಲ ಪ್ರಾಶಸ್ತ್ಯ ದಲ್ಲಿ ಲಸಿಕೆ ನೀಡುತ್ತೇವೆ. ರಾಜ್ಯದ ಎಲ್ಲ ಜನತೆಗೆ ಡಿಸೆಂಬರ್ ಅಂತ್ಯದ ಒಳಗೆ ಲಸಿಕೆ ನೀಡುತ್ತೇವೆ.  ಮಕ್ಕಳಿಗೆ ಲಸಿಕೆ‌ ಪರವಾನಿಗೆಗೆ ಕಾಯುತ್ತಿದ್ದೇವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್​ ಹೇಳಿದರು.

  ಮೂರನೆ ಅಲೆ ಬಂದಿಲ್ಲ. ಇನ್ನೂ ಎರಡನೇ ಅಲೆ ಇದೆ. ಮಕ್ಕಳಿಗೂ ‌ಲಸಿಕೆ ಬಗ್ಗೆ ಪರವಾನಗಿ ಸಿಗಬೇಕಿದೆ. ಅನುಮತಿ ಸಿಕ್ಕರೆ ಮಕ್ಕಳಿಗೂ ಲಸಿಕೆ ನೀಡಲಾಗುವುದು. ಕೆಲವು ತಾಂತ್ರಿಕ ಸಮಸ್ಯೆಯಾಗಿದೆ. ಮೊದಲ ಡೋಸ್ ಪಡೆಯುವಾಗ ಒಂದು ನಂಬರ್ ಕೊಡ್ತಾರೆ. 2ನೇ ಡೋಸ್ ವೇಳೆ ಮತ್ತೊಂದು ನಂಬರ್ ನೀಡ್ತಾರೆ. ಜನರ ಈ ನಡೆ ಸಮಸ್ಯೆಯನ್ನ ತಂದಿದೆ.  ಬೆಂಗಳೂರಿನಲ್ಲಿ ಉತ್ತಮ ನಡೆ ತೆಗೆದುಕೊಂಡಿದ್ದೇವೆ. ಸರ್ಕಾರದ ಜೊತೆ ಜನರು ಕೈಜೋಡಿಸಬೇಕು ಎಂದರು.

  ಮೂರನೇ ಅಲೆ ಕೆಲವು ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ರಾಜ್ಯದಲ್ಲಿ ಮೂರನೇ ಅಲೆ ಭಾದಿಸಬಾರದು. ಆರೋಗ್ಯ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಅಲೆ ಎದುರಾಗದಂತೆ ನಾವು ತಡೆಯಬೇಕಿದೆ ಎಂದು ಹೇಳಿದರು.

  ಇದನ್ನೂ ಓದಿ:ವಿವಾದಕ್ಕೆ ಕಾರಣವಾದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಾರ್ಕಿಂಗ್ ಆದೇಶ; ಹಿಂದೂಗಳಲ್ಲದವರಿಗೆ ದೇವರಗದ್ದೆಯಲ್ಲಿ ಪಾರ್ಕಿಂಗ್ ನಿಷೇಧ

  ಶಿಕ್ಷಣ ಕ್ಷೇತ್ರದಲ್ಲಿ ಗಟ್ಟಿ ನಿರ್ಧಾರ ಮಾಡಿದ್ದೇವೆ. 9ರ ನಂತರದ ಶಿಕ್ಷಣಕ್ಕೆ ಅವಕಾಶ ಕೊಟ್ಟಿದ್ದೇವೆ. 6 ರಿಂದ 8 ರವರೆಗೆ ತರಗತಿ ಆರಂಭವಾಗಬೇಕು. ಇಂದು ಸಭೆಯಲ್ಲಿ ಇದರ ಚರ್ಚೆಯಾಗಿದೆ. ಸಂಜೆ ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧರಿಸುತ್ತೇವೆ.  ಪೋಷಕರಿಂದಲೂ ಶಾಲೆ ಪ್ರಾರಂಭಕ್ಕೆ ಒತ್ತಡವಿದೆ. ಪ್ರಸ್ತುತ ಶಾಲೆ ತೆರೆದಿರುವುದರಿಂದ ಸಮಸ್ಯೆಯಾಗಿಲ್ಲ. ಹಾಗಾಗಿ 6 ರಿಂದ 8ನೇ ತರಗತಿ ತೆರೆಯುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಸಿಎಂ ಸಭೆಯಲ್ಲಿ ಒಂದು ನಿರ್ಧಾರ ತೆಗೆದುಕೊಳ್ತೇವೆ ಎಂದರು.

  ಯಾವುದೇ ಕಾರಣಕ್ಕೂ ಮೂರನೇ ಅಲೆ ಬರಬಾರದು. ಅದಕ್ಕೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡಿದ್ದೇವೆ. ಆದರೆ ಮೂರನೆ ಅಲೆ ಬಾರದಂತೆ ತಡೆಯಬೇಕಿದೆ. ಈಗಾಗಲೇ ಶಾಲೆ ಕಾಲೇಜು ಆರಂಭವಾಗಿದೆ. ಐದು ಮತ್ತು ಆರನೇ ತರಗತಿ ಆರಂಭ ಮಾಡಬೇಕಿದೆ. ಪೋಷಕರಿಂದ ಮಕ್ಕಳ ಭವಿಷ್ಯದ ಬಗ್ಗೆ ಒತ್ತಡವಿದೆ . ಹಾಗಾಗಿ ಇದರ ಬಗ್ಗೆ ಚಿಂತನೆ ‌ನಡೆಸಿದ್ದೇವೆ. ಈಗ ಶಾಲೆ ಆರಂಭದಿಂದ ಯಾವುದೇ ನೆಗೆಟಿವ್ ಅಂಶ ಬಂದಿಲ್ಲ. ಆದರಿಂದ ನಮಗೆ ಧೈರ್ಯ ಬಂದಿದೆ. ವಿಮಾನ ನಿಲ್ದಾಣದಲ್ಲಿ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳುತ್ತೇವೆ. ಅದರ ಜೊತೆಗೆ ಎರಡನೆ ಡೋಸ್ ನೀಡಲು‌ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

  ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕೆ ಡ್ರೈವ್ ಆಗಿದೆ. ಇಲ್ಲಿಯವರೆಗೆ 4 ಕೋಟಿ ಲಸಿಕೆ ವಿತರಣೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಹಿಂಜರಿಕೆಯಿದೆ. ಜನರೇ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಬೀದರ್,ಯಾದಗಿರಿ,ಕಲಬುರಗಿಯಲ್ಲಿ ಹಿಂಜರಿಯುತ್ತಿದ್ದಾರೆ. ಇಲ್ಲಿ ಲಸಿಕೆ ವಿತರಣೆ ಹೆಚ್ಚಳ ಮಾಡುತ್ತೇವೆ. ಬೆಂಗಳೂರಿನ ಕೊಳಗೇರಿಗಳಲ್ಲಿ ಲಸಿಕಾ ಮೇಳ ಮಾಡ್ತೇವೆ. ಸ್ಲಂ ಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡುತ್ತೇವೆ. ಗಡಿಭಾಗದ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚಳ ಮಾಡುತ್ತೇವೆ. ಕೇರಳ ಗಡಿಯ 20 ಕಿ.ಮೀ ವ್ಯಾಪ್ತಿಯಲ್ಲಿ ಲಸಿಕೆ ಹಾಕಲಾಗುತ್ತದೆ. ಅಲ್ಲಿರುವ ಜನರಿಗೆ ಲಸಿಕೆ ಹಾಕಲು ಮೊದಲ ಪ್ರಾಶಸ್ತ್ಯ ಇದೆ.  ಡಿಸೆಂಬರ್ 31 ರೊಳಗೆ ಎರಡು ಡೋಸ್ ಮುಗಿಸುತ್ತೇವೆ ಎಂದರು.

  ಇದನ್ನೂ ಓದಿ:ಭಜರಂಗಿ ಭಾಯ್‍ಜಾನ್ ಸಿನಿಮಾದ ಪಾತ್ರಕ್ಕೆ ಸ್ಪೂರ್ತಿಯಾಗಿದ್ದ “ಕರಾಚಿ ಸೆ“ ವಿಡಿಯೋ ಹರಾಜಿಗೆ..!

  ರಾಜ್ಯಕ್ಕೆ ಮೂರನೇ ಅಲೆ ಕಾಲಿಟ್ಟಿಲ್ಲ. ಕಾಲಿಡಬಾರದೆಂದೇ ಕ್ರಮಗಳನ್ನ ತೆಗೆದುಕೊಳ್ತೇವೆ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವ ವಿಚಾರವಾಗಿ,  ಧಾರ್ಮಿಕ ಸಾಮರಸ್ಯ ಇರಬೇಕು. ಯಾವುದೇ ಹಬ್ಬಗಳಿಗೆ ಸರ್ಕಾರದ ವಿರೋಧವಿಲ್ಲ. ಎಲ್ಲರ ಹಿತವನ್ನ ಸರ್ಕಾರ ಕಾಪಾಡಬೇಕು. ಪರಿಸ್ಥಿತಿ ಈಗ ಸರಿಯಿಲ್ಲ. ನಾವೇ ಮಾರ್ಗಸೂಚಿಗಳನ್ನ ಮಾಡಿಕೊಂಡಿದ್ದೇವೆ. ಆ ಮಾರ್ಗಸೂಚಿಗಳನ್ನ ನಾವೇ ಪಾಲನೆ ಮಾಡಬೇಕು ಎಂದರು.

  ಜನಾಶೀರ್ವಾದ ಯಾತ್ರೆಯಲ್ಲಿ‌ಜನ ಸೇರಿರುವ ವಿಚಾರವಾಗಿ,  ಜನ ಸೇರಬಾರದೆಂದು ನಾವು ‌ಹೇಳಿದ್ದೆವು. ಚುನಾವಣಾ ಆಯೋಗಕ್ಕೂ ಮನವಿ‌ ಮಾಡಿದ್ದೆವು. ಚುನಾವಣೆ ಸದ್ಯಕ್ಕೆ ಬೇಡ ಮುಂದೂಡಿ ಎಂದಿದ್ದೆವು. ಆದರೆ ಆಯೋಗ ಜವಾಬ್ದಾರಿಯನ್ನ ಹಾಕಿದೆ. ಈಗ ನಾವು ಏನು ಮಾಡಬೇಕು? ಈ ಎಲ್ಲದರ ನಡುವೆಯೂ ಮೂರನೇ ಅಲೆಯನ್ನು ತಡೆಯಬೇಕಿದೆ. ಗಣೇಶ ಹಬ್ಬ ಆಚರಣೆ ಬಗ್ಗೆ ಸಂಜೆ ತೀರ್ಮಾನ ತೆಗೆದುಕೊಳ್ತೇವೆ ಎಂದು ಹೇಳಿದರು.
  Published by:Latha CG
  First published: