HOME » NEWS » State » HEALTH MINISTER K SUDHAKAR SAYS IF PEOPLE NOT CO OPERATE THEN LOCK DOWN WILL BE IMPOSED IN KARNATAKA LG

ಜನರು ಸಹಕಾರ ನೀಡದಿದ್ದರೆ ಲಾಕ್​ಡೌನ್ ಅನಿವಾರ್ಯ; ಎಚ್ಚರಿಕೆ ಕೊಟ್ಟ ಸಚಿವ ಸುಧಾಕರ್

ಮೈಕ್ರೊ ಕಂಟೋನ್ಮೆಂಟ್ ಝೋನ್ ಹೆಚ್ಚು ಮಾಡಬೇಕು ಅಂತ ಪ್ರಧಾನಿ ಸಲಹೆ‌ ಕೊಟ್ಟಿದ್ದಾರೆ. ಇನ್ನಷ್ಟು ಗಂಭೀರ‌ ಯೋಚನೆ ಮಾಡಿ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿ. ಪ್ರಧಾನಿ ಕೊಟ್ಟಿರುವ ಸೂಚನೆ ಪಾಲನೆ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಮೈಕ್ರೋ ಕಂಟೇನ್ಮೆಂಟ್ ಝೋನ್ ಹೆಚ್ಚಳ ಮಾಡುತ್ತೇವೆ. ಎರಡನೇ ಅಲೆ ಮಣಿಸುವಂತಹ ಕೆಲಸ ಮಾಡುತ್ತೇವೆ ಎಂದು ಹೇಳಿದರು.

news18-kannada
Updated:April 11, 2021, 12:25 PM IST
ಜನರು ಸಹಕಾರ ನೀಡದಿದ್ದರೆ ಲಾಕ್​ಡೌನ್ ಅನಿವಾರ್ಯ; ಎಚ್ಚರಿಕೆ ಕೊಟ್ಟ ಸಚಿವ ಸುಧಾಕರ್
ಡಾ. ಕೆ ಸುಧಾಕರ್
  • Share this:
ಬೆಂಗಳೂರು(ಏ.11): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ನಿನ್ನೆಯಿಂದ ಮುಂದಿನ 10 ದಿನಗಳವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಜೊತೆಗೆ ಟಫ್​ ರೂಲ್ಸ್ ಜಾರಿಗೊಳಿಸಿದೆ. ಈ ಕುರಿತಾಗಿ ಮಾತನಾಡಿರುವ ಆರೋಗ್ಯ ಸಚಿವ ಕೆ.ಸುಧಾಕರ್, ಜನರು ಸಹಕಾರ ನೀಡದಿದ್ದರೆ ಲಾಕ್​ಡೌನ್​ ಅನಿವಾರ್ಯ ಎನ್ನುವ ಮಾತನ್ನು ಹೇಳಿದ್ದಾರೆ. ಹೀಗಾಗಿ ಜನರು ಕಟ್ಟುನಿಟ್ಟಾಗಿ ಕೊರೋನಾ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಲಾಕ್​ಡೌನ್ ಮಾಡುವುದು ಅನಿವಾರ್ಯವಾಗುತ್ತದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಯಾಕೆಂದರೆ ಜನರು ಉದಾಸೀನತೆ ಮಾಡಿದಾಗ ಅಲ್ಲಿ ಲಾಕ್ ಡೌನ್ ನಿರ್ಧಾರ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಬೇಡ ಅಂದರೆ ಜನರು ಉದಾಸೀನ ಮಾಡಬಾರದು.  ಸರ್ಕಾರ ಮಾಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಲಾಕ್​ಡೌನ್​​ಗೆ  ಅವಕಾಶ ಮಾಡಿಕೊಡಬೇಡಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದರು.

ಮುಂದುವರೆದ ಅವರು, ರಾತ್ರಿ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಪರಿಶೀಲಿಸಬೇಕು ಅಂತ ಹೋಗಿದ್ದೆ. 108 ಆ್ಯಂಬುಲೆನ್ಸ್​​​ಗೆ  ಸಂಬಂಧಿಸಿದ ದೂರುಗಳನ್ನು ನಿಭಾಯಿಸಲು ಸೂಚಿಸಲಾಗಿದೆ.  ಜನರು ಜಾಗೃತರಾದರೆ ಯಾವುದೇ ಲಾಕ್ ಡೌನ್ ಅಗತ್ಯ ಬರುವುದಿಲ್ಲ.  ಸಾರ್ವಜನಿಕರ ಮೇಲೆ ಜವಾಬ್ದಾರಿ ಇದೆ. ಕೊರೋನಾ ನಿಯಂತ್ರಣವನ್ನು ಜನರೂ ಮಾಡಿದರೆ ನಾವು ಇನ್ನಷ್ಟು ಸಬಲವಾಗಿರುತ್ತೇವೆ ಎಂದರು.

ಕೊರೋನಾ ಸೈಕಲ್ ಮುರಿಯಲು ಹಲವು ದೇಶದಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ 3 ದಿನ ಲಾಕ್ ಡೌನ್ ಮಾಡಿದ್ದಾರೆ.  ಅಂಥ ಪರಿಸ್ಥಿತಿ ನಮಗೆ ಬರೋದು ಬೇಡ ಅಂದ್ರೆ ಜನರು ಸಹಕಾರ ನೀಡಬೇಕು.  ಬದುಕು ಕಟ್ಟಿಕೊಳ್ಳುವ ಆರ್ಥಿಕ ಚಟುವಟಿಕೆ ಮುಂದುವರೆಯಬೇಕು ಅಂದ್ರೆ ಜನರು ಕೊರೋನಾ ನಿಯಮ ಪಾಲನೆ ಮಾಡಬೇಕು ಎಂದು ಒತ್ತಿ ಒತ್ತಿ ಹೇಳಿದರು.

Coronavirus Updates: ದೇಶದಲ್ಲಿ ಒಂದೇ ದಿನ ಒಂದೂವರೆ ಲಕ್ಷಕ್ಕೂ‌ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ

ಇನ್ನು, ಇಂದಿನಿಂದ ಏ.14ರವರೆಗೆ‌ ಲಸಿಕಾ ಉತ್ಸವ ಆಚರಣೆ ಮಾಡುತ್ತಿದ್ದೇವೆ. ಕರ್ನಾಟಕದ ಲಸಿಕಾ ಉತ್ಸವಕ್ಕೆ ಇಲ್ಲಿಂದ ಚಾಲನೆ ನೀಡಿದ್ದೇವೆ. ಎಲ್ಲ ಧರ್ಮದ ಮಹಿಳೆಯರಿಗೆ ಲಸಿಕೆ ನೀಡಲಾಗಿದೆ. ಸಾಮಾಜಿಕ‌ ಸುಧಾರಕರಾದ ಜ್ಯೋತಿ ಬಾಪುಲೆ ಮಹಿಳಾ ಸಬಲೀಕರಣಕ್ಕೆ ಹೋರಾಟ ಮಾಡಿದ ಮಹಾನುಭಾವರು.  ಅವರ ಆಲೋಚನೆಗೆ ಹೆಚ್ಚು ಶಕ್ತಿ ನೀಡಬೇಕು ಎನ್ನುವ ಯೋಚನೆ ನಮ್ಮ ಸರ್ಕಾರದ್ದು.  ಎಲ್ಲಾ ಧರ್ಮದ ಮಹಿಳೆಯರಿಗೆ ಸಾಂಕೇತಿಕವಾಗಿ ಲಸಿಕೆ ನೀಡಿ ಚಾಲನೆ ನೀಡಲಾಗಿದೆ. ಪ್ರಧಾನಿ ಕೂಡ ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಮೈಕ್ರೊ ಕಂಟೋನ್ಮೆಂಟ್ ಝೋನ್ ಹೆಚ್ಚು ಮಾಡಬೇಕು ಅಂತ ಪ್ರಧಾನಿ ಸಲಹೆ‌ ಕೊಟ್ಟಿದ್ದಾರೆ. ಇನ್ನಷ್ಟು ಗಂಭೀರ‌ ಯೋಚನೆ ಮಾಡಿ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿ. ಪ್ರಧಾನಿ ಕೊಟ್ಟಿರುವ ಸೂಚನೆ ಪಾಲನೆ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಮೈಕ್ರೋ ಕಂಟೇನ್ಮೆಂಟ್ ಝೋನ್ ಹೆಚ್ಚಳ ಮಾಡುತ್ತೇವೆ. ಎರಡನೇ ಅಲೆ ಮಣಿಸುವಂತಹ ಕೆಲಸ ಮಾಡುತ್ತೇವೆ ಎಂದು ಹೇಳಿದರು.ಬೆಡ್ ಸಿಗದೇ ರೋಗಿ ಸಾವನ್ನಪ್ಪಿದ ವಿಚಾರವಾಗಿ,  ಈ ಬಗ್ಗೆ ಗೊತ್ತಿಲ್ಲ, ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಇದೇ ವೇಳೆ ಸಚಿವ ಸುಧಾಕರ್ ಅವರು, ಮತ್ತೆ ಲಾಕ್​ಡೌನ್​ ಮಾಡುವ ಎಚ್ಚರಿಕೆಯನ್ನು ನೀಡಿದರು. ಜನ ಸಹಕಾರ ನೀಡದೇ ಹೋದ್ರೆ ಲಾಕ್ ಡೌನ್ ಅನಿವಾರ್ಯ.  ಈಗಾಗಲೇ ಮಹಾರಾಷ್ಟ್ರದಲ್ಲಿ 3 ದಿನ ಲಾಕ್ ಡೌನ್ ಮಾಡಲಾಗಿದೆ. ನಮಗೆ ಇಂತಹ ಪರಿಸ್ಥಿತಿ ಬರಬಾರದು ಅಂದ್ರೆ ಜನ ಸಹಕಾರ ನೀಡಬೇಕು. ಮಾರ್ಗಸೂಚಿ ಪಾಲನೆ ಮಾಡಬೇಕು. ಕೊರೋನಾ ಸೈಕಲ್ ಮುರಿಯಲು ಸಹಕಾರ ನೀಡಬೇಕು. ಇಲ್ಲದೆ ಹೊದ್ರೆ ಲಾಕ್ ಡೌನ್ ಅನಿವಾರ್ಯವಾಗುತ್ತದೆ ಎಂದು ಹೇಳಿದರು.
Published by: Latha CG
First published: April 11, 2021, 12:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories