HOME » NEWS » State » HEALTH MINISTER K SUDHAKAR SAYS REASON FOR TOUGH RULES IMPOSE IS STATE PEOPLE NEGLIGENCE LG

ಕಠಿಣ ಕ್ರಮ ಜಾರಿಗೆ ಜನರ ನಿರ್ಲಕ್ಷ್ಯವೇ ಕಾರಣ; ಆರೋಗ್ಯ ಸಚಿವ ಸುಧಾಕರ್​ ಬೇಜವಾಬ್ದಾರಿ ಹೇಳಿಕೆ?

ಪ್ರತಿಪಕ್ಷಗಳು ಹೇಳಿದ್ದನ್ನು ಅಲ್ಲಗಳೆಯಲ್ಲ ನಾನು. ಮುಂದುವರೆದ ದೇಶಗಳಲ್ಲೂ ಹೆಚ್ಚು ಸಾವುಗಳಾಗಿವೆ.  ಅಲ್ಲಿನ ಸರ್ಕಾರಗಳು ವಿಫಲ ಅಂತ ಹೇಳಬಹುದಾ? ಹಾಗೆ ಹೇಳಲು ಆಗಲ್ಲ. ಇದು ಸಾಂಕ್ರಾಮಿಕ ರೋಗ. ಇದನ್ನು ಪರಿಶ್ರಮ ಹಾಕಿ ತಡೆಯಬೇಕು ಎಂದು ಹೇಳಿದರು.

news18-kannada
Updated:April 20, 2021, 11:00 AM IST
ಕಠಿಣ ಕ್ರಮ ಜಾರಿಗೆ ಜನರ ನಿರ್ಲಕ್ಷ್ಯವೇ ಕಾರಣ; ಆರೋಗ್ಯ ಸಚಿವ ಸುಧಾಕರ್​ ಬೇಜವಾಬ್ದಾರಿ ಹೇಳಿಕೆ?
ಡಾ.ಕೆ. ಸುಧಾಕರ್.
  • Share this:
ಬೆಂಗಳೂರು(ಏ.20):  ಜನತಾ ಕರ್ಫ್ಯೂ, ಲಾಕ್​ಡೌನ್, ಸೀಲ್​ಡೌನ್​ಗಿಂತ ಗಾಳಿಯಿಂದ, ಗುಂಪು ಸೇರುವುದರಿಂದ ಕೊರೋನಾ ಬರುತ್ತಿದೆ. ಜನರು ನಿರ್ಲಕ್ಷ್ಯ ವಹಿಸಿದ್ದರಿಂದ ಕಠಿಣ ನಿಯಮಗಳನ್ನು ಜಾರಿ ಮಾಡುವ ಅನಿವಾರ್ಯತೆ ಇಂದು ಸರ್ಕಾರಕ್ಕೆ ಎದುರಾಗಿದೆ. ಹೀಗಾಗಿ ಜನರ ಜೀವ ಉಳಿಸಲು ಸರ್ಕಾರ ಇಂದು ಕಠಿಣ ಕ್ರಮ ಜಾರಿ ಮಾಡಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.

ಎಲ್ಲದಕ್ಕಿಂತ ಹೆಚ್ಚಿನ ಪ್ರಾಶಸ್ತ್ಯ ಕೊಡೋದು ಜೀವಕ್ಕೆ. ಸಂಜೆ ವೇಳೆಗೆ ಎಲ್ಲವೂ ಗೊತ್ತಾಗಲಿದೆ. ಬೆಂಗಳೂರಿಗೆ ಪ್ರತ್ಯೇಕ ನಿಯಮಗಳನ್ನು ಜಾರಿಗೆ ತರುತ್ತೇವೆ. ಕೋವಿಡ್ ಹೆಚ್ಚಿರುವ ಉಳಿದ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮ ಜಾರಿ ಮಾಡಲಾಗುತ್ತದೆ. ಇವತ್ತು ರಾಜ್ಯಪಾಲರ ನೇತೃತ್ವದಲ್ಲಿ ಸಭೆ ಇದೆ.  ಇವತ್ತಿನ ಸಭೆಯಲ್ಲಿ ಕಠಿಣ ನಿಯಮಗಳ ಜಾರಿ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೂರೇ ತಿಂಗಳಿನಲ್ಲಿ 21 ಕೆಜಿ ಅಕ್ರಮ ಚಿನ್ನ ಸಾಗಾಟ; ಬೆಚ್ಚಿಬಿದ್ದ ಕಸ್ಟಮ್ಸ್​ ಅಧಿಕಾರಿಗಳು

ಸರ್ಕಾರದ ಜೊತೆ ವಿರೋಧ ಪಕ್ಷಗಳೂ ಬೆಂಬಲಕ್ಕೆ ನಿಲ್ಲಬೇಕು. ಆರೋಪ ಪ್ರತ್ಯಾರೋಪ ಮಾಡೋದು ಸರಿಯಲ್ಲ. ನಿನ್ನೆ ಸಭೆಯಲ್ಲಿ ಪ್ರತಿಪಕ್ಷಗಳು ಕೆಲವು ಸತ್ಯ ಹೇಳಿದ್ದಾರೆ. ಖೇದಕರ ವಿಷಯ ಹೇಳಿದ್ದಾರೆ. ಇವತ್ತು ಸೋಂಕಿತರ ಪ್ರಮಾಣ ಹೆಚ್ಚಿದೆ. ಐಸಿಯು ಬೆಡ್ ಒದಗಿಸಲು ಆಗುತ್ತಿಲ್ಲ ಎಂದಿದ್ದಾರೆ. ಪ್ರತಿಪಕ್ಷಗಳು ಹೇಳಿದ್ದನ್ನು ಅಲ್ಲಗಳೆಯಲ್ಲ ನಾನು. ಮುಂದುವರೆದ ದೇಶಗಳಲ್ಲೂ ಹೆಚ್ಚು ಸಾವುಗಳಾಗಿವೆ.  ಅಲ್ಲಿನ ಸರ್ಕಾರಗಳು ವಿಫಲ ಅಂತ ಹೇಳಬಹುದಾ? ಹಾಗೆ ಹೇಳಲು ಆಗಲ್ಲ. ಇದು ಸಾಂಕ್ರಾಮಿಕ ರೋಗ. ಇದನ್ನು ಪರಿಶ್ರಮ ಹಾಕಿ ತಡೆಯಬೇಕು ಎಂದು ಹೇಳಿದರು.

ಸದ್ಯದ ಕ್ರಮಗಳು ಸಾಲೋದಿಲ್ಲ ಅಂತ ಒಪ್ಪುತ್ತೇನೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇವೆ.  ಆದ್ರೆ ಓವರ್ ನೈಟ್ ವೈದ್ಯರನ್ನು ಸೃಷ್ಟಿಸಲು ಆಗಲ್ಲ.  ಆರೋಗ್ಯ ಕಾರ್ಯಕರ್ತರನ್ನು ಸೃಷ್ಟಿಸಲು ಆಗಲ್ಲ ಎಂದರು.

ಇನ್ನು, ರೇಣುಕಾಚಾರ್ಯ ವಿಚಾರ ನನಗೆ ಗೊತ್ತಿಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ. ಬಹುಶ: ಅವರು ಬೇರೆ ಆಸ್ಪತ್ರೆಗೆ ದಾಖಲಾಗಲು ಬಂದಿರಬಹುದು.  ಪಾಸಿಟಿವ್ ರೋಗಿಗಳನ್ನ ಒಂದೆಡೆಯಿಂದ ಮತ್ತೊಂದು ಕಡೆಗೆ ನಾವೇ ಬೇರೆ ಕಡೆ ಶಿಫ್ಟ್ ಮಾಡಿದೀವಿ ಖುದ್ದು ಅವ್ರೇ ಬಂದಿರುವ ಬಗ್ಗೆ ತಿಳ್ಕೊಂಡು ಮಾತಾಡ್ತೇನೆ ಎಂದು ಹೇಳಿದರು.
ಜನ ಗುಂಪು ಸೇರಬಾರದು. ಗುಂಪು ಸೇರೋದ್ರಿಂದಲೇ ಕೋವಿಡ್ ಬರ್ತಿರೋದು. ಕ್ಲೋಸ್ಡ್ ಸರ್ಕ್ಯೂಟ್ ನಲ್ಲಿ ಗುಂಪಿದ್ರೆ ಗಾಳಿ ಮೂಲಕವೂ ವೈರಸ್ ಹರಡುತ್ತೆ. ಡ್ರಾಪ್ ಲೆಟ್ ಗಳ‌ ಮೂಲಕವೂ ಹರಡುತ್ತೆ. ಇದಕ್ಕೆ ಕಡಿವಾಣ ಹಾಕಬೇಕು. ಕಠಿಣ ನಿಯಮಗಳನ್ನು ಜಾರಿ ಮಾಡುವ ಅವಶ್ಯಕತೆ ಇದೆ.  ಸಂಜೆ ಹೊತ್ತಿಗೆ ಮಾರ್ಗಸೂಚಿ ಬರುತ್ತೆ ಎಂದು ಸುಧಾಕರ್ ಸುಳಿವು ಕೊಟ್ಟರು.
Published by: Latha CG
First published: April 20, 2021, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories