ಕೋವಿಡ್​ ಸೋಂಕಿತರು ಕ್ಷಯ ರೋಗ ತಪಾಸಣೆ ಮಾಡಿಸಿಕೊಳ್ಳಿ; ಆರೋಗ್ಯ ಸಚಿವ ಸುಧಾಕರ್

ಯಾರೆಲ್ಲಾ ಸೋಂಕಿತರಾಗಿದ್ದು ಗುಣಮುಖರಾಗಿದ್ದೀರಾ ಅವರೆಲ್ಲಾ ತಪಾಸಣೆ ಮಾಡಿಸಿಕೊಳ್ಳಿ. ಕೋವಿಡ್ ಬಂದಿರೋರೆಲ್ಲಾ ಕ್ಷಯ ರೋಗಿಗಳು ಅಂತಲ್ಲಾ ಮೊದಲೇ ತಪಾಸಣೆ ಮಾಡಿಸಿಕೊಂಡ್ರೆ, ಅದನ್ನ ಆರಂಭದಲ್ಲೇ ತಡೆಯಬಹುದು ಎಂದರು.

ಸಚಿವ ಕೆ. ಸುಧಾಕರ್.

ಸಚಿವ ಕೆ. ಸುಧಾಕರ್.

  • Share this:
    ಬೆಂಗಳೂರು(ಆ.17): ದೇಶದಲ್ಲಿ ವಿನೂತನ ಪ್ರಯತ್ನವನ್ನು ಕರ್ನಾಟಕ ಸರ್ಕಾರ ಮಾಡುತ್ತಿದೆ. ಸಕ್ರಿಯವಾಗಿರೋ ಕ್ಷಯ ರೋಗ ಪತ್ತೆ ಮಾಡುವುದು. ಕೋವಿಡ್ ಬಂದವರಿಂದ ಅದನ್ನು ಪತ್ತೆ ಹಚ್ಚಬೇಕಿದೆ. ಇದೇ 14ರಿಂದ 30ರವರೆಗೂ ನಡೆಯಲಿದೆ. 28 ಲಕ್ಷ ಜನ ಗುಣಮುಖರಾಗಿದ್ದಾರೆ. ಕೋವಿಡ್​ನಲ್ಲಿ ಕಪ್ಪು ಶಿಲೀಂಧ್ರಗಳ ಪತ್ತೆ ಮಾಡುವ ತಪಾಸಣೆ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಕ್ಷಯ ರೋಗ ಪತ್ತೆ ಮಾಡಲಾಗುವುದು. ಶ್ವಾಸಕೋಶ ಸೋಂಕಿನಿಂದ ಬರುವುದು ಕ್ಷಯ ರೋಗ. ಹಾಗಾಗಿ ಯಾರೆಲ್ಲಾ ಗುಣಮುಖರಾಗಿದ್ದಾರೆ ಅವರಿಗೆ ದೊಡ್ಡ ಮಟ್ಟದಲ್ಲಿ ವ್ಯಾಪಿಸದ ರೀತಿಯಲ್ಲಿ ಅವರ ಅಭಿಪ್ರಾಯದಂತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

    ಕಳೆದ ಐದು ವರ್ಷದಿಂದ ಕ್ಷಯ ರೋಗ ಹೆಚ್ಚಾಗಿದೆ. ಶೇ.33ರಷ್ಟು ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೂ ನಾವು ಯಾವ್ಯಾವ ವೃತ್ತಿಯಲ್ಲಿ ಹೆಚ್ಚು ಬರಲಿದೆ ಅಂತ ತಪಾಸಣೆ ಮಾಡಿದ್ದೇವೆ. ಆರ್ಥಿಕ ಸ್ಥಿತಿಗತಿಗಳ ಪ್ರಕಾರವೂ ಸರ್ವೇ ಮಾಡಲಾಗಿದ್ದು, ತಪಾಸಣೆ ಮಾಡಲಾಗಿದೆ. ಇದರ ಜೊತೆಯಲ್ಲಿ ಕೋವಿಡ್ ಬಂದವರಲ್ಲೂ ತಪಾಸಣೆ ಮಾಡಲಾಗ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇದನ್ನ ಮಾಡಲಾಗ್ತಿದೆ.

    ಯಾರೆಲ್ಲಾ ಸೋಂಕಿತರಾಗಿದ್ದು ಗುಣಮುಖರಾಗಿದ್ದೀರಾ ಅವರೆಲ್ಲಾ ತಪಾಸಣೆ ಮಾಡಿಸಿಕೊಳ್ಳಿ. ಕೋವಿಡ್ ಬಂದಿರೋರೆಲ್ಲಾ ಕ್ಷಯ ರೋಗಿಗಳು ಅಂತಲ್ಲಾ ಮೊದಲೇ ತಪಾಸಣೆ ಮಾಡಿಸಿಕೊಂಡ್ರೆ, ಅದನ್ನ ಆರಂಭದಲ್ಲೇ ತಡೆಯಬಹುದು. 3.9 ರಷ್ಟು ಜನರಿಗೆ ಕ್ಷಯ ರೋಗವಿತ್ತು. 2019-20ರಲ್ಲಿ ತಪಾಸಣೆ ಮಾಡಿದಾಗ ಕಡಿಮೆಯಾಗಿದೆ. ಕೋವಿಡ್ ಬಂದ ಹಿನ್ನೆಲೆ ತಪಾಸಣೆ ಕಡಿಮೆ ಮಾಡಲಾಗಿತ್ತು. ಹೀಗಾಗಿ ಕಡಿಮೆ ಆಗಿದೆ ಅಂತ ಭಾವಿಸಿಲ್ಲ.

    ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆ ಕಡಿಮೆಯಾಗಿದೆ ನೋಡಿ..!

    1.25ಕೋಟಿ ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. 79,938 ಜನರ ಪೈಕಿ, 2,714 ಜನರಿಗೆ ಪಾಸಿಟಿವ್ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಾಂಕ್ರಾಮಿಕ ರೋಗ ಅಂತ ಹೇಳಲು ಸಾಧ್ಯವಿಲ್ಲ. ಆದ್ರೆ ವ್ಯಕ್ತಿ ಇಂದ ಮನೆಯವರಿಗೆ ಬರುವ ಸಾಧ್ಯತೆ ಇದೆ. ಕೆಲಸ ಮಾಡುವ ಸ್ಥಳದಿಂದಲೂ ಬರುವ ಸಾಧ್ಯತೆ ಇದೆ. ಯಾರಿಗೆ ಎರಡು ವಾರಕ್ಕೂ ಹೆಚ್ಚು ಕೆಮ್ಮುತ್ತಾರೆ ಅವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮಿದ್ದರೆ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ರಾತ್ರಿ ವೇಳೆ ಜ್ವರ ಬರುವ ಸಾಧ್ಯತೆ ಇದೆ. ತೂಕ ಕೂಡ ಕಡಿಮೆಯಾಗಲಿದೆ.

    ಹೊಸ ಕಾರ್ಯಕ್ರಮ ಮಕ್ಕಳ ವಾತ್ಸಲ್ಯ, ಪ್ರೀತಿ- ಪ್ರೇಮ ಇಡುವುದು. ಮೂರನೇ ಅಲೆ ಬಂದರೆ ಮಕ್ಕಳ ಮೇಲೆ ಪರಿಣಾಮ ಬೀರುವುದು ಅಂತ ಹೇಳಲಾಗಿದೆ. ಹೊಸ ಕಾರ್ಯಕ್ರಮ ಘೋಷಣೆ ಮಾಡಲಾಗುವುದು. ಆರೋಗ್ಯ ನಂದನ ಹೆಸರಲ್ಲಿ ಯೋಜನೆ ತಯಾರಾಗ್ತಿದೆ. ಎಲ್ಲಾ ಮಕ್ಕಳಿಗೆ ತಪಾಸಣೆ ಮಾಡಲಾಗುವುದು. ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡಲಾಗುವುದು.

    ರಾಜೀವ್ ಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ನಿಯಮ ಉಲ್ಲಂಘನೆ ವಿಚಾರವಾಗಿ ಸುಧಾಕರ್​  ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಮೊದಲು ಈ ವಿಚಾರ ನನ್ನ ಗಮನದಲ್ಲಿ ಇಲ್ಲ ಎಂದು ನಿರಾಕರಿಸಲು ಮುಂದಾದರು

    ಮಂಗಳೂರಿನಲ್ಲಿ ಸೋಂಕಿಗೆ ಹೆದರಿ ಇಬ್ಬರು ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನೋವಿನ ಸಂಗತಿಯಾಗಿದೆ. ಸೋಂಕು ಬಂದ ಕೂಡಲೇ ಯಾರು ಸಾಯಲ್ಲ. ಮಾಹಿತಿ ಕೊರತೆ ಇರಬಹುದು. ಅನೇಕರು ಸೋಂಕು ಬಂದು ಗುಣಮುಖರಾಗಿದ್ದಾರೆ. ಈ ಘಟನೆ ವೈಯಕ್ತಿಕವಾಗಿ ನೋವು ತರಿಸಿದೆ. ದಂಪತಿಗಳಿಬ್ಬರು ಈ ರೀತಿ ಯತ್ನ ಮಾಡಿರೋದು ಸರಿಯಲ್ಲ. ಯಾರಿಗಾದರೂ ಸೋಂಕು ಲಕ್ಷಣ ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಇಲಾಖೆ, ವೈದ್ಯರು ನಿಮ್ಮ ಜೊತೆಯೆ ಇರ್ತಾರೆ. ಒಂದೂವರೆ ವರ್ಷದಲ್ಲಿ ಅನೇಕ ಪಾಠ ಕಲಿತಿದ್ದೇವೆ. ಯಾರೂ ಕೂಡ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಡಿ. ಸಂಪೂರ್ಣ ಲಸಿಕೆ ಪಡೆಯೋವರೆಗೂ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.

    ಇದನ್ನೂ ಓದಿ:ಸಿ.ಟಿ.ರವಿ ಶೀಘ್ರ ಸಂಪುಟ ಸಚಿವರಾಗಿ, ನನ್ನ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂಬ ಅವರ ನಂಬಿಕೆ ನಿಜವಾಗಲಿ; ಸಿದ್ದರಾಮಯ್ಯ

    ಮೂರೂವರೆ ಸಾವಿರ ಕೋಟಿ ರಾಜ್ಯ ಸರ್ಕಾರ ನೀಡಿದೆ. 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗಿದೆ. ಸಿಎಂ ಈಗಾಗಲೇ ಕೇಂದ್ರದ ಜೊತೆ ಚರ್ಚೆ ಮಾಡಿದ್ದಾರೆ. ನಮ್ಮ ಪಾಲಿಗೆ ಬರುವ ಲಸಿಕೆಗೂ ಹೆಚ್ಚು ಬೇಡಿಕೆ ಇಡಲಾಗುವುದು. ಖಾಸಗಿ ಕಂಪನಿಗಳು ಕೂಡ ಮುಂದೆ ಬರಲು ಮುಂದಾಗಿವೆ. ದೊಡ್ಡ ದೊಡ್ಡ ಕಂಪನಿಗಳ ಮುಖ್ಯಸ್ಥರ ಸಭೆ ಕರೆದಿದ್ದೇನೆ. ಸಿಎಸ್‌ಆರ್ ಫಂಡ್ ಅಡಿಯಲ್ಲಿ ಲಸಿಕೆ ಸರ್ಕಾರಕ್ಕೆ ಕೊಡಿಸುವ ಕೆಲಸ ಮಾಡುತ್ತೇನೆ. ಐಟಿ, ಬಿಟಿ ಕಂಪನಿಗಳ ಮುಖ್ಯಸ್ಥರ ಜೊತೆ ಕೂಡ ಚರ್ಚೆ ಮಾಡುತ್ತೇವೆ. ದೊಡ್ಡ ಪ್ರಮಾಣದಲ್ಲಿ ಲಸಿಕೆ ಲಭ್ಯ ಮಾಡಿಕೊಂಡು, ರಾಜ್ಯಕ್ಕೆ ಶೀಘ್ರವೇ ಲಸಿಕೆ ಪೂರೈಸಲಾಗುವುದು.

    ಪ್ರಧಾನಿಗಳು ಮತ್ತೆ ಎಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಿದ್ದಾರೆ.  2020-25 ವರ್ಷದಷ್ಟರಲ್ಲಿ ಕ್ಷಯ ರೋಗ ಮುಕ್ತ ದೇಶ ಮಾಡಬೇಕು ಅಂತ ಮೋದಿಯವರು ಕನಸು ಇಟ್ಟುಕೊಂಡಿದ್ದಾರೆ. ಅಮೃತ ಮಹೋತ್ಸವದಲ್ಲಿ ಕೂಡ ಹೇಳಿದ್ದಾರೆ. ಆರೋಗ್ಯ ಕೇಂದ್ರ ಸರಿಪಡಿಸಲು ಪ್ರತೀ ಕೇಂದ್ರಕ್ಕೆ 25 ಲಕ್ಷದಂತೆ, 150 ಕೋಟಿ ಹಣ ಬಿಡುಗಡೆ ಮಾಡಲು ಘೋಷಣೆ ಮಾಡಿದ್ದಾರೆ. ಪ್ರತೀ ಜಿಲ್ಲೆಯಲ್ಲಿ ಕೂಡ ತಾಂತ್ರಿಕ ಸಲಹಾ ಸಮಿತಿ ನೇಮಕ ಮಾಡಲಾಗಿದೆ. ರಾಜ್ಯದ ಮಾದರಿಯಂತೆ, 30 ಜಿಲ್ಲೆಗಳಲ್ಲಿ ರಚನೆ. ಸೋಂಕಿನ ಪ್ರಮಾಣದ ಆಧಾರದ ಮೇಲೆ ಸಲಹೆ ನೀಡುವುದು.

    ಜನಪ್ರತಿನಿಧಿಗಳಿಂದ ಕೊರೋನಾ ನಿಯಮ ಉಲ್ಲಂಘನೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್, ಆರೋಗ್ಯ ಸಚಿವನಾಗಿ ಮನವಿ ಮಾಡ್ತೇನೆ. ಯಾವುದೇ ರೀತಿಯಲ್ಲಿ ಗುಂಪು ಚಟುವಟಿಕೆ ಮಾಡಬೇಡಿ. ಜನಸಾಮಾನ್ಯರೇ ಆಗಿರಲಿ, ಯಾರೇ ಮಂತ್ರಿ ಆಗಿರಲಿ ಮಾಡಬೇಡಿ. ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಮುಂದೆ ಮತ್ತೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
    Published by:Latha CG
    First published: